ಭಾರತ (India) ಜೋಡಿಸುವ ಯಾತ್ರೆ ನಮ್ಮ ಸೀಮೆಯತ್ತ ಬಂದಾಗ, ನಾನು ಮತ್ತು ಬಾನು ಸ್ವಲ್ಪ ದೂರವಾದರೂ ಜತೆಗೆ ನಡೆಯಬೇಕೆಂದಿದ್ದೇವೆ ಎಂದು ಲೇಖಕ(Author) ರಹಮತ್ ತರೀಕೆರೆ(Rahamat Tarikere statement) ತಿಳಿಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಭಾರತ ಜೋಡಿಸುವ ಯಾತ್ರೆ ನಮ್ಮ ಸೀಮೆಯತ್ತ ಬಂದಾಗ, ನಾನು ಮತ್ತು ಬಾನು ಸ್ವಲ್ಪ(Rahamat Tarikere statement) ದೂರವಾದರೂ ಜತೆಗೆ ನಡೆಯಬೇಕೆಂದಿದ್ದೇವೆ. ಕಾಂಗ್ರೆಸ್ಸಿನ(Congress) ಚರಿತ್ರೆ ಮತ್ತು ವರ್ತಮಾನಗಳಲ್ಲಿರುವ ಲೋಪಗಳ ಅರಿವಿದೆ.
ಆದರೆ ಚಾರಿತ್ರಿಕ ಇಕ್ಕಟ್ಟುಗಳಲ್ಲೇ ನಿರ್ಧಾರಗಳು ಹುಟ್ಟುತ್ತವೆ. ಕಳೆದ ಹಲವು ವರುಷಗಳಿಂದ ಬಿದ್ದಿರುವ ಕೆಂಡದ ಮಳೆಯ ಅನುಭವದಲ್ಲಿ, ಸದ್ಯಕ್ಕೆ ಮತ್ತು ತಕ್ಷಣಕ್ಕೆ ಬೇರೆ ಹಾದಿಯಿಲ್ಲ.
ಚಿತ್ರದಲ್ಲಿ ಜನ ಬಿರುಮಳೆಯಿಂದ ಬಚಾವಾಗಲು ಕುರ್ಚಿ ಎತ್ತಿ ತಲೆಯ ಮೇಲೆ ಇರಿಸಿಕೊಂಡಿದ್ದಾರೆ-ನೆನೆಯುತ್ತೇವೆ ಎಂದು ಗೊತ್ತಿದ್ದರೂ ಎಂದು ರಾಹುಲ್ ಗಾಂಧಿ ಮಳೆಯಲ್ಲಿ ಭಾಷಣ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : https://vijayatimes.com/rahul-gandhi-visits-chammundi-hill/
ಇದಕ್ಕೂ ಮುನ್ನ ರೆಹಮತ್ ತರೀಕೆರೆ ಅವರು, ಅಪರಾಧಗಳ ವಿರುದ್ಧ ಮಾತನಾಡುವವರನ್ನು ಜೈಲಿಗೆ ಹಾಕಲಾಗುತ್ತಿದೆ. ಪತ್ರಕರ್ತರು(Journalist) ಹೋರಾಟಗಾರರನ್ನು ಜೈಲಿಗೆ ಹಾಕಲಾಗುತ್ತಿದೆ.
ಕೊಲೆ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಕಲ್ಬುರ್ಗಿಯಂತಹ ದೊಡ್ಡ ವಿದ್ವಾಂಸವನ್ನು ಕಲ್ಯಾಣ ರಾಜ್ಯದಲ್ಲಿ ಕಳೆದುಕೊಂಡಿದ್ದೇವೆ.
ಕಲ್ಬುರ್ಗಿಯವರ ಧಾರುಣ ಹತ್ಯೆಯಾಗಿ ನೆತ್ತರು ಹರಿಯಿತು. ಭಿನ್ನಮತದವರನ್ನು ಕೊಲ್ಲುತ್ತೇವೆ ಎಂದರೆ. ಪ್ರಭುತ್ವ ಮಾಡುತ್ತಿರುವ ಕೊಲೆ, ಹಲ್ಲೆ, ಜೈಲು – ಹಿಂದೆಯನ್ನು ಮಾಧ್ಯಮಗಳು ಬೆಂಬಲಿಸುತ್ತಿವೆ. ಸಂಭ್ರಮಿಸುತ್ತಿದೆ.
ಇದು ಶೋಚನೀಯ ಸಂಗತಿ. ತಮ್ಮ ವೃತ್ತಿ ಬಂಧವರು ಹಲ್ಲೆಗೆ ಒಳಗಾಗುತ್ತಿದ್ದರೆ ಬರಹಗಾರರು ಪತ್ರಕರ್ತರು ಗಾಬರಿಗೊಳ್ಳಬೇಕು. ಆದರೆ ಒಂದು ವರ್ಗದ ಮಾಧ್ಯಮ ಇದನ್ನು ಸಂಭ್ರಮಿಸುತ್ತಿದೆ.

ಹೀಗಲಾದರೂ ಮಾಧ್ಯಮ ನನ್ನ ನೈತಿಕ ಹೊಣೆಗಾರಿಕೆಯನ್ನು ತೋರಿದರೆ ಪರಿಸ್ಥಿತಿ ಬದಲಾಗಬಹುದು. ಅವರ ಅಜ್ಜ ಜನರಲ್ ಡಯರ್ ವಿರುದ್ಧ ಹೋರಾಡಿದ್ದರು. ಅಂಥವರನ್ನು ಜೈಲಿಗೆ ಹಾಕಲಾಗುತ್ತಿದೆ.
ಪ್ರೇಮದ ಭಾರತವನ್ನು ಕಟ್ಟುವ ಕನಸನ್ನು ನಾವು ನನಸು ಮಾಡಬೇಕಿದೆ. ‘ಬೆಂಕಿ ಹಚ್ಚುತ್ತೇವೆ’ ಎಂಬ ಮಾತನ್ನು ಪದೇ ಪದೇ ಕೇಳುತ್ತಿದ್ದೇವೆ.
ಗುಂಡು ಹೊಡೆಯುತ್ತೇವೆ, ಕಡಿಯುತ್ತೇವೆ ಎನ್ನುತ್ತಿದ್ದಾರೆ. ಸಂವಿಧಾನದ ಪ್ರಕಾರ ಜನಪ್ರತಿನೀಧಿಗಳಾದವರು ಈ ಮಾತುಗಳನ್ನು ಹೇಳುತ್ತಿದ್ದಾರೆ. ಗೂಂಡಾಗಳು ಈ ಮಾತುಗಳನ್ನು ಹೇಳುತ್ತಿದ್ದಾರೆ.
ಇನ್ನೊಂದೆಡೆ ಸಮಾಜ ಸುಧಾಕರ ಪಠ್ಯನ್ನು ಬಿಡಲಾಗುತ್ತಿದೆ. ಬ್ರಾಹ್ಮಣವಾದಿ, ಮತೀಯವಾದಿ ಸಿದ್ಧಾಂತವನ್ನು ಸೇರಿಸಲಾಗುತ್ತದೆ.
ನಮ್ಮ ಮಕ್ಕಳು ಇಂತಹ ಪಠ್ಯಗಳನ್ನು ಓದಿ ಕೂಡಿ ಕಟ್ಟುವ ಭಾರತವನ್ನು ಕಟ್ಟುಲಾಗದು. ನಂಜಿನ ಭಾರತ ನಮ್ಮದ್ದಲ್ಲ. ಕೂಡು ಹೋರಾಟ ಪರಿಕಲ್ಪನೆಯನ್ನು ನಾವು ಮಂಡಿಸಬೇಕಾಗಿದೆ. ಜನರ ಕಡೆ ಹೋಗಬೇಕಾಗಿದೆ. ರೈತರನ್ನು ದೇಶದ್ರೋಹಿಗಳೆಂದು ತುಚ್ಛೀಕರಿಸಲಾಯಿತು. ಮೊಳೆಗಳನ್ನು ಹಾಕಲಾಯಿತು.
ಒಂದು ವರ್ಷ ಕುಳಿತ್ತಿತ್ತು ನಾಗರಿಕ ಸಮಾಜದ ಕರ್ನಾಟಕದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ವಿರೋಧಿ ಹೋರಾಟವೂ ಆಶಾಭಾವನೆಯನ್ನು ಮೂಡಿಸಿದೆ. ಎಲ್ಲ ಮಹನೀಯರ ಚಿಂತನೆಯನ್ನು ಒಳಗೊಂಡಿತ್ತು. ನಮ್ಮ ಸೂಫಿಗಳು, ಶರಣರು, ದಾಸರು ದಾರಿ ಹಾಕಿಕೊಟ್ಟಿದ್ದಾರೆ.

ಆ ದಾರಿಯನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ ಎಂದು ರಾಯಚೂರಿನಲ್ಲಿ ನಡೆದ ಸಮಾವೇಷವೊಂದರಲ್ಲಿ ಬಿಜೆಪಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು.
- ಮಹೇಶ್.ಪಿ.ಎಚ್