Belgaum: ಕುಂದಾನಗರಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ (Mahatma Gandhi), ಡಾ. ಬಿ.ಆರ್. ಅಂಬೇಡ್ಕರ್ (Dr. B.R. Ambedkar) ಅವರ ವಿಚಾರಧಾರೆಗಳನ್ನ ಮುಂದಿಟ್ಟುಕೊಂಡು ‘ಜೈ ಬಾಪು, ಜೈ ಭೀಮ್ (Jai Bapu, Jai Bheem) ಮತ್ತು ಜೈ ಸಂವಿಧಾನ’ ಸಮಾವೇಶವನ್ನು ರಾಜ್ಯ ಕಾಂಗ್ರೆಸ್ (State Congress) ಆಯೋಜಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah), ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (National Congress President Mallikarjun Kharge), ಸಂಸದೆ ಪ್ರಿಯಾಂಕಾ ವಾದ್ರಾ (MP Priyanka Vadra) ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು (Congress leaders) ಭಾಗಿಯಾಗಿದ್ದು, ರಾಹುಲ್ ಗಾಂಧಿ (Rahul Gandhi) ಅವರು ಸಮಾವೇಶಕ್ಕೆ ಗೈರಾಗಿದ್ದಾರೆ.

1924ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ (All India Congress Session) ಬೆಳಗಾವಿ ಸಾಕ್ಷಿಯಾಗಿತ್ತು. ಅದರ ಶತಮಾನೋತ್ಸವದ ನೆನಪಿಗಾಗಿ ‘ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ’ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (KPCC President DK Sivakumar) ಸಮಾವೇಶದ ಉಸ್ತುವಾರಿ ಹೊತ್ತಿದ್ದಾರೆ. ಕಾಂಗ್ರೆಸ್ ನಾಯಕರ ಕಟೌಟು, ಪಕ್ಷದ ಧ್ವಜಗಳಿಂದ ಬೆಳಗಾವಿ ನಗರದ ರಸ್ತೆಗಳು ರಾರಾಜಿಸುತ್ತಿವೆ. ಇನ್ನು ಕಳೆದ ವರ್ಷ ಡಿಸೆಂಬರ್ 26, 27ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ (Former Prime Minister Manmohan Singh) ಅವರ ನಿಧನದ ಕಾರಣದಿಂದಾಗಿ ಸಮಾವೇಶವನ್ನು ಮುಂದೂಡಲಾಗಿತ್ತು.
ರಾಹುಲ್ ಗಾಂಧಿ ಗೈರು: (Rahul Gandhi absent:) ಅನಾರೋಗ್ಯ ಕಾರಣದಿಂದಾಗಿ ಸಂಸದ ರಾಹುಲ್ ಗಾಂಧಿ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಆದರೆ ಸಂಸದೆ ಪ್ರಿಯಾಂಕಾ ಗಾಂಧಿ (MP Priyanka Gandhi)ಬೆಳಗಾವಿಗೆ ಆಗಮಿಸಿದ್ದಾರೆ. ಇದೇ ವೇಳೆ ಅಂದು ಗಾಂಧೀಜಿ ಅವರು ಮಾಡಿದ್ದ ಅಧ್ಯಕ್ಷೀಯ ಭಾಷಣದ ಸಂದೇಶ ಮತ್ತು ‘ಗಾಂಧಿ ಭಾರತ’ (Gandhi Bharat) ಪುಸ್ತಕ ಬಿಡುಗಡೆ ಆಗಲಿದೆ.
ಭಾರೀ ಪೊಲೀಸ್ ಭದ್ರತೆ: ‘ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ’ ಸಮಾವೇಶಕ್ಕೆ ಕಾಂಗ್ರೆಸ್ 2 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿದೆ. ದೇಶ್ಯಾದ್ಯಂತ ಜನಾಂದೋಲನಕ್ಕೆ ಬೆಳಗಾವಿಯಿಂದಲೇ ರಣಕಹಳೆ ಮೊಳಗಿಸುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ (Congress High Command) ಸಜ್ಜಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗಾಗಿ 3,500 ಜನ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ (Commissioner of Police Yada Martin) ತಿಳಿಸಿದ್ದಾರೆ.