ಭಾರತೀಯ ನ್ಯಾಷನಲ್ ಕಾಂಗ್ರೆಸ್(Indian National Congress) ನಾಯಕ ರಾಹುಲ್ ಗಾಂಧಿಗೆ(Rahul Gandhi) ಈ ಹಿಂದೆಯೇ ನ್ಯಾಷನಲ್ ಹೆರಾಲ್ಡ್(National Herald Case) ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ(ED) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.

ಅದರ ಅನುಗುಣವಾಗಿ ಇಂದು ರಾಹುಲ್ ಗಾಂಧಿ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಕಾಂಗ್ರೆಸ್ ನಾಯಕನನ್ನು ಇಡಿ ವಿಚಾರಣೆಗೆ ಕರೆದಿದ್ದನ್ನು ವಿರೋಧಿಸಿ, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಬೆಂಬಲಿಗರು ಬೃಹತ್ ಸಂಖ್ಯೆಯಲ್ಲಿ ಇಡಿ ಕಛೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲೂ ಕೂಡ ಇದೇ ರೀತಿ ಅನೇಕರಿಂದ ಪ್ರತಿಭಟನೆ ನಡೆಯುತ್ತಿದೆ. ನೂರಾರು ಪ್ರತಿಭಟನಕಾರರ ನೂಕುನುಗ್ಗಲು ಮಧ್ಯೆ ರಾಹುಲ್ ಗಾಂಧಿ ಪೊಲೀಸರ ಜೊತೆ ಇಡಿ ಕಛೇರಿ ಪ್ರವೇಶಿಸಿದ್ದಾರೆ. ರಾಹುಲ್ ಗಾಂಧಿಗೆ ಇಡಿ ಸಮನ್ಸ್ ನೀಡಿರುವುದನ್ನು ವಿರೋಧಿಸಿ ದೇಶದ ಹಲವು ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಜೂನ್ 23 ರಂದು ಈ ಪ್ರಕರಣದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಇಡಿ ಮುಂದೆ ಹಾಜರಾಗಬೇಕಾಗಿದೆ. ಭಾರೀ ಭದ್ರತೆಯ ನಡುವೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಂಸದರ ನಿವಾಸದಿಂದ ಕಾಂಗ್ರೆಸ್ ಪ್ರಧಾನ ಕಚೇರಿಗೆ ತೆರಳಿದ್ದಾರೆ. ಈ ಕುರಿತು ಮಾತನಾಡಿರುವ ರಣದೀಪ್(Randeep Surjewala), ‘ಕೈಗೊಂಬೆ ಇಡಿ’ ಕೇಳುವ ಪ್ರತಿ ಪ್ರಶ್ನೆಗೂ ಉತ್ತರಿಸುತ್ತೇವೆ. “ಮೋದಿ ಸರ್ಕಾರವು ದೆಹಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದೆ ಮತ್ತು ಸಾವಿರಾರು ಬ್ಯಾರಿಕೇಡ್‌ಗಳು ಬಂದಿವೆ ಮತ್ತು ಕಳೆದ ರಾತ್ರಿಯಿಂದ ನಮ್ಮ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.

‘ಚುನಾವಣಾ ಇಲಾಖೆ’, ‘ಗೊಂಬೆ ಇಡಿ’ ಕೇಳುವ ಪ್ರತಿಯೊಂದು ಪ್ರಶ್ನೆಗೂ ಉತ್ತರ ನೀಡೇ ನೀಡುತ್ತೇವೆ ಎಂದು ಆಕ್ರೋಶದಿಂದ ಉತ್ತರಿಸಿದ್ದಾರೆ.