BJP and RSS ideologies that confined women to the kitchen: Rahul Gandhi
Dallas: ಅಮೆರಿಕ (America) ಪ್ರವಾಸ ಕೈಗೊಂಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಡಲ್ಲಾಸ್ ಮತ್ತು ಟೆಕ್ಸಾಸ್ ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ವೇಳೆ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಲೋಕಸಭೆ ಚುನಾವಣೆ ಫಲಿತಾಂಶ ನಂತರ ಬಿಜೆಪಿ (BJP) ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಭಾರತೀಯರಲ್ಲಿದ್ದ ಭಯ ಮರೆಯಾಗಿದೆ. ಇತ್ತೀಚೆಗೆ ಎಲ್ಲಾ ಭಾರತೀಯರಲ್ಲಿ ನಿರ್ಭಯತೆಯ ಸಂಕೇತವಾದ ಅಭಯಮುದ್ರೆ ಕಂಡುಬರುತ್ತಿದೆ, ಆದರೆ ಬಿಜೆಪಿಗೆ ಇದನ್ನು ಸಹಿಸಿಕೊಳ್ಳಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಭಾರತೀಯ ಜನತಾ ಪಕ್ಷದ ಮೂಲ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತವನ್ನು ಒಂದು ಕಲ್ಪನೆ ಎಂದು ನಂಬುತ್ತದೆ, ಆದರೆ ನಮ್ಮ ಪಕ್ಷವಾದ ಕಾಂಗ್ರೆಸ್ (Congress) ಭಾರತವು ಅನೇಕ ಕಲ್ಪನೆಗಳ ಬಹುಸಂಖ್ಯೆಯನ್ನು ಹೊಂದಿರುವ ದೇಶ ಎಂದು ಭಾವಿಸುತ್ತದೆ. ಇಲ್ಲಿ ಪ್ರತಿಯೊಬ್ಬರಿಗೂ ಭಾಗವಹಿಸಲು ಅವಕಾಶ ನೀಡಬೇಕು, ಕನಸು ಕಾಣಲು ಅವಕಾಶ ನೀಡಬೇಕು ಮತ್ತು ಅವರ ಜಾತಿ, ಭಾಷೆ, ಧರ್ಮ, ಸಂಪ್ರದಾಯ ಅಥವಾ ಇತಿಹಾಸವನ್ನು ಲೆಕ್ಕಿಸದೆ ಅವಕಾಶ ನೀಡಬೇಕೆಂದು ನಾವು ನಂಬುತ್ತೇವೆ ಎಂದಿದ್ದಾರೆ.
ಭಾರತೀಯ ರಾಜಕೀಯದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಕಾಣೆಯಾಗಿದೆ, ನಾವೆಲ್ಲರೂ ಒಂದು ಎಂಬ ಪರಿಕಲ್ಪನೆ ಇಲ್ಲದಾಗಿದೆ, ಬಿಜೆಪಿ ಮತ್ತು ಆರೆಸ್ಸೆಸ್ (RSS) ಸಿದ್ಧಾಂತಗಳು ಮಹಿಳೆಯರು ಅಡುಗೆ ಮನೆಯಲ್ಲಿ ಇರಬೇಕೆಂದು ಬಯಸುತ್ತದೆ . ಆದರೆ ಮಹಿಳೆಯರು ಯುಕ್ತಿವಂತರು ಹಾಗೂ ಎಲ್ಲೆಡೆ ಸಮಾನ ಮಾನ್ಯತೆ ಹೊಂದಿದವರು.
ಅವರನ್ನು ಗೌರವದಿಂದ ಕಾಣಬೇಕು. ಅಷ್ಟೆ ಅಲ್ಲದೆ ಮುಂದಿನ ದಿನಗಳಲ್ಲಿ ಅಮೇರಿಕಾಕ್ಕೆ ಭಾರತದ ಅಗತ್ಯವಿದೆ ಮತ್ತು ಪ್ರತಿಯಾಗಿ ಭಾರತಕ್ಕೂ ಅಮೆರಿಕದ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ, ಅನಿವಾಸಿ ಭಾರತೀಯರು ಎರಡು ರಾಷ್ಟ್ರಗಳ ನಡುವೆ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Rahul Gandhi Attacks BJP-RSS During US Visit
Dallas: Lok Sabha Leader of Opposition Rahul Gandhi, who has toured America, attacked BJP and RSS while addressing non-resident Indians in Dallas and Texas. After the results of Lok Sabha elections, there was fear among Indians about BJP and Prime Minister Narendra Modi. is hidden. Abhaya Mudra, a symbol of fearlessness is seen among all Indians lately, but the BJP is unable to tolerate or understand it, sparks.
Rashtriya Swayamsevak Sangh, the parent organization of the Bharatiya Janata Party, believes that India is an idea, while our party, the Congress, thinks that India is a country with a plurality of ideas. Everyone should be allowed to participate here. We believe that one should be allowed to dream and should be allowed regardless of their caste, language, religion, tradition or history.
Love, respect and modesty are missing in Indian politics, the concept that we are all one, BJP and RSS ideologies want women to be in the kitchen. But women are competent and have equal recognition everywhere.
They should be treated with respect. Apart from this, Rahul Gandhi asserted that America needs India in the near future and India needs America in return, expressing his opinion that non-resident Indians will act as a bridge between the two nations.