MadhyaPradesh : ಭಾರತ್ ಜೋಡೋ ಯಾತ್ರೆಯಲ್ಲಿ ಸಾಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi Cycle Yatra),
ಮಧ್ಯಪ್ರದೇಶದ ಮೊವ್‌ನಲ್ಲಿ ಬೈಕ್ ಸವಾರಿ ಮಾಡಿದ ಒಂದು ದಿನದ ಬಳಿಕ, ಸೋಮವಾರ ಇಂದೋರ್‌ನಲ್ಲಿ ಸೈಕಲ್ ಸವಾರಿ ಮಾಡುತ್ತ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆಗಿದ್ದು, ವೀಡಿಯೋದಲ್ಲಿ ರಾಹುಲ್ ಗಾಂಧಿ ಸೈಕಲ್ ತುಳಿಯುತ್ತ ಬರುವ ಸಮಯದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹೂವಿನ ಮೂಲಕ ಸ್ವಾಗತಿಸಿದ್ದಾರೆ.
ಬಿಗಿ ಭದ್ರತೆಯ ನಡುವೆ ಆಗಮಿಸಿದ ರಾಹುಲ್ ಗಾಂಧಿಗೆ ಪಕ್ಷದ (Rahul Gandhi Cycle Yatra) ಕಾರ್ಯಕರ್ತರು ಯಾತ್ರೆಗೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ : https://vijayatimes.com/congress-straight-allegation/
ಯಾತ್ರೆಯ ಮಧ್ಯೆ ರಾಹುಲ್ ಗಾಂಧಿ ಫುಟ್‌ಬಾಲ್ ಆಡುವುದು, ಬುಡಕಟ್ಟು ಜನಾಂಗದವರ ಜೊತೆ ಸೇರಿ ನೃತ್ಯ ಮಾಡುವುದು, ಗಣ್ಯರ ಜೊತೆ ಯಾತ್ರೆಯಲ್ಲಿ ಸಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಭಾರತ್ ಜೋಡೋ ಯಾತ್ರೆಯ ಮೂಲಕ ಆಯಾ ರಾಜ್ಯದ ಸ್ಥಳೀಯರೊಂದಿಗೆ ಸಮಸ್ಯೆಗಳ ಪಟ್ಟಿ ಪಡೆದು, ಸ್ಥಳೀಯರೊಡನೆ ಸಮಸ್ಯೆಗಳನ್ನು ಚರ್ಚಿಸುವ ಕೆಲಸ ಈ ಯಾತ್ರೆಯ ಮುಖ್ಯ ಉದ್ದೇಶವಾಗಿದೆ.
https://youtu.be/F91wdGXU0Ic ಕೆಂಗೇರಿ ಮುಖ್ಯ ರಸ್ತಯೇ ಈಗ ಕಸ ಎಸೆಯೋ ಸ್ಥಳ!
ಭಾರತ್ ಜೋಡೋ ಯಾತ್ರೆ ಸಂಗೀತ ಕಛೇರಿ ಚಿಮನ್‌ಬಾಗ್ ಮೈದಾನದಲ್ಲಿ ಆರಂಭವಾಗಿ, ಇಂದು 82ನೇ ದಿನವಾದ ಸೋಮವಾರ ಬೆಳಗ್ಗೆ ಇಂದೋರ್‌ನ ಬಡಾ ಗಣಪತಿ ಚೌರಾಹಾದಿಂದ ರಾಹುಲ್ ಗಾಂಧಿ ನೇತೃತ್ವದದಲ್ಲಿ ಭರದಿಂದ ಸಾಗುತ್ತಿದೆ.
ಪ್ರಸ್ತುತ, ಮಧ್ಯಪ್ರದೇಶ ರಾಜ್ಯದಲ್ಲಿ, ಗ್ರ್ಯಾಂಡ್ ಓಲ್ಡ್ ಪಾರ್ಟಿಯ ಐದು ತಿಂಗಳ,
3500-ಕಿಲೋಮೀಟರ್ ಉದ್ದದ ಭಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ-ಕಾಶ್ಮೀರದವರೆಗೆ ಚುನಾವಣೆಯ ಸಲುವಾಗಿ ಮತ ಭಾಂದವರೊಡನೆ ಉತ್ತಮ ಸಂಪರ್ಕಗಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.