Politics : ಮಕ್ಕಳು, ವೃದ್ಧರು, ಬಡವ ಬಲ್ಲಿದರು ಸೇರಿದಂತೆ ಪ್ರತಿಯೊಬ್ಬರೂ ಭಾರತ ಐಕ್ಯತಾ ಯಾತ್ರೆಗೆ ಸಮರೋಪಾಧಿಯಲ್ಲಿ ಬಂದು ಬೆಂಬಲಿಸುತ್ತಿದ್ದಾರೆ.
ಸೋಲು,ಗೆಲುವು ಏನೇ ಇರಲಿ, ಆದರೆ ಕಾಂಗ್ರೆಸ್ (Congress) ಈ ದೇಶದ ಪರಂಪರೆಯೊಂದಿಗೆ ಮಿಳಿತಗೊಂಡಿದೆ. ಭಾರತೀಯರ ಎದೆಯೊಳಗೆ ಸೇರಿಕೊಂಡಿದೆ ಎಂದು ರಾಜ್ಯ ಕಾಂಗ್ರೆಸ್ (State Congress) ಹೇಳಿದೆ.

ಬೊಮ್ಮಗೊಂಡನಹಳ್ಳಿಯಿಂದ ಕೋನಸಾಗರದೆಡೆಗೆ ಸಾಗುತ್ತಿರುವ “ಭಾರತ್ ಜೋಡೋ” ಯಾತ್ರೆಯ (Bharat Jodo Yatra) ಕುರಿತು ಟ್ವೀಟ್ (Tweet) ಮಾಡಿರುವ ರಾಜ್ಯ ಕಾಂಗ್ರೆಸ್,
ಗಡಿಯಲ್ಲಿ ದೇಶದ ಸೇವೆ ಮಾಡಿದ ಸೈನಿಕರು ನಿವೃತ್ತಿಯ ನಂತರ ದೇಶದ ಕಟ್ಟುವ ಕೆಲಸ ಬಂದಾಗ ಸುಮ್ಮನಿರಲು ಸಾಧ್ಯವೇ? https://youtu.be/qkng22pUTvE
ಭಾರತ ಒಗ್ಗೂಡಿಸುವ ಈ ಮಹಾನ್ ಕಾರ್ಯದಲ್ಲಿ ಅವರೂ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಭಾರತ ಐಕ್ಯತಾ ಯಾತ್ರೆಯಲ್ಲಿ ನಿವೃತ್ತ ಸೈನಿಕರೂ ರಾಹುಲ್ ಗಾಂಧಿ (Rahul Gandhi is inspiring says congress) ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.
2 ಕೋಟಿ ಉದ್ಯೋಗ ಸೃಷ್ಟಿ ಕೇವಲ ಭರವಸೆಯಾಗಿಯೇ ಉಳಿಯಿತು.
ಇದನ್ನೂ ಓದಿ : https://vijayatimes.com/political-leaders-about-hijab-verdict/
ನಿಮ್ಮ’ಮನದ ಮಾತು’ ಕೇಳಿ ಸಾಕಾಗಿದೆ. ನಮ್ಮ ಮಾತನ್ನೂ ಕೇಳಿ ‘ಭರವಸೆ ಸಾಕು-ಉದ್ಯೋಗ ಬೇಕು’ ಎನ್ನುತ್ತಾ ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ ನಿರುದ್ಯೋಗಿ ಯುವಕರು ಎಂದಿದೆ.
ಇನ್ನು ತಲೆಯೆತ್ತಿ ನಡೆಯುವವನು ಪುರುಷ, ತಲೆಬಾಗಿ ನಡೆಯುವವನು ಆದರ್ಶ ಪುರುಷ.

ಎಲ್ಲರೂ ತನ್ನಂತೆಯೇ ಎಂದು ಅರಿತು ಮುನ್ನಡೆಯುವವ ನಿಜವಾದ ನಾಯಕ. ಮಕ್ಕಳೇ ಈ ದೇಶದ ಭವಿಷ್ಯ, ಅವರ ಉತ್ತಮ ಭವಿಷ್ಯ ಈಗಿನ ನಮ್ಮ ಹೋರಾಟದಲ್ಲಿ ಅಡಗಿದೆ. ಈ ಮಕ್ಕಳ ಭವಿಷ್ಯಕ್ಕಾಗಿ,
ಈ ದೇಶದ ಭವಿಷ್ಯಕ್ಕಾಗಿ, ಭಾರತ ಐಕ್ಯತಾ ಯಾತ್ರೆ. ಆ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗುತ್ತಿರುವವರು ನಮ್ಮ ನಾಯಕ ರಾಹುಲ್ ಗಾಂಧಿ (Rahul Gandhi is inspiring says congress) ಎಂದಿದೆ.
ಇದನ್ನೂ ಓದಿ : https://vijayatimes.com/bjp-mla-warns-about-love-jihad/
ಒಮ್ಮೆ ಬಿರುಗಾಳಿ, ಮತ್ತೊಮ್ಮೆ ಮಳೆ. ಕೆಲವೊಮ್ಮೆ ಪ್ರವಾಹ, ಮತ್ತೆ ನೆರಳು. ಏನೇ ಎದುರಾದರೂ ನಮ್ಮ ಕಾಲುಗಳು ನಿಲ್ಲುವುದಿಲ್ಲ ಎಂದು ಕಾವ್ಯಾತ್ಮಕವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
- ಮಹೇಶ್.ಪಿ.ಎಚ್