ಕಾಂಗ್ರೆಸ್(Congress) ನಾಯಕ(Leader) ರಾಹುಲ್ ಗಾಂಧಿ(Rahul Gandhi) ಬಿಜೆಪಿ ಸರ್ಕಾರದ(BJP Govt) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೌದು, ದೆಹಲಿಯಲ್ಲಿ ಮಾತನಾಡಿದ ಅವರು, ದೆಹಲ್ಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ “ಸಂವಿಧಾನವನ್ನು ರಕ್ಷಿಸಬೇಕು, ಸಂವಿಧಾನವನ್ನು ಉಳಿಸಲು, ನಾವು ನಮ್ಮ ಸಂಸ್ಥೆಗಳನ್ನು ರಕ್ಷಿಸಬೇಕು. ಆದರೆ ಎಲ್ಲಾ ಸಂಸ್ಥೆಗಳು ಆರ್‌ಎಸ್‌ಎಸ್(RSS) ಕೈಯಲ್ಲಿವೆ. ಇದರೊಂದಿಗೆ ಸಂಸ್ಥೆ ಇಲ್ಲದೆ ಸಂವಿಧಾನಕ್ಕೆ ಅರ್ಥವಿಲ್ಲ ಎಂದರು.

ಒಮ್ಮೆ ನಾನು ಬಿಜೆಪಿ ನಾಯಕರೊಬ್ಬರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇದೆಯೇ ಎಂದು ಕೇಳಿದ್ದೆ! ಇಲ್ಲದಿದ್ದರೆ, ರಾಮನನ್ನು ಹೇಗೆ ನಂಬುವುದು? ‘ನನಗೆ ಅಧಿಕಾರದ ಹಸಿವಿಲ್ಲ’ ಅಧಿಕಾರದ ಹುಡುಕಾಟದಲ್ಲಿರುವ ರಾಜಕಾರಣಿಗಳಿದ್ದಾರೆ. ಅವರು ಸಾರ್ವಕಾಲಿಕ ಅಧಿಕಾರವನ್ನು ಪಡೆಯಲು ಯೋಚಿಸುತ್ತಾರೆ. ನಾನು ಅಧಿಕಾರದ ಕೇಂದ್ರದಲ್ಲಿ ಹುಟ್ಟಿದ್ದೇನೆ ಆದರೆ ಪ್ರಾಮಾಣಿಕವಾಗಿ ಮಾತ್ರ, ನನಗೆ ಅದರಲ್ಲಿ ಅಗತ್ಯ ಆಸಕ್ತಿ ಇಲ್ಲ. ಬದಲಿಗೆ, ನಾನು ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ದೇಶವನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಬಯಸುತ್ತೇನೆ.
We have to protect the Constitution. To save the Constitution, we have to protect our institutions. But all the institutions are in the hands of RSS: Congress leader Rahul Gandhi at a book launch event in Delhi pic.twitter.com/xrxciVazBu
— ANI (@ANI) April 9, 2022
ಅಧಿಕಾರ ದಕ್ಕಿಸಿಕೊಳ್ಳುವುದು ಉದ್ದೇಶವಲ್ಲ, ಜನರ ಬಗ್ಗೆ ತಿಳಿದುಕೊಳ್ಳುವುದು ಮತ್ತು ಜನರ ಸಮಸ್ಯೆಗಳನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳುವುದು ನನ್ನ ಪ್ರಯತ್ನವಾಗಿದೆ ಎಂದು ಹೇಳಿದರು. ನಾವು ನಮ್ಮ ಸಂವಿಧಾನವನ್ನು ರಕ್ಷಿಸಬೇಕು. ಸಂವಿಧಾನವನ್ನು ರಕ್ಷಣೆ ಮಾಡುವ ಉದ್ದೇಶ ನಮ್ಮದಾದರೂ ನಮಗೆ ಕಷ್ಟವಿದೆ. ಸಂವಿಧಾನ ರಕ್ಷಣೆ ಮಾಡಬೇಕು ಎಂದ್ರೆ ಮೊದಲು ಸಂಸ್ಥೆಗಳನ್ನು ರಕ್ಷಿಸಿಕೊಳ್ಳಬೇಕು. ಆದ್ರೆ ಎಲ್ಲಾ ಸಂಸ್ಥೆಗಳು ಆರ್.ಎಸ್.ಎಸ್ ಕೈಯಲ್ಲಿದೆ ಏನು ಮಾಡೋದು? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು.