Bhopal : ‘ತಪಸ್ಸು’ ಮಾಡುವವರು ಮೋದಿ ಸರ್ಕಾರದಿಂದ ಏನನ್ನೂ ಪಡೆಯುವುದಿಲ್ಲ, ಆದರೆ ಇಬ್ಬರು ಮಾತ್ರ ಪ್ರಧಾನಿ ಮೋದಿಯನ್ನು (Rahul Gandhi Sarcasam) ಇಡೀ ದಿನ ಪೂಜಿಸುತ್ತಾರೆ,
ಮತ್ತು ಅವರು ಬಯಸಿದ್ದನ್ನು ಪಡೆಯುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ (Rahul Gandhi Sarcasam) ಗಾಂಧಿ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮಧ್ಯಪ್ರದೇಶದ (MadhyaPradesh) ಉಜ್ಜಯಿನಿಯಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತಪಸ್ಸು ಮಾಡುವವರು ಮೋದಿ ಸರ್ಕಾರದಿಂದ ಏನನ್ನೂ ಪಡೆಯುವುದಿಲ್ಲ.
ಇಬ್ಬರು ಜನರು ಪ್ರಧಾನಿ ಮೋದಿಯನ್ನು ದಿನವಿಡೀ ಪೂಜಿಸುತ್ತಾರೆ ಮತ್ತು ಅವರು ಬಯಸಿದ್ದನ್ನು ಪಡೆಯುತ್ತಾರೆ ಎಂದು ರಾಹುಲ್ ಗಾಂಧಿ ಪರೋಕ್ಷವಾಗಿ ಅಂಬಾನಿ ಮತ್ತು ಅದಾನಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.
https://fb.watch/h5G-if5P6z/ ಬಸವೇಶ್ವರ ನಗರ : ವೃದ್ಧರ ಪಿಂಚಣಿಯನ್ನು ಕಿತ್ತು ತಿನ್ನುವ ಬ್ರೋಕರ್ಗಳು!
ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ರಸ್ತೆಗಳು ಮತ್ತು ವಿದ್ಯುತ್ ಎಲ್ಲವನ್ನೂ ದೇಶದಲ್ಲಿ ಕೇವಲ ಇಬ್ಬರಿಗೆ ಮಾತ್ರ ಲಭ್ಯವಾಗುವಂತೆ ಮಾಡಲಾಗುತ್ತಿದೆ.
ಭಾರತದ ಎಲ್ಲಾ ಸಂಪತ್ತನ್ನು ಅವರಿಗೆ ಹಸ್ತಾಂತರಿಸಲಾಗಿದೆ. ಬಿಜೆಪಿ ಸರ್ಕಾರವು (BJP Governmemnt) ಕಾರ್ಮಿಕರು, ರೈತರು ಮತ್ತು ಸಣ್ಣ ಉದ್ಯಮಿಗಳಂತಹ ಕಷ್ಟಪಟ್ಟು ದುಡಿಯುವವರನ್ನು ಅಗೌರವಿಸುತ್ತದೆ ಎಂದು ಟೀಕಿಸಿದರು.

ಭಗವದ್ಗೀತೆಯಲ್ಲಿ ‘ತಪಸ್ಸು’ ಮಾಡಬೇಕು ಮತ್ತು ‘ಫಲ್’ (ಫಲಿತಾಂಶ) ಬಗ್ಗೆ ಚಿಂತಿಸಬಾರದು ಎಂದು ಬರೆಯಲಾಗಿದೆ. ಸರಕಾರ ನಿಜವಾದ ‘ತಪಸ್ವಿಗಳಿಗೆ ‘ಫಲ್’ ಕೊಡಬೇಕು. ಆದರೆ ಮೋದಿ ಸರ್ಕಾರ ಕೊಡುವುದಿಲ್ಲ.
ಮುಂಜಾನೆಯಿಂದಲೇ ‘ತಪಸ್ಸುʼ ಮಾಡುವ ಬಡವರಿಂದ ಪಡೆದುಕೊಳ್ಳಿ, ಶ್ರೀಮಂತರಿಗೆ ಕೊಡಿ ಎಂಬ ನೀತಿಗಳಿಂದಾಗಿ ಬಿಜೆಪಿ ಬಡವರನ್ನು ಕಾಡುತ್ತಿದೆ.
ಇದನ್ನೂ ಓದಿ : https://vijayatimes.com/5-years-rigorous-imprisonment/
ಹಣದುಬ್ಬರ, ಏರುತ್ತಿರುವ ಇಂಧನ ಬೆಲೆಗಳು ಮತ್ತು ನಿರುದ್ಯೋಗದ ವಿಷಯಗಳ ಬಗ್ಗೆ ಮೋದಿ ಎಂದಿಗೂ ಮಾತನಾಡುವುದಿಲ್ಲ. ಮೋದಿ ಸರ್ಕಾರ ಸಮಾಜದ ಎಲ್ಲ ವರ್ಗಗಳನ್ನು ಸಂಕಷ್ಟಕ್ಕೆ ದೂಡಿದೆ.
ಮೋದಿ ಸರ್ಕಾರ ಕೇವಲ ಶ್ರೀಮಂತರ ಸರ್ಕಾರ ಎಂದು ರಾಹುಲ್ ಗಾಂಧಿ (Rahul Gandhi) ಟೀಕಿಸಿದರು.
- ಮಹೇಶ್.ಪಿ.ಎಚ್