ಬೆಂಗಳೂರು : 52 ವರ್ಷಗಳಿಂದ ತ್ರಿವರ್ಣ ಧ್ವಜ ಹಾರಿಸದವರು “ಹರ್ ಘರ್ ತಿರಂಗ”(Har Ghar Thiranga) ಅಭಿಯಾನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಆರ್‍ಎಸ್‍ಎಸ್(RSS) ಅನ್ನು ಪರೋಕ್ಷವಾಗಿ ಉಲ್ಲೇಖಿಸಿ, ಬಿಜೆಪಿಗೆ(BJP) ಟಾಂಗ್ ನೀಡಿದ್ದಾರೆ.
ಹುಬ್ಬಳ್ಳಿ(Hubbali) ಜಿಲ್ಲೆಯಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರ ಭೇಟಿ ನೀಡಿರುವ ಪೋಟೋಗಳನ್ನು ಪೋಸ್ಟ್ ಮಾಡಿ, ಬರೆದುಕೊಂಡಿರುವ ಅವರು, “ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗದಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ನೇಯ್ಗೆ ಮಾಡುವ ಎಲ್ಲ ಕಾರ್ಮಿಕರನ್ನು ಭೇಟಿಯಾಗಿದ್ದು, ತುಂಬಾ ಸಂತೋಷವಾಯಿತು. ತ್ರಿವರ್ಣ ಧ್ವಜವನ್ನು ಯಾವಾಗಲೂ ಎತ್ತರದಲ್ಲಿಡಲು ಲಕ್ಷಾಂತರ ದೇಶವಾಸಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ಆದರೆ ಒಂದು ಸಂಸ್ಥೆ ಯಾವಾಗಲೂ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಳ್ಳಲು ನಿರಾಕರಿಸಿತು.
52 ವರ್ಷಗಳ ಕಾಲ ನಾಗ್ಪುರದ(Nagpur) ಪ್ರಧಾನ ಕಛೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ ಮತ್ತು ಅದನ್ನು ನಿರಂತರವಾಗಿ ಅವಮಾನಿಸಿದರು. ಆದರೆ ಇಂದು, ಅದೇ ಸಂಘಟನೆಯಿಂದ ಹೊರಬರುವ ಜನರು ತ್ರಿವರ್ಣ ಧ್ವಜದ ಇತಿಹಾಸವನ್ನು ಹೇಳುತ್ತಿದ್ದಾರೆ ಮತ್ತು ‘ಹರ್ ಘರ್ ತ್ರಿವರ್ಣ’ ಅಭಿಯಾನವನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಬಿಜೆಪಿ-ಆರ್ಎಸ್ಎಸ್(BJP-RSS) ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಆರ್ಎಸ್ಎಸ್ ತನ್ನ ಕೇಂದ್ರ ಕಚೇರಿಯಲ್ಲಿ 52 ವರ್ಷಗಳಿಂದ ತ್ರಿವರ್ಣ ಧ್ವಜವನ್ನು ಏಕೆ ಹಾರಿಸಲಿಲ್ಲ? ಖಾದಿಯಿಂದ ರಾಷ್ಟ್ರಧ್ವಜವನ್ನು ತಯಾರಿಸುವವರ ಜೀವನ ಏಕೆ ನಾಶವಾಗುತ್ತಿದೆ?
ಯಂತ್ರದಿಂದ ತಯಾರಿಸಿದ ಪಾಲಿಯೆಸ್ಟರ್ ಧ್ವಜಗಳನ್ನು ಏಕೆ ಆಮದು ಮಾಡಿಕೊಳ್ಳಲಾಗುತ್ತಿದೆ ? ಚೀನಾದಿಂದ ಧ್ವಜಗಳನ್ನು ಆಮದು ಮಾಡಿಕೊಳ್ಳಲು ಅನುಮತಿಸಲಾಗಿದೆಯೇ? ಎಂದು ಪ್ರಶ್ನಿಸಿದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಅವರು ತಮ್ಮ ಟ್ವೀಟರ್ ಪ್ರೊಫೈಲ್ಗೆ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು(Jawaharlal Nehru) ಅವರು ರಾಷ್ಟ್ರಧ್ವಜ(National Flag) ಹಿಡಿದಿರುವಂತ ಚಿತ್ರವನ್ನು ಹಾಕಿದ್ದಾರೆ. “ದೇಶದ ಹೆಮ್ಮೆ ನಮ್ಮ ತ್ರಿವರ್ಣ. ನಮ್ಮ ತ್ರಿವರ್ಣ ಧ್ವಜವು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿದೆ” ಎಂದು ಟ್ವೀಟ್ ಮಾಡಿದ್ದಾರೆ.