ಇಂದು ಕೇಂದ್ರ ಬಜೆಟ್ ಮಂಡನೆಯನ್ನು ಯಶಸ್ವಿಯಾಗಿ ಪ್ರಕಟಿಸಿದ್ದು, ಎಲ್ಲಾ ವರ್ಗಗಳಿಗೂ ವಿಶೇಷ ರೀತಿಯ ಸೌಕರ್ಯ, ಸೌಲಭ್ಯಗಳನ್ನು ದೊರಕಿಸಿ ಕೊಡುವ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಹೊಸ ಯೋಜನೆಗಳಿಗೂ ಚಾಲನೆ ನೀಡುವ ಮಾದರಿಯನ್ನು ಪ್ರಕಟ ಮಾಡಿದ್ದು, ಕೃಷಿ, ಪಿಂಚಣಿ, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಕೆ, ವಿಶೇಷ ಚೇತನರಿಗೆ ವಿಮೆ, ಡಿಜಿಟಲ್ ಕರೆನ್ಸಿ ಸೇರಿದಂತೆ ಅನೇಕ ವಲಯಗಳಿಗೆ ಸಹಾಯವಾಗುವಂತೆ ಬಜೆಟ್ ಮಂಡನೆ ಮಾಡಿದೆ ಕೇಂದ್ರ ಸರ್ಕಾರ.
ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಜೆಟ್ ಕುರಿತು ಹೇಳಿಕೆ ನೀಡಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 39.45 ಲಕ್ಷ ಕೋಟಿ ರೂಪಾಯಿಯಷ್ಟು ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಆದರೆ ಇದೊಂದು ಮಧ್ಯಮ ವರ್ಗ ವಿರೋಧಿಸುವಂತ ಬಜೆಟ್! ಇದಕ್ಕೆ ನನ್ನದೊಂದು ಧಿಕ್ಕಾರವಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ ಕೆಲವೇ ಗಂಟೆಗಳ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಸರ್ಕಾರ ಶೂನ್ಯ ಸರ್ಕಾರ ಶೂನ್ಯ ಬಜೆಟ್ ಎಂದು ಹೇಳಿದ್ದಾರೆ.
ಬಡ ಕುಟುಂಬಗಳಿಗೆ, ಬಡವರ್ಗದವರಿಗೆ, ವೇತನವರ್ಗದವರಿಗೆ, ಮಧ್ಯಮವರ್ಗದವರಿಗೆ, ಯುವಜನತೆಗೆ, ಶ್ರಮಿಸುವ ರೈತರಿಗೆ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಇವರ ಬಜೆಟ್ ನಿಂದ ಏನೂ ದೊರೆತಿಲ್ಲ! ಎಲ್ಲಾ ಶೂನ್ಯ. ಇದೆಲ್ಲದಕ್ಕೂ ಮೋದಿ ಸರ್ಕಾರ ನೇರ ಹೊಣೆ. ಮೋದಿ ಸರ್ಕಾರ ಮತ್ತು ಇಂದಿನ ಬಜೆಟ್ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.