Visit Channel

‘ಗಬ್ಬರ್ ಸಿಂಗ್ ಟ್ಯಾಕ್ಸ್’ ಈಗ ‘ಗೃಹಸ್ಥ ಸರ್ವನಾಶ ಟ್ಯಾಕ್ಸ್’ : ರಾಹುಲ್‍ ಗಾಂಧಿ

Narendra Modi

ಆದಾಯ(Tax) ಮತ್ತು ಉದ್ಯೋಗ ಕುಸಿತ, ಇದರ ಜೊತೆಗೆ ಬೆಲೆ ಏರಿಕೆಯ ಪ್ರಹಾರ. ಪ್ರಧಾನ ಮಂತ್ರಿಗಳ(PrimeMinister) ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಈಗ ‘ಗೃಹಸ್ಥ ಸರ್ವನಾಶ ಟ್ಯಾಕ್ಸ್’ನ ಭೀಕರ ರೂಪವನ್ನು ಪಡೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಟ್ವೀಟ್(Rahul Gandhi tweet over modi) ಮಾಡಿ ಟೀಕಿಸಿದ್ದಾರೆ.


ಇನ್ನು ಜಿಎಸ್‌ಟಿ(GST) ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಅಕ್ಷರಶಃ ಗಬ್ಬರ್‌ನಂತೆಯೇ ಜನರ ದರೋಡೆಗಿಳಿದಿದೆ ಬಿಜೆಪಿ ಸರ್ಕಾರ(BJP Govt).

Rahul Gandhi tweet over modi

ದೈನಂದಿನ ಬಳಕೆಯ ವಸ್ತುಗಳು, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿರುವ ಬೆನ್ನಲ್ಲೇ ಜಿಎಸ್‌ಟಿ ತೆರಿಗೆಯನ್ನೂ ಏರಿಸಿದ್ದು ಜನವಿರೋಧಿ ನಡೆ. ಸಿರಿವಂತ ಉದ್ಯಮಿಗಳನ್ನು ಬಿಟ್ಟು ಬಡ, ಮಧ್ಯಮ ವರ್ಗದ ಜನತೆ ಬದುಕಬಾರದೆಂದು ಬಿಜೆಪಿ ತೀರ್ಮಾನಿಸಿದಂತಿದೆ ಎಂದು ರಾಜ್ಯ ಕೆಪಿಸಿಸಿ ವಕ್ತಾರ ರಮೇಶ್ ಬಾಬು(Ramesh Babu) ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ೪೦% ಕಮಿಷನ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು.

ಗೃಹ ಇಲಾಖೆ ಮೂಲಕ ಗುತ್ತಿಗೆದಾರರ ಸಂಘವನ್ನು ಹೆದರಿಸುವ ಪ್ರಯತ್ನ ನಿಲ್ಲಿಸಬೇಕು. ೪೦% ಕಮಿಷನ್ ಸಂಬಂಧ ದೂರು ನೀಡಿದ ಗುತ್ತಿಗೆದಾರರು, ಗುತ್ತಿಗೆದಾರರ ಸಂಘಕ್ಕೆ ರಕ್ಷಣೆ ನೀಡಬೇಕು. ಬಿಜೆಪಿ ಸರ್ಕಾರ ೪೦% ಕಮಿಷನ್ ಬಗ್ಗೆ ದೂರು ಕೊಟ್ಟ ಗುತ್ತಿಗೆದಾರರನ್ನು ಮುಗಿಸುವ ಕೆಲಸ ಮಾಡುತ್ತಿದೆ.

ಸಂಘದ ಸದಸ್ಯರ ಗುತ್ತಿಗೆ ತಪ್ಪಿಸಲಾಗುತ್ತಿದೆ, ಕೆಲಸ ಮಾಡಿದವರ ಬಿಲ್ ಪಾವತಿ ತಡೆಹಿಡಿಯುತ್ತಿದೆ. ಕೇಂದ್ರ ಗೃಹ ಇಲಾಖೆ ಗುತ್ತಿಗೆದಾರರ ಸಂಘಕ್ಕೆ ನೋಟಿಸ್ ನೀಡದೇ ಗೌಪ್ಯವಾಗಿ ಭೇಟಿಯಾಗಲು ಯತ್ನಿಸಿದೆ ಎಂದು ಆರೋಪಿಸಿದ್ದಾರೆ.

Rahul tweet over modi


ಇನ್ನೊಂದೆಡೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಅಗತ್ಯ ವಸ್ತುಗಳ ಮೇಲೆ ಶೇ.೫ ರಷ್ಟು ಜಿಎಸ್‌ಟಿ ವಿಧಿಸಿರುವುದನ್ನು ವಿರೋಧಿಸಿರುವ ಕಾಂಗ್ರೆಸ್ ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, ಕೇಂದ್ರ ಬಿಜೆಪಿ ಸರ್ಕಾರದ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನೀಡಿದೆ. https://vijayatimes.com/hdk-tweets-over-kannaiah-death/

ಮಾಂಸ, ಮೊಸರು, ತುಪ್ಪ, ಗೋಧಿ ಹಿಟ್ಟು ಮುಂತಾದ ಅಗತ್ಯ ಆಹಾರಗಳ ಜೊತೆಗೆ ಸಾವಯವ ಗೊಬ್ಬರದ ಮೇಲೂ ೫% ಜಿಎಸ್‌ಟಿ ಹೇರಿಕೆ. ಬೆಲೆ ಏರಿಕೆಯಿಂದ ಬಡ, ಮಧ್ಯಮ ವರ್ಗ, ರೈತರನ್ನು ಮುಗಿಸಲು ಹೊರಟಿರುವ ಮೋದಿ ಸರ್ಕಾರ. ಅಚ್ಛೇದಿನ್ ಹೆಸರಲ್ಲಿ ಬಡಜನರ ಬದುಕನ್ನು ಬರ್ಬರ ಮಾಡಿದ ಬಿಜೆಪಿ.

ಕೋಮು ಕಲಹ ಹಚ್ಚಲು ನಾ ಮುಂದು, ತಾ ಮುಂದು ಎಂದು ಓಡೋಡಿ ಬರುವ ಬಿಜೆಪಿ ನಾಯಕರು ಹಿಂದುಗಳನ್ನೂ ಸೇರಿ ಎಲ್ಲರನ್ನೂ ಕಾಡುತ್ತಿರುವ ಬೆಲೆ ಏರಿಕೆ ಬಗ್ಗೆ ಮಾತ್ರ ದಿವ್ಯ ಮೌನ.

ಆಹಾರ ಸಾಮಗ್ರಿಗಳ ಬೆಲೆ ಈ ವೇಗದಲ್ಲಿ ಏರಿಕೆ ಕಂಡರೆ ಜನ ಬದುಕುವುದು ಹೇಗೆ ಎಂಬ ಕಿಂಚಿತ್ ಅರಿವು ಬಿಜೆಪಿ ಸರ್ಕಾರಕ್ಕಿಲ್ಲ. ಜನತೆಗೆ ಇನ್ನಷ್ಟು ಭೀಕರ ದಿನಗಳು ಎದುರಾಗಲಿವೆ ಎಂದಿದೆ.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.