Visit Channel

ಸತ್ಯಾಗ್ರಹ ದುರಂಹಕಾರ ಧೋರಣೆಯನ್ನು ಸೋಲಿಸಿದೆ – ರಾಹುಲ್‌ ಗಾಂಧಿ

congress

ನವದೆಹಲಿ ನ 19 : ಕಳೆದ ವರ್ಷ ಜಾರಿಗೆ ತಂದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಪ್ರಧಾನಿಯ ನಡೆಯನ್ನು ಉಲ್ಲೇಖಿಸಿ ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರ ಸತ್ಯಾಗ್ರಹ ದುರಂಹಕಾರ ಧೋರಣೆಯನ್ನು ಸೋಲಿಸಿದೆ ಎಂದು ತಿಳಿಸಿದ್ದಾರೆ.

ಗುರುನಾನಕ್ ಜಯಂತಿಯಂದೇ ಪ್ರಧಾನಿ ಮೋದಿ ಕೃಷಿ ಕಾಯ್ದೆಗಳ ರದ್ದತಿ ಘೋಷಣೆ ಮಾಡಿದ್ದಾರೆ. ರೈತರು ಕಳೆದ ಒಂದು ವರ್ಷದಿಂದ ಕೋವಿಡ್ ಸಾಂಕ್ರಾಮಿಕದ ಮಧ್ಯೆ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಇತರ ನಾಯಕರು ಕೂಡ ರೈತರನ್ನು ಅಭಿನಂದಿಸಿ ಟ್ವಿಟ್ ಮಾಡುವುದರ ಜೊತೆಗೆ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದುವರೆಗೆ ಪ್ರತಿಭಟನಾನಿರತ 630ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದರು. ಕೃಷಿ ಕಾಯ್ದೆಯನ್ನು ವಿರೋಧಿಸಿದ್ದ ಹಲವು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

Latest News

Russia
ದೇಶ-ವಿದೇಶ

ಜನಸಂಖ್ಯೆ ಹೆಚ್ಚಳಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ರೆ 13 ಲಕ್ಷ ಬಹುಮಾನ : ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆ

Dakshina Kannada
ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

IT Minister
ದೇಶ-ವಿದೇಶ

5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.