Application Invitation for 24 Lecturer Posts of Raichur University.
Job News: ರಾಯಚೂರು ವಿಶ್ವವಿದ್ಯಾಲಯವು ತನ್ನ ಸ್ನಾತಕೋತ್ತರ ವಿಭಾಗಗಳಲ್ಲಿ ಖಾಲಿ ಇರುವ 24 ಖಾಯಂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗೆ ಈಗ ನೋಟಿಫಿಕೇಶನ್ (Notification) ಬಿಡುಗಡೆ ಮಾಡಿದೆ. ಅರ್ಹ ಭಾರತೀಯ ನಾಗರಿಕರಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಅಸಕ್ತಿ ಇರುವವರು ಈಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ಹೆಸರು- ಸಹಾಯಕ ಪ್ರಾಧ್ಯಾಪಕರು
ಒಟ್ಟು ಹುದ್ದೆಗಳ ಸಂಖ್ಯೆ- 24
(371 (ಜೆ) ಮೀಸಲಾತಿ ಪ್ರಕಾರ ಭರ್ತಿ ಮಾಡುವ ಹುದ್ದೆಗಳ ಸಂಖ್ಯೆ- 18
371 (ಜೆ) ಹೊರತುಪಡಿಸಿದ ಅರ್ಹತೆಯವರಿಗೆ ಇರುವ ಹುದ್ದೆಗಳ ಸಂಖ್ಯೆ- 06
ವಿದ್ಯಾರ್ಹತೆ- ಸ್ನಾತಕೋತ್ತರ ಪದವಿ ಜತೆಗೆ ಎನ್ಇಟಿ / ಕೆಸೆಟ್ / ಪಿಹೆಚ್ಡಿ ಅರ್ಹತೆ
ಅರ್ಜಿ ಸಲ್ಲಿಸುವ ವಿಧಾನ:
ರಾಯಚೂರು ವಿಶ್ವವಿದ್ಯಾಲಯ (Raichur University) ನಿಗದಿಪಡಿಸಿದ ನಮೂನೆಯಲ್ಲಿ ಎಂಟು ಪ್ರತಿಗಳಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶಾತಿ ಪರೀಕ್ಷೆಯನ್ನು ಬರೆಯುವಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ ವಿವರ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳಿಗೆ ರೂ.500.
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.1000.
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು.
ಅರ್ಜಿ ಶುಲ್ಕ ಪಾವತಿಗೆ ಸೆಪ್ಟೆಂಬರ್ (September) 17 ಕೊನೆ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಿದ ರಶೀದಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 20-08-2024 ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17-09-2024 ರ ಸಂಜೆ 05-30 ಗಂಟೆವರೆಗೆ.ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 17-09-2024
ಉಳಿದ ವಿವರಗಳು:
ಒಟ್ಟು 16 ವಿಷಯಗಳಲ್ಲಿ ರಾಯಚೂರು ವಿವಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಗರಿಷ್ಠ ವಯೋಮಿತಿ ನಿಗದಿಗೊಳಿಸಿರುವುದಿಲ್ಲ.
Raichur Job Vacancy 2024 Kannada News
ರಾಯಚೂರು ವಿವಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ವೇತನ ಶ್ರೇಣಿ : ರೂ.57,000-1,82,400.ಆಯ್ಕೆಯಾದವರಿಗೆ ಎನ್ಪಿಎಸ್ – ಹೊಸ ಪಿಂಚಣಿ ಸೌಲಭ್ಯ ಲಭ್ಯವಾಗಲಿದೆ.
ಹೆಚ್ಚಿನ ವಿವರಗಳಿಗೆ ರಾಯಚೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ ವಿಳಾಸ https://raichuruniversity.ac.in.
ಆಯ್ಕೆ ಪ್ರಕ್ರಿಯೆ :
ರಾಯಚೂರು ವಿವಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಹಾಕಿರುವವರಿಗೆ ಕೆಇಎ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಟ್ಟು 200 ಅಂಕಗಳಿಗೆ ನಡೆಸಲಾಗುತ್ತದೆ. ಪರೀಕ್ಷೆಯು ಬಹು ಮಾದರಿ ಆಯ್ಕೆಯದ್ದಾಗಿರುತ್ತದೆ. ಪರೀಕ್ಷೆಗೆ ವಿವರವಾದ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ (Website) ನಂತರ ಪ್ರಕಟಿಸಲಾಗುವುದು.ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರು, ಧಾರವಾಡ, ಮತ್ತು ಕಲಬುರ್ಗಿ (Bengaluru, Dharwad, Kalburgi) ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ .
Job News: University of Raichur has now released a notification for filling up 24 permanent assistant professor posts in its postgraduate departments. Applications are invited from eligible Indian citizens. Those who are not interested in these posts can apply online now.
Post Name- Assistant Professor
Total number of posts- 24
(371 (j) Number of posts to be filled as per reservation- 18
371 (j) No. of posts for qualified persons other than- 06
Qualification – Post Graduation with NET / KSET / PhD qualification
How to Apply:
Raichur University invites applications filled in eight copies in the prescribed format. Only candidates who have written the entrance examination conducted by the Karnataka Examinations Authority are eligible to apply.
Application Fee Details:
Rs.500 for Scheduled Caste, Scheduled Tribe, Category-1, Handicapped Candidates.
1000 for general candidates.
Candidates can pay the application fee through online.
September 17 is the last date for payment of application fee. Receipt of payment of application fee should be attached with the application.
Important dates
Starting date for receipt of application : 20-08-2024 Last date for submission of application : 17-09-2024 between 05-30 PM. Last date for payment of application fee : 17-09-2024
Other details:
Raichur University is recruiting Assistant Professor posts in total 16 subjects. There is no upper age limit.
Raichur University Assistant Professor Posts Salary Range : Rs.57,000-1,82,400. NPS - New Pension facility will be available to selected candidates.
For more details visit Raichur University official website address https://raichuruniversity.ac.in.
Selection Process:
For those who have applied for the posts of assistant professor in Raichur University, a competitive examination will be conducted by KEA for a total of 200 marks. The exam will be multiple choice. The detailed schedule for the examination will be published later on the website of the authority. The competitive examinations will be held at the district centers of Bengaluru, Dharwad, and Kalburgi.