• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ರೈತರಿಗೆ ಸಬ್ಸಿಡಿಯಲ್ಲಿ ಸಿಗಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟ: ಡಿಆರ್‌ಐ ದಾಳಿಯಲ್ಲಿ 190 ಟನ್ ವಶ

Teju Srinivas by Teju Srinivas
in ರಾಜ್ಯ, ವಿಜಯ ಟೈಮ್ಸ್‌
ರೈತರಿಗೆ ಸಬ್ಸಿಡಿಯಲ್ಲಿ ಸಿಗಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟ: ಡಿಆರ್‌ಐ ದಾಳಿಯಲ್ಲಿ 190 ಟನ್ ವಶ
0
SHARES
61
VIEWS
Share on FacebookShare on Twitter
  • ರೈತರಿಗೆ ಸಿಗಬೇಕಿದ್ದ ಯೂರಿಯಾ (Raid on illegal smuggling urea) ತಮಿಳುನಾಡಿಗೆ ಕಳ್ಳ ರವಾನೆ
  • ಸಬ್ಸಿಡಿ ಗೊಬ್ಬರ ಕಾಳಸಂತೆಯಲ್ಲಿ ಮಾರಾಟ; ಡಿಆರ್‌ಐ ದಾಳಿಯಲ್ಲಿ 190 ಟನ್ ವಶ
  • ಅಡಕಮಾರನಹಳ್ಳಿ ಗೋಡೌನ್ ದಾಳಿಯಲ್ಲಿ 1.9 ಲಕ್ಷ ಕೆಜಿ ಯೂರಿಯಾ ಸೀಜ್

Bengaluru: ರೈತರಿಗೆ ಸಬ್ಸಿಡಿಯಲ್ಲಿ ವಿತರಿಸಬೇಕಿದ್ದ ಯೂರಿಯಾವನ್ನು (Urea) ಅಕ್ರಮವಾಗಿ ಕಾಳಸಂತೆಯಲ್ಲಿ (Raid on illegal smuggling urea) ಮಾರಾಟ ಮಾಡುತ್ತಿದ್ದ ಭಾರಿ ದಂಧೆಯೊಂದು ಬಹಿರಂಗವಾಗಿದೆ.

ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬರೋಬ್ಬರಿ 190 ಟನ್ (1.9 ಲಕ್ಷ ಕೆಜಿ) ಯೂರಿಯಾ ವಶಪಡಿಸಿಕೊಂಡಿದ್ದಾರೆ.

ರೈತರಿಗೆ 200–266 ರೂಪಾಯಿಗೆ ಸಿಗಬೇಕಿದ್ದ ಯೂರಿಯಾವನ್ನು 1,500ರಿಂದ 2,500 ರೂಪಾಯಿ ತನಕ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು

ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರಾಜ್ಯದ ಪಾಲಿಗೆ ಬಂದಿದ್ದ ಕೇಂದ್ರ ಸರ್ಕಾರದ ಸಬ್ಸಿಡಿ (Subsidy) ರಸಗೊಬ್ಬರವನ್ನು ಕಳ್ಳ ಸಾಗಣೆ ಮಾಡಿ

ತಮಿಳುನಾಡಿಗೆ ರವಾನಿಸುವ ಯತ್ನ ನಡೆದಿತ್ತು.

Raid on illegal smuggling urea

ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಯೂರಿಯಾ ಗೊಬ್ಬರಕ್ಕೆ ಭಾರೀ ಸಬ್ಸಿಡಿ ನೀಡುತ್ತದೆ.

(Raid on illegal smuggling urea) 45 ಕೆಜಿ ತೂಕದ ಯೂರಿಯಾದ ಮೂಲ ಬೆಲೆ 2,321 ರೂಪಾಯಿಯಾದರೆ, ಇದಕ್ಕೆ

2,054 ರೂಪಾಯಿ ಸಬ್ಸಿಡಿ ನೀಡಿ ರಾಜ್ಯಗಳಿಗೆ ಕೇವಲ 266 ರೂಪಾಯಿಗೆ ಪೂರೈಕೆ ಮಾಡಲಾಗುತ್ತದೆ.

ಈ ಯೂರಿಯಾ ಕೃಷಿ ಇಲಾಖೆ ಮೂಲಕ ನೋಂದಾಯಿತ ಡೀಲರ್‌ಗಳ (Dealer) ಮೂಲಕ ರೈತರಿಗೆ ತಲುಪಬೇಕು.

ಆದರೆ ಈ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡ ಆರೋಪಿಗಳು, ಸಬ್ಸಿಡಿ ಯೂರಿಯಾವನ್ನು ಕೃಷಿ ಇಲಾಖೆಯ ಸರಬರಾಜು

ಮಾರ್ಗದಿಂದ ಕದ್ದುಕೊಂಡು, ಚೀಲಗಳನ್ನು ಬದಲಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಡಿಆರ್‌ಐ ಅಧಿಕಾರಿಗಳ ಪ್ರಕಾರ, ದಾಸನಪುರ ಹೋಬಳಿ, ಶಿವನಪುರ ಪ್ರದೇಶದಲ್ಲಿರುವ ಅಡಕಮಾರನಹಳ್ಳಿ ಸಮೀಪದ ಗೋಡೌನ್‌ನಲ್ಲಿ (Godown)

ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು. ತಜೀರ್ ಖಾನ್ ಯೂಸುಫ್ ಎಂಬ ವ್ಯಕ್ತಿ ಕಳೆದ ಆರು ತಿಂಗಳ ಹಿಂದೆ ತಿಂಗಳಿಗೆ 40,000

ರೂಪಾಯಿ ಬಾಡಿಗೆಗೆ ಶೆಡ್ ಪಡೆದಿದ್ದಾನೆ. ಈ ಜಾಗ ಸಲೀಂ ಖಾನ್ ಎಂಬವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ಕೇಂದ್ರದಿಂದ 45 ಕೆಜಿ ತೂಕದ ಚೀಲಗಳಲ್ಲಿ ಬಂದ ಯೂರಿಯಾವನ್ನು ಇಲ್ಲಿ 50 ಕೆಜಿ ಚೀಲಗಳಂತೆ ಮರುಪ್ಯಾಕ್ ಮಾಡಿ, ಬೇರೆ ಚೀಲಗಳಿಗೆ ತುಂಬಿಸಿ ತಮಿಳುನಾಡಿಗೆ ಕಳುಹಿಸಲಾಗುತ್ತಿತ್ತು.

ಇದು ಕೇವಲ ರಾಜ್ಯದ ರೈತರ ಹಕ್ಕಿಗೆ ಮಾತ್ರವಲ್ಲ, ಕೇಂದ್ರ ಸರ್ಕಾರದ ಸಬ್ಸಿಡಿ ನೀತಿಗೂ ಭಾರಿ ದ್ರೋಹವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇತ್ತ, ರಾಜ್ಯದ ಅನೇಕ ಭಾಗಗಳಲ್ಲಿ ರೈತರು ಯೂರಿಯಾ ಗೊಬ್ಬರಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು, ಬಿಸಿಲು–ಮಳೆಯನ್ನೂ ಲೆಕ್ಕಿಸದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವೆಡೆ ಗೊಬ್ಬರಕ್ಕಾಗಿ ಜಗಳ, ಅವ್ಯವಸ್ಥೆ, ಪೊಲೀಸರ ಲಾಠಿಚಾರ್ಜ್‌ವರೆಗೂ ನಡೆದ ಉದಾಹರಣೆಗಳಿವೆ.

ಒಂದು ಮೂಟೆ ಯೂರಿಯಾಕ್ಕಾಗಿ ರೈತರು ಪರದಾಡುತ್ತಿರುವಾಗ, ಇಂತಹ ಕಳ್ಳ ದಂಧೆಗಾರರ ಕೈಗೆ ಟನ್‌ಗಟ್ಟಲೆ ಯೂರಿಯಾ ಸೇರುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾಳಸಂತೆಯ ಕರಾಳ ಮುಖವನ್ನು ಬಯಲಾದ ಬಳಿಕ ಡಿಆರ್‌ಐ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದ್ದಾರೆ.

ಪ್ರಸ್ತುತ ಡಿಆರ್‌ಐ ಅಧಿಕಾರಿಗಳು ಗೋಡೌನ್ ಸೀಜ್ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ಸಂಬಂಧಪಟ್ಟವರನ್ನು ವಶಕ್ಕೆ ಪಡೆದು ವಿಚಾರಣೆ

ನಡೆಸುತ್ತಿದ್ದಾರೆ. ಕೃಷಿ ಇಲಾಖೆಯ ಸರಬರಾಜು ವ್ಯವಸ್ಥೆಯಿಂದ ಯೂರಿಯಾ ಹೊರಬಂದಿರುವುದರಿಂದ, ಇಲಾಖೆಯೊಳಗಿನ ಪಾತ್ರದ ಮೇಲೂ

ಅನುಮಾನ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಅಕ್ರಮ ಮಾರಾಟದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸರ್ಕಾರ ತೀರ್ಮಾನಿಸಿದೆ.

ಜೊತೆಗೆ, ಕೇಂದ್ರದ ಸಬ್ಸಿಡಿ ರಸಗೊಬ್ಬರ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಹಾಗೂ ಕಾಳಸಂತೆಯನ್ನು ಸಂಪೂರ್ಣವಾಗಿ ತಡೆಹಿಡಿಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆಗಳು ಲಭಿಸಿವೆ.

ರೈತರ ಹಕ್ಕು ಕಸಿದುಕೊಂಡ ಈ ದಂಧೆಗೆ ಕಠಿಣ ಶಿಕ್ಷೆ ನೀಡಬೇಕು ಎಂಬುದು ಈಗ ರಾಜ್ಯದಾದ್ಯಂತ ಕೇಳಿಬರುತ್ತಿರುವ ಬೇಡಿಕೆಯಾಗಿದೆ.

ಇದನ್ನು ಓದಿ : https://vijayatimes.com/establishing-chemotherapy-centers-in-state/

Tags: bengalurublackmarketFarmerssellsUrea

Related News

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ
ದೇಶ-ವಿದೇಶ

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ

January 21, 2026
ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ
ದೇಶ-ವಿದೇಶ

ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ

January 21, 2026
ಬ್ಯಾನರ್ ಗಲಾಟೆಗಳ ಬಳಿಕ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು
ಪ್ರಮುಖ ಸುದ್ದಿ

ಬ್ಯಾನರ್ ಗಲಾಟೆಗಳ ಬಳಿಕ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು

January 21, 2026
ಜಿಬಿಎ ಚುನಾವಣೆಗೆ ಆಯೋಗ ಸಜ್ಜು : ಬ್ಯಾಲೆಟ್ ಪೇಪರ್ ಮೂಲಕ ಮತದಾನ, ಕರಡು ಮತದಾರರ ಪಟ್ಟಿ ಪ್ರಕಟ
ಪ್ರಮುಖ ಸುದ್ದಿ

ಜಿಬಿಎ ಚುನಾವಣೆಗೆ ಆಯೋಗ ಸಜ್ಜು : ಬ್ಯಾಲೆಟ್ ಪೇಪರ್ ಮೂಲಕ ಮತದಾನ, ಕರಡು ಮತದಾರರ ಪಟ್ಟಿ ಪ್ರಕಟ

January 20, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.