ಅವಧಿ ಮೀರಿದ, ತಪ್ಪು ಲೇಬಲ್ (raids on Amazon and Swiggy Instamart centers) ಹೊಂದಿದ್ದ ಆಹಾರ ಉತ್ಪನ್ನ ಪತ್ತೆ
ಪರವಾನಗಿ ಇಲ್ಲದೆ ಸಂಗ್ರಹಿಸಿದ್ದ ಔಷಧಗಳೂ ವಶ
ದೇವನಹಳ್ಳಿ, ಆನೇಕಲ್, ಹೊಸಕೋಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಧಿಕಾರಿಗಳ ತಪಾಸಣೆ
Bengaluru : ಆನ್‌ಲೈನ್ ಮೂಲಕ ಮನೆಬಾಗಿಲಿಗೆ ಆಹಾರ ಮತ್ತು ದಿನಸಿ ಉತ್ಪನ್ನಗಳನ್ನು (raids on Amazon and Swiggy Instamart centers) ತಲುಪಿಸುವ ಡೆಲಿವರಿ ವ್ಯವಸ್ಥೆಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರಿನ ವಿವಿಧೆಡೆ ಇರುವ ಅಮೆಜಾನ್ ಹಾಗೂ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಡಾರ್ಕ್ ಸ್ಟೋರ್‌ಗಳು ಮತ್ತು ಇತರ ಆಹಾರ ಸಂಗ್ರಹಣಾ ಕೇಂದ್ರಗಳಲ್ಲಿ ವಿಶೇಷ ಜಾರಿ ಕಾರ್ಯಾಚರಣೆ
ನಡೆಸಲಾಗಿದ್ದು, ಅವಧಿ ಮೀರಿದ ಹಾಗೂ ತಪ್ಪಾಗಿ ಅಥವಾ ಅಪೂರ್ಣವಾಗಿ ಲೇಬಲ್ ಮಾಡಲಾದ ಆಹಾರ ಉತ್ಪನ್ನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ‘ಪೆಪ್ಟೈಡ್ ಪಾರ್ಟಿ’ಗೆ (Peptide Party) ಸಂಬಂಧಿಸಿದಂತೆ (raids on Amazon and Swiggy Instamart centers) ಸಲ್ಲಿಕೆಯಾಗಿದ್ದ ದಾಖಲೆಗಳ ಆಧಾರದ ಮೇಲೂ ಕೆಲವು ಆಹಾರ ಸಂಗ್ರಹಣೆ ಮತ್ತು ಪೂರೈಕೆ ಕೇಂದ್ರಗಳನ್ನು ಪರಿಶೀಲಿಸಲಾಗಿದೆ.
ಆಹಾರ ಉತ್ಪನ್ನಗಳ ತಯಾರಿಕೆ, ಮುಕ್ತಾಯ ದಿನಾಂಕ, ಬಳಕೆಯ ಅವಧಿ, ಲೇಬಲಿಂಗ್ ಸೇರಿದಂತೆ ಹಲವು ಸುರಕ್ಷತಾ ಮಾನದಂಡಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಪಾರ್ಕ್‌ನಲ್ಲಿರುವ ಅಮೆಜಾನ್‌ನ (Amazon) BLR6 ಕೇಂದ್ರದಲ್ಲಿ ನಡೆದ ತಪಾಸಣೆಯಲ್ಲಿ ಒಟ್ಟು 24 ಲಕ್ಷ ರೂ. ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದರಲ್ಲಿ 14 ಲಕ್ಷ ರೂ. ಮೌಲ್ಯದ ತಪ್ಪು ಅಥವಾ ಅಪೂರ್ಣ ಲೇಬಲಿಂಗ್ ಹೊಂದಿದ್ದ ಉತ್ಪನ್ನಗಳು ಹಾಗೂ 10 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಆಹಾರ ಉತ್ಪನ್ನಗಳು ಸೇರಿವೆ.
ಇದೇ ಕೇಂದ್ರದಲ್ಲಿ ಅಗತ್ಯ ಪರವಾನಗಿ ಇಲ್ಲದೆ ಸಂಗ್ರಹಿಸಲಾಗಿದ್ದ 2.45 ಲಕ್ಷ ರೂ. ಮೌಲ್ಯದ ಔಷಧಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆಹಾರ ಸುರಕ್ಷತೆ
ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940ರ ಅಡಿಯಲ್ಲಿ ಅಧಿಕಾರಿಗಳು ಈ ಪರಿಶೀಲನೆ ನಡೆಸಿದ್ದಾರೆ.
ಗ್ರಾಹಕರಿಗೆ ತಲುಪುವ ಮೊದಲು ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಕಾನೂನುಬದ್ಧ ಸಂಗ್ರಹಣಾ ವ್ಯವಸ್ಥೆ ಖಚಿತಪಡಿಸಿಕೊಳ್ಳುವುದು ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿತ್ತು.
ಆನೇಕಲ್ ತಾಲೂಕಿನಲ್ಲಿರುವ ಅಮೆಜಾನ್‌ನ BLR7 ಕೇಂದ್ರದಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಇಲ್ಲಿ ಒಟ್ಟು 32 ಲಕ್ಷ ರೂ. ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಪ್ಪು ಅಥವಾ ಅಪೂರ್ಣ ಲೇಬಲಿಂಗ್ ಹೊಂದಿದ್ದ 19 ಲಕ್ಷ ರೂ. ಮೌಲ್ಯದ ಉತ್ಪನ್ನಗಳು ಮತ್ತು 13 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಉತ್ಪನ್ನಗಳು ಇದರಲ್ಲಿ ಸೇರಿವೆ. ಅಲ್ಲದೆ, ಅಗತ್ಯ ಪರವಾನಗಿ ಇಲ್ಲದೆ ಸಂಗ್ರಹಿಸಲಾಗಿದ್ದ 1.57 ಲಕ್ಷ ರೂ. ಮೌಲ್ಯದ ಔಷಧಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ, ಆನ್‌ಲೈನ್ ಡೆಲಿವರಿ ವೇದಿಕೆಗಳ ಮೂಲಕ ಮಾರಾಟವಾಗುವ ದಿನಸಿ, ಹಾಲು, ತರಕಾರಿ, ಮೊಸರು ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಗುಣಮಟ್ಟದ ಕುರಿತು ಸಾರ್ವಜನಿಕರಿಂದ ಬಂದಿರುವ ದೂರುಗಳನ್ನೂ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಎಚ್‌ಬಿಆರ್ ಲೇಔಟ್‌ನ ಸಪ್ತ ಬಜಾರ್‌ನಲ್ಲಿ ನಡೆಸಿದ ಪರಿಶೀಲನೆಯಲ್ಲಿ ಗೋಡಂಬಿ, ಬಿಸ್ಕೆಟ್, ರಾಗಿ ಹಿಟ್ಟು, ಚಿಕನ್ ಪ್ಯಾಟೀಸ್, ಪನೀರ್, ಕುಕೀಸ್, ನಟ್ಸ್, ಮೊಟ್ಟೆ ಹಾಗೂ
ಹಿಟ್ಟು ಸೇರಿದಂತೆ ಹಲವು ಅವಧಿ ಮೀರಿದ ಉತ್ಪನ್ನಗಳು ಪತ್ತೆಯಾಗಿದ್ದು, ಸುಮಾರು 10 ಸಾವಿರ ರೂ. ಮೌಲ್ಯದ ಆಹಾರವನ್ನು ವಶಪಡಿಸಿಕೊಳ್ಳಲಾಗಿದೆ.
ಲಿಂಗರಾಜಪುರಂನ ಲಿಯೋ 7 ಎಂಟರ್‌ಪ್ರೈಸಸ್‌ನಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಅವಧಿ ಮೀರಿದ ಹಾಗೂ ಮುಕ್ತಾಯದ ಹಂತದಲ್ಲಿದ್ದ
ಪೌಷ್ಟಿಕಾಂಶಯುಕ್ತ ಉತ್ಪನ್ನಗಳು, ಪಾನೀಯಗಳು, ಚಾಕೊಲೇಟ್‌ಗಳು, ಸಿಹಿತಿಂಡಿಗಳು, ತುಪ್ಪ, ನಟ್ಸ್ ಮತ್ತು ಬೀಜಗಳು ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಪತ್ತೆಯಾಗಿವೆ.
ಆವರಣದಲ್ಲಿ ಸುಮಾರು 56 ಲಕ್ಷ ರೂ. ಮೌಲ್ಯದ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಮತ್ತೊಂದೆಡೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇಂದ್ರದಲ್ಲಿಯೂ ಗಂಭೀರ ಲೋಪಗಳು ಪತ್ತೆಯಾಗಿವೆ.
ಇಲ್ಲಿ 42 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಸ್ವಚ್ಛ ಪರಿಸ್ಥಿತಿ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೇಂದ್ರವನ್ನು ಬಂದ್ ಮಾಡಲಾಗಿದೆ.
ಈ ಕೇಂದ್ರದಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ ಅವಧಿ ಮೀರಿದ ಮತ್ತು ಸರಿಯಾಗಿ ಲೇಬಲ್ ಮಾಡದ ಉತ್ಪನ್ನಗಳು ಪತ್ತೆಯಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.
ವಿಶೇಷ ಜಾರಿ ಕಾರ್ಯಾಚರಣೆಯ ಒಟ್ಟಾರೆ ಫಲಿತಾಂಶದಲ್ಲಿ ಸುಮಾರು 1.38 ಕೋಟಿ ರೂ. ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ.
ಇದರಲ್ಲಿ 33 ಲಕ್ಷ ರೂ. ಮೌಲ್ಯದ ತಪ್ಪಾಗಿ ಅಥವಾ ಅಪೂರ್ಣವಾಗಿ ಲೇಬಲ್ ಮಾಡಲಾದ ಉತ್ಪನ್ನಗಳು ಹಾಗೂ 1.05 ಕೋಟಿ ರೂ. ಮೌಲ್ಯದ ಅವಧಿ ಮೀರಿದ ಅಥವಾ ಮುಕ್ತಾಯದ
ಹಂತದಲ್ಲಿದ್ದ ಆಹಾರ ಉತ್ಪನ್ನಗಳು ಸೇರಿವೆ. ಇದರ ಜೊತೆಗೆ ಅಗತ್ಯ ಪರವಾನಗಿ ಇಲ್ಲದೆ ಸಂಗ್ರಹಿಸಲಾಗಿದ್ದ 4.02 ಲಕ್ಷ ರೂ. ಮೌಲ್ಯದ ಔಷಧಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಆನ್‌ಲೈನ್ ಶಾಪಿಂಗ್ ಮತ್ತು ತ್ವರಿತ ಡೆಲಿವರಿ ವ್ಯವಸ್ಥೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಗ್ರಾಹಕರಿಗೆ ತಲುಪುವ ಆಹಾರ ಪದಾರ್ಥಗಳ ಗುಣಮಟ್ಟ, ಮುಕ್ತಾಯ ದಿನಾಂಕ ಹಾಗೂ
ಲೇಬಲಿಂಗ್ ಬಗ್ಗೆ ಕಟ್ಟುನಿಟ್ಟಿನ ನಿಗಾ ಅಗತ್ಯವಾಗಿದೆ. ನಿಯಮ ಉಲ್ಲಂಘನೆ ಕಂಡುಬಂದಿರುವ ಕೇಂದ್ರಗಳ ವಿರುದ್ಧ ಮುಂದಿನ ಕಾನೂನು ಕ್ರಮದ ಕುರಿತು ತನಿಖೆ ಮುಂದುವರಿದಿದೆ.
ಇದನ್ನು ಓದಿ : https://vijayatimes.com/digital-meter-in-cab/