• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಸಿಹಿತಿಂಡಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಲಕ್ಷಾಂತರ ಮೌಲ್ಯದ ಉತ್ಪನ್ನ ವಶ, ಹಲವುಕಡೆ ನಿಯಮ ಉಲ್ಲಂಘನೆ ಪತ್ತೆ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಸಿಹಿತಿಂಡಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಲಕ್ಷಾಂತರ ಮೌಲ್ಯದ ಉತ್ಪನ್ನ ವಶ, ಹಲವುಕಡೆ ನಿಯಮ ಉಲ್ಲಂಘನೆ ಪತ್ತೆ
0
SHARES
14
VIEWS
Share on FacebookShare on Twitter

ಸ್ವೀಟ್ಸ್ ಅಂಗಡಿಗಳಿಗೆ ದಿಢೀರ್ (raids on sweet manufacturing units) ತಪಾಸಣೆ ನಡೆಸಿದ ಅಧಿಕಾರಿಗಳು

ಅವಧಿ ಮೀರಿದ ಪದಾರ್ಥ, ಕಳಪೆ ನೈರ್ಮಲ್ಯ, ಲೇಬಲಿಂಗ್ ಲೋಪ; ₹5.99 ಲಕ್ಷ ಮೌಲ್ಯದ ಆಹಾರ ವಶ

ರಾಜ್ಯದ ಹಲವು ಘಟಕಗಳಲ್ಲಿ ನಿಯಮ ಉಲ್ಲಂಘನೆ ಪತ್ತೆ; ಖೋವಾ, ಮೊಸರು, ಟೀ ಪುಡಿ ಸೇರಿದಂತೆ ಹಲವು ಉತ್ಪನ್ನ ಜಪ್ತಿ

Bengaluru: ಕರ್ನಾಟಕದಾದ್ಯಂತ ಸಿಹಿತಿಂಡಿ ತಯಾರಿಕಾ ಘಟಕಗಳು ಹಾಗೂ ಆಹಾರ ಉದ್ಯಮಗಳ (raids on sweet manufacturing units) ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದೆ.

ಆಹಾರದ ಗುಣಮಟ್ಟ, ಸ್ವಚ್ಛತೆ, ಸುರಕ್ಷತೆ ಮತ್ತು ಲೇಬಲಿಂಗ್ (Labeling) ನಿಯಮಗಳನ್ನು ಪರಿಶೀಲಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದ್ದು, ಹಲವು ಘಟಕಗಳಲ್ಲಿ ಗಂಭೀರ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ.

raids on sweet manufacturing units

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ (U.T. Khader) ಅವರ ನಿರ್ದೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪ್ರದೇಶಗಳು, ಮೈಸೂರು, ದಕ್ಷಿಣ ಕನ್ನಡ, ಬೆಳಗಾವಿ (Belagavi) , ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ತಪಾಸಣೆ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು, ಅಸಮರ್ಪಕ ಲೇಬಲಿಂಗ್, ಆಹಾರ (raids on sweet manufacturing units) ತಯಾರಿಕೆ ಮತ್ತು ಸಂಗ್ರಹಣೆಯಲ್ಲಿ

ಸ್ವಚ್ಛತೆಯ ಕೊರತೆ, ನೊಣಗಳ ಕಾಟ ಹಾಗೂ ಅನುಮೋದನೆ ಇಲ್ಲದ ಕೃತಕ ಬಣ್ಣಗಳ ಬಳಕೆ ಅಥವಾ ಸಂಗ್ರಹಣೆ ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ.

ಅಧಿಕಾರಿಗಳ ಪರಿಶೀಲನೆಯಲ್ಲಿ ಹಲವು ಆಹಾರ ಉತ್ಪನ್ನಗಳ ಪ್ಯಾಕೆಟ್ಗಳಲ್ಲಿ ಕಡ್ಡಾಯವಾಗಿ ನಮೂದಿಸಬೇಕಾದ ಮಾಹಿತಿಗಳೇ ಇಲ್ಲದಿರುವುದು ಪತ್ತೆಯಾಗಿದೆ.

ತಯಾರಕರ ಹೆಸರು ಮತ್ತು ವಿಳಾಸ, ಬ್ಯಾಚ್ ಸಂಖ್ಯೆ, ತಯಾರಿಕೆಯ ದಿನಾಂಕ, ‘Use By’ ದಿನಾಂಕ, ಗರಿಷ್ಠ ಚಿಲ್ಲರೆ ಬೆಲೆ (MRP), FSSAI ಪರವಾನಗಿ ಅಥವಾ ನೋಂದಣಿ ಸಂಖ್ಯೆಯಂತಹ ವಿವರಗಳು ಸರಿಯಾಗಿ ನಮೂದಿಸದಿರುವುದು ಗಂಭೀರ ಲೋಪ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಕಾರ್ಯಾಚರಣೆಯ ವೇಳೆ ಸುಮಾರು ₹5.99 ಲಕ್ಷ ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿವಿಧ ಘಟಕಗಳಿಂದ ಸಿಹಿತಿಂಡಿಗಳು, ಹಾಲಿನ ಉತ್ಪನ್ನಗಳು, ಎಣ್ಣೆ, ಟೀ ಪುಡಿ, ಖೋವಾ ಸೇರಿದಂತೆ ಹಲವು ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಗುಣಮಟ್ಟ ಮತ್ತು ಸುರಕ್ಷತಾ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಪ್ರಯೋಗಾಲಯದ ವರದಿ ಹಾಗೂ ಉಲ್ಲಂಘನೆಯ ಸ್ವರೂಪವನ್ನು ಆಧರಿಸಿ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಬೆಂಗಳೂರಿನ ಯಶವಂತಪುರದಲ್ಲಿರುವ ಆಶಾ ಸ್ವೀಟ್ಸ್ನಲ್ಲಿಯೂ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಸುಮಾರು 49 ಕೆಜಿ ಟೀ ಪುಡಿ, 20 ಕೆಜಿ ಖೋವಾ (Khova) ಅಥವಾ ಕಲಾಕಂದ್ (Kalakand) ಮತ್ತು 2.5 ಕೆಜಿ ಪಿಸ್ತಾ ಸೇರಿದಂತೆ ಒಟ್ಟು 71.5 ಕೆಜಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲಿಂದ ಸಂಗ್ರಹಿಸಲಾದ ಆಹಾರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮತ್ತೊಂದೆಡೆ, ಮಾಗಡಿ ರಸ್ತೆಯಲ್ಲಿರುವ ಬಿಕಾನೇರ್ ಸ್ವೀಟ್ಸ್ ಘಟಕದಲ್ಲಿ ಅನೈರ್ಮಲ್ಯಕರ

ಪರಿಸ್ಥಿತಿಗಳು ಹಾಗೂ ಲೇಬಲಿಂಗ್ನಲ್ಲಿ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಕಾನೂನು ಕ್ರಮಕ್ಕೂ ಚಾಲನೆ ನೀಡಲಾಗಿದೆ. ಲಾಲ್ ಸ್ವೀಟ್ಸ್ನಲ್ಲಿ ಬಾಳೆಹಣ್ಣಿನ ಚಿಪ್ಸ್, ಚಕ್ಕುಲಿ ಮಸಾಲೆ ಸೇರಿದಂತೆ ಸುಮಾರು 60 ಕೆಜಿ ಪ್ಯಾಕೇಜ್ ಮಾಡಿದ ಆಹಾರ ಉತ್ಪನ್ನಗಳನ್ನು

ವಶಕ್ಕೆ ಪಡೆಯಲಾಗಿದೆ. ಈ ಉತ್ಪನ್ನಗಳಲ್ಲಿ ತಯಾರಕರ ಹೆಸರು, ವಿಳಾಸ ಮತ್ತು FSSAI ಪರವಾನಗಿ ಸಂಖ್ಯೆಯಂತಹ ಅಗತ್ಯ ಮಾಹಿತಿಗಳು ಇಲ್ಲದಿರುವುದು ಕಂಡುಬಂದಿದೆ.

ಘಟಕದಲ್ಲಿ ನೊಣಗಳ ಕಾಟ ಹಾಗೂ ಅನೈರ್ಮಲ್ಯಕರ ವಾತಾವರಣವೂ ಪತ್ತೆಯಾಗಿದ್ದು, ಆಹಾರ ಕಲುಷಿತಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದೆ.

ಇದೇ ಕಾರ್ಯಾಚರಣೆಯಲ್ಲಿ ಸಂದೇಶ್ ಸ್ವೀಟ್ಸ್ನಿಂದ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಶಂಕಿಸಲಾದ ನಾಲ್ಕು ಆಹಾರ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಇಂಡಿಯಾ ಸ್ವೀಟ್ಸ್ನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ಸಂಬಂಧಿತ ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ವೆಂಕಟೇಶ್ವರ ಸ್ವೀಟ್ಸ್ನಲ್ಲೂ ಅನೈರ್ಮಲ್ಯಕರ ಪರಿಸ್ಥಿತಿಗಳು ಪತ್ತೆಯಾದ ಕಾರಣ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಬಾಲಾಜಿ ಮಿಲ್ಕ್ ಖೋವಾ ಘಟಕದಲ್ಲಿ ತಯಾರಿಕೆಯ ದಿನಾಂಕ, ‘Use By’ ದಿನಾಂಕ, ಬ್ಯಾಚ್ ಸಂಖ್ಯೆ, MRP ಹಾಗೂ FSSAI ಲೋಗೋ ಮತ್ತು ಪರವಾನಗಿ ಅಥವಾ ನೋಂದಣಿ ಸಂಖ್ಯೆಯಂತಹ ಕಡ್ಡಾಯ ವಿವರಗಳಿಲ್ಲದ ಉತ್ಪನ್ನಗಳು ಪತ್ತೆಯಾಗಿವೆ.

ಪರಿಣಾಮವಾಗಿ 150 ಕೆಜಿ ಕಲಾಕಂದ್ ಖೋವಾ ಮತ್ತು 250 ಕೆಜಿ ಖೋವಾ ಸೇರಿದಂತೆ ಒಟ್ಟು 400 ಕೆಜಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಸುಮಾರು ₹77,500 ಎಂದು ಅಂದಾಜಿಸಲಾಗಿದೆ.

ಇನ್ನೂ ಕೆಲವು ಘಟಕದಲ್ಲಿ ಆಹಾರ ಉತ್ಪಾದನೆ ಅನೈರ್ಮಲ್ಯಕರ ಪರಿಸ್ಥಿತಿಗಳಲ್ಲಿ ನಡೆಯುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ (Notice) ನೀಡಲಾಗಿದೆ.
ಮಿಠಾಯಿ ಫ್ಯಾಕ್ಟರಿಯಲ್ಲೂ ಅಧಿಕಾರಿಗಳ ತಪಾಸಣೆ ವೇಳೆ ಹಲವು ಲೋಪಗಳು ಬೆಳಕಿಗೆ ಬಂದಿವೆ.

ತಪ್ಪಾದ ಲೇಬಲ್ ಹೊಂದಿದ್ದ 14 ಪ್ಯಾಕೆಟ್ ಚಿಕ್ಕಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವಧಿ ಮೀರಿದ ಐದು ಲೀಟರ್ ನಂದಿನಿ ಮೊಸರನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ಜೊತೆಗೆ ತಪ್ಪಾದ ಲೇಬಲ್ ಹೊಂದಿದ್ದ ಚಾಕೊಲೇಟ್ (Chocolate) ಅಲಂಕಾರ ಸಾಮಗ್ರಿಗಳನ್ನೂ ಪತ್ತೆಹಚ್ಚಲಾಗಿದೆ.

ಅವುಗಳಲ್ಲಿ 13 ದೊಡ್ಡ ಪ್ಯಾಕೆಟ್ಗಳು ಮತ್ತು ಆರು ಸಣ್ಣ ಪ್ಯಾಕೆಟ್ಗಳು ಸೇರಿವೆ. ಹಬ್ಬಗಳ ಸಂದರ್ಭದಲ್ಲಿ ಸಿಹಿತಿಂಡಿಗಳು ಮತ್ತು ಆಹಾರ ಉತ್ಪನ್ನಗಳ ಬಳಕೆ ಹೆಚ್ಚಾಗುವ

ಹಿನ್ನೆಲೆಯಲ್ಲಿ ಇಂತಹ ತಪಾಸಣೆಗಳು ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿವೆ.

ಆಹಾರ ತಯಾರಕರು ಕಡ್ಡಾಯ ಸುರಕ್ಷತಾ ನಿಯಮಗಳು, ನೈರ್ಮಲ್ಯ ಮಾನದಂಡಗಳು ಮತ್ತು ಸರಿಯಾದ ಲೇಬಲಿಂಗ್ ನಿಯಮಗಳನ್ನು ಕಟ್ಟುನಿಟ್ಟಾಗಿ

ಪಾಲಿಸುವುದು ಅಗತ್ಯವಾಗಿದೆ. ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲೂ ಕ್ರಮ ಮುಂದುವರಿಯಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಇದನ್ನು ಓದಿ : https://vijayatimes.com/commercial-lpg-cylinder-price-hike/

Tags: bengaluruFood Departmentraidsweet

Related News

ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಏರಿಕೆ: ಐದು ವರ್ಷಗಳಲ್ಲಿ 15 ಸಾವಿರಕ್ಕೂ ಅಧಿಕ ಕೇಸ್
ಪ್ರಮುಖ ಸುದ್ದಿ

ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಏರಿಕೆ: ಐದು ವರ್ಷಗಳಲ್ಲಿ 15 ಸಾವಿರಕ್ಕೂ ಅಧಿಕ ಕೇಸ್

September 5, 2026
ಪ್ರವಾಸಿಗರಿಗೆ ಗುಡ್‌ನ್ಯೂಸ್: ನಾಲ್ಕು ತಿಂಗಳ ಬಳಿಕ ಹಾರಂಗಿ, ಮತ್ತಿಗೋಡು ಆನೆ ಶಿಬಿರಗಳು ಪುನರಾರಂಭ
ಪ್ರಮುಖ ಸುದ್ದಿ

ಪ್ರವಾಸಿಗರಿಗೆ ಗುಡ್‌ನ್ಯೂಸ್: ನಾಲ್ಕು ತಿಂಗಳ ಬಳಿಕ ಹಾರಂಗಿ, ಮತ್ತಿಗೋಡು ಆನೆ ಶಿಬಿರಗಳು ಪುನರಾರಂಭ

September 5, 2026
ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್: ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ ಎಂದ ಸಿಎಂ ಡಿಕೆ ಶಿವಕುಮಾರ್
ಪ್ರಮುಖ ಸುದ್ದಿ

ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್: ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ ಎಂದ ಸಿಎಂ ಡಿಕೆ ಶಿವಕುಮಾರ್

September 5, 2026
ಶೀಘ್ರದಲ್ಲೇ ದಾಳಿ ಮಾಡುತ್ತೇವೆ: ಇರಾನ್‌ನ ‘ಪಿಕ್ಯಾಕ್ಸ್ ಮೌಂಟನ್’ ಮೇಲೆ ಅಮೆರಿಕದ ಕಣ್ಣು
ದೇಶ-ವಿದೇಶ

ಶೀಘ್ರದಲ್ಲೇ ದಾಳಿ ಮಾಡುತ್ತೇವೆ: ಇರಾನ್‌ನ ‘ಪಿಕ್ಯಾಕ್ಸ್ ಮೌಂಟನ್’ ಮೇಲೆ ಅಮೆರಿಕದ ಕಣ್ಣು

September 5, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.