- ರೈಲ್ವೇ ಸ್ಟಾಕ್ಸ್ ಮತ್ತೆ ಟ್ರೆಂಡ್‌ನಲ್ಲಿ: ಬಜೆಟ್‌ಗೂ ಮುನ್ನ (railway shares union budget ) RVNL, IRFC ಮೇಲೆ ಫೋಕಸ್
- ನಿಫ್ಟಿ ರೈಲ್ವೇ ಪಿಎಸ್‌ಯು ಸೂಚ್ಯಂಕ ಏರಿಕೆ, ಸುರಕ್ಷತಾ ವೆಚ್ಚ ಹೆಚ್ಚಳ ಸಾಧ್ಯತೆ ಮತ್ತು ತಜ್ಞರ ಬಾಟಮ್-ಅಪ್ ತಂತ್ರದ ಮಹತ್ವ
- ಪ್ರಯಾಣಿಕರ ದರ ಏರಿಕೆ, ಹೊಸ ಯೋಜನೆಗಳು ಮತ್ತು ಬಜೆಟ್ ನಿರೀಕ್ಷೆಯಿಂದ ರೈಲ್ವೇ ವಲಯದಲ್ಲಿ ಮತ್ತೆ ಹೂಡಿಕೆ ಚರ್ಚೆ
ಭಾರತೀಯ ಷೇರು ಮಾರುಕಟ್ಟೆ 2026ನೇ ಸಾಲನ್ನು ಉತ್ತಮ ಆರಂಭದೊಂದಿಗೆ (railway shares union budget) ಪ್ರವೇಶಿಸಿದ್ದರೂ, ಇತ್ತೀಚಿನ ವಹಿವಾಟುಗಳಲ್ಲಿ ಸ್ವಲ್ಪ ಮಾರಾಟದ ಒತ್ತಡ ಕಂಡುಬಂದಿದೆ.
ವಿಶೇಷವಾಗಿ ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ (Budget) ಹಿನ್ನೆಲೆ, ಕೆಲವು ವಲಯಗಳು ಹೂಡಿಕೆದಾರರ ಗಮನ ಸೆಳೆಯುತ್ತಿವೆ.
ಅದರಲ್ಲಿ ಪ್ರಮುಖವಾಗಿ ರೈಲ್ವೇ ವಲಯ ಮತ್ತೆ ಟ್ರೆಂಡ್‌ನಲ್ಲಿದ್ದು, (Trend) ಕಳೆದ ಒಂದು ವರ್ಷದಲ್ಲಿ ಮಂದಗತಿಯಲ್ಲಿದ್ದ ರೈಲ್ವೇ ಷೇರುಗಳು ಇದೀಗ ಚೇತರಿಕೆ ಸೂಚನೆ ನೀಡುತ್ತಿವೆ.

ಕಳೆದ 10 ವಹಿವಾಟು ದಿನಗಳಲ್ಲಿ ರೈಲ್ವೇ ವಲಯದ ಷೇರುಗಳು ಸರಾಸರಿ 13% ಏರಿಕೆ ಕಂಡಿರುವುದು (railway shares union budget) ಹೂಡಿಕೆದಾರರಲ್ಲಿ ಹೊಸ ಆಶಾವಾದ ಹುಟ್ಟುಹಾಕಿದೆ.
ಕ್ಯಾಪಿಟಲೈನ್ ಡೇಟಾ (Capitaline data) ಪ್ರಕಾರ, ಇರ್ಕಾನ್ ಇಂಟರ್‌ನ್ಯಾಷನಲ್ (Ircon International) ಷೇರುಗಳು ಸುಮಾರು 14% ಏರಿಕೆ ದಾಖಲಿಸಿದ್ದರೆ, ರೈಲ್ ವಿಕಾಸ್ ನಿಗಮ್ (RVNL) ಸುಮಾರು 10% ಲಾಭ ಗಳಿಸಿದೆ.
ಇದೇ ಅವಧಿಯಲ್ಲಿ ಐಆರ್‌ಎಫ್‌ಸಿ, ಟಿಟಾಗಢ್ ರೈಲ್ ಸಿಸ್ಟಮ್ಸ್ (Titagarh Rail Systems) ಮತ್ತು ಜುಪಿಟರ್ ವ್ಯಾಗನ್ಸ್ ತಲಾ 9%ರಷ್ಟು ಏರಿಕೆ ಕಂಡಿವೆ.
ಆದರೆ, ಐಆರ್‌ಸಿಟಿಸಿ ಮಾತ್ರ ಸೀಮಿತವಾದ 2% ಲಾಭವನ್ನೇ ದಾಖಲಿಸಿದೆ. ಈ ಅಂಕಿಅಂಶಗಳು, ಎಲ್ಲ ರೈಲ್ವೇ ಷೇರುಗಳು ಒಂದೇ ರೀತಿಯ ಪ್ರದರ್ಶನ ನೀಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ತಜ್ಞರ ಅಭಿಪ್ರಾಯದಂತೆ, ರೈಲ್ವೇ ವಲಯಕ್ಕೆ ಇತ್ತೀಚೆಗೆ ಬಲ ನೀಡಿರುವ ಪ್ರಮುಖ ಅಂಶಗಳಲ್ಲಿ ಒಂದೇಂದರೆ ಪ್ರಯಾಣಿಕರ ದರ ಏರಿಕೆ.
ಡಿಸೆಂಬರ್ 26ರಿಂದ ಜಾರಿಗೆ ಬಂದ ದರ ಪರಿಷ್ಕರಣೆ ಮೂಲಕ ರೈಲ್ವೆಗೆ ಸುಮಾರು ₹600 ಕೋಟಿ ಹೆಚ್ಚುವರಿ ಆದಾಯ ಬಂದಿದೆ ಎಂದು ಅಂದಾಜಿಸಲಾಗಿದೆ.
ಇದಲ್ಲದೆ, 2026ರ ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗೆ ಸುಮಾರು ₹1.3 ಟ್ರಿಲಿಯನ್ (Trillion) ಬಂಡವಾಳ ವೆಚ್ಚ ಹಂಚಿಕೆ ಆಗಬಹುದು ಎಂಬ ನಿರೀಕ್ಷೆಯೂ ಇದೆ.
ವೆಂಚುರಾದ ಹೆಡ್ ಆಫ್ ರಿಸರ್ಚ್ ವಿನೀತ್ ಬೋಲಂಜಕರ್ ಅವರ ಪ್ರಕಾರ, ಸುರಕ್ಷತೆ, ಮೂಲಸೌಕರ್ಯ ಸುಧಾರಣೆ ಮತ್ತು ವೇಗದ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.
ಕಳೆದ ಕೆಲವು ವರ್ಷಗಳಲ್ಲಿ ರೈಲ್ವೇ ವಲಯ ಕೇವಲ ಸಾರ್ವಜನಿಕ ಸೇವೆಯ ಮಟ್ಟದಲ್ಲೇ ಸೀಮಿತವಾಗದೇ, ಉತ್ತಮ ಕಾರ್ಯಾಚರಣಾ ದಕ್ಷತೆ ಮತ್ತು ಹಣಕಾಸು ಶಿಸ್ತಿನ ಮೂಲಕ ಲಾಭದಾಯಕ ವಲಯವಾಗಿ ರೂಪುಗೊಳ್ಳುತ್ತಿದೆ.
ಪೂರೈಕೆ ಸರಪಳಿ ಸಮಸ್ಯೆಗಳನ್ನು ನಿವಾರಿಸುವುದು, ಉತ್ಪಾದನೆ ಹಾಗೂ ರಫ್ತು ವ್ಯವಸ್ಥೆಯನ್ನು ಬಲಪಡಿಸುವಲ್ಲಿ ರೈಲ್ವೆಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ಈ ಹಿನ್ನೆಲೆ, ಮುಂದಿನ ಬಜೆಟ್‌ನಲ್ಲಿ ರೈಲ್ವೇಗೆ ದೊಡ್ಡ ಮಟ್ಟದ ಅನುದಾನ ಮುಂದುವರಿಯಲಿದೆ ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿ ಇದೆ.
ವಿಶೇಷವಾಗಿ RVNL ಮತ್ತು IRFC ಹೀಗೆ ಬಲವಾದ ಕಾರ್ಯಾಚರಣಾ ಅನುಪಾತ ಮತ್ತು ಸರ್ಕಾರಿ ಬೆಂಬಲ ಹೊಂದಿರುವ ಪಿಎಸ್‌ಯು ಷೇರುಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
ಆದಾಗ್ಯೂ, ಎಲ್ಲ ರೈಲ್ವೇ ಷೇರುಗಳಲ್ಲಿಯೂ ಅಂಧವಾಗಿ ಹೂಡಿಕೆ ಮಾಡುವುದು ಸೂಕ್ತವಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಎಚ್ಚರಿಸುತ್ತಿದ್ದಾರೆ.
ನಿಫ್ಟಿ ರೈಲ್ವೇ ಪಿಎಸ್‌ಯು ಸೂಚ್ಯಂಕ ಪ್ರಸ್ತುತ 26 ಪಿಇ ಮಲ್ಟಿಪಲ್‌ನಲ್ಲಿ ವಹಿವಾಟು ನಡೆಸುತ್ತಿದ್ದು, ಇದರಲ್ಲಿ ಅಂಡರ್‌ವ್ಯಾಲ್ಯೂಡ್ (Undervalued) ಮತ್ತು ಓವರ್‌ವ್ಯಾಲ್ಯೂಡ್ (Overvalued) ಷೇರುಗಳ ಮಿಶ್ರಣವಿದೆ.
ಆದ್ದರಿಂದ, ಉತ್ತಮ ಆರ್ಡರ್ ಬುಕ್, ಬಲವಾದ ಲಾಭದ ಬೆಳವಣಿಗೆ ಮತ್ತು ಯುಕ್ತ ಮೌಲ್ಯಮಾಪನ ಹೊಂದಿರುವ ಕಂಪನಿಗಳನ್ನು ಆಯ್ಕೆ ಮಾಡುವುದು ಅತ್ಯಗತ್ಯ.
ತಜ್ಞರ ಶಿಫಾರಸಿನ ಪ್ರಕಾರ, ಬಜೆಟ್‌ಗೂ ಮುನ್ನ ಗಮನಿಸಬಹುದಾದ ರೈಲ್ವೇ ಷೇರುಗಳಲ್ಲಿ RVNL, IRFC, IRCTC, ಇರ್ಕಾನ್ ಇಂಟರ್‌ನ್ಯಾಷನಲ್, ಟಿಟಾಗಢ್ ರೈಲ್ ಸಿಸ್ಟಮ್ಸ್ ಮತ್ತು ರೈಟ್ಸ್ ಪ್ರಮುಖವಾಗಿವೆ.
ಇದನ್ನು ಓದಿ : https://vijayatimes.com/karnataka-ranks-second-in-cybercrime/