- ರಾಜ್ಯದೆಲ್ಲೆಡೆ ಜುಲೈ 25ರವರೆಗೆ ಮಳೆಯ ಆರ್ಭಟ (Rain Alert : ರಾಜ್ಯದಲ್ಲಿ ಮುಂದುವರಿದ ಮಳೆರಾಯನ ಆರ್ಭಟ)
- ಕರಾವಳಿ ಮೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ.
- ಸಿಲಿಕಾನ್ ಸಿಟಿಗೆ ಯೆಲ್ಲೋ ಅಲರ್ಟ್ ಘೋಷಣೆ
Bengaluru: ಕಳೆದೆರಡು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ.
ಮುಂದಿನ ದಿನಗಳಲ್ಲಿ ವರುಣನ ಆರ್ಭಟ ಮತ್ತಷ್ಟು ಹೆಚ್ಚಾಗುವ ಹಿನ್ನೆಲೆಯಲ್ಲಿ, ಕರ್ನಾಟಕ ಕರಾವಳಿ ಭಾಗದಲ್ಲಿರುವ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದರೆ.
ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗಿನಲ್ಲಿ ಎರಡು ದಿನ ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಲಾಗಿದೆ.
ಇನ್ನು ಮಂಡ್ಯ, ಮೈಸೂರು, ಚಾಮರಾಜನಗರ,ತುಮಕೂರು ಕೋಲಾರ,ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಗದಗ, ರಾಯಚೂರು ಮತ್ತು ಯಾದಗಿರಿಯಲ್ಲಿ
ಕಳೆದೆರಡು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಇನ್ನೆರಡು ದಿನಗಳ ಕಾಲ ಯೋಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು ಮಳೆಯ ಅಬ್ಬರ ಜೋರಾಗಿರುವುದರಿಂದ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಮಳೆಯ ಜೊತೆಜೊತೆಯಾಗಿ ಜೋರಾದ ಗಾಳಿಯ ಬೀಸುತ್ತದೆ.
ಹಾಗೂ ಗಾಳಿಯವೇಗವು ಹೆಚ್ಚಾಗಲಿರುವ ಕಾರಣದಿಂದಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇನ್ನು ವಿಜಯಪುರ,ಹಾವೇರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲವೂ ಮೋಡ ಕವಿದ ವಾತಾವರಣ
ಮುಂದುವರಿಯಲಿದ್ದು ಸಣ್ಣ ಇಲ್ಲವೇ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಮಳೆಯೊಂದಿಗೆ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿದ್ದು ಚಳಿಯ ವಾತಾವರಣದ ಅನುಭವವಾಗಲಿದೆ.
ಅಲ್ಲದೆ ಭಾನುವಾರ ಶಿವಮೊಗ್ಗ,ರಾಯಚೂರು,ಕೊಪ್ಪ, ಹಾಸನ, ಮಂಗಳೂರು, ಶೃಂಗೇರಿ, ಕಳಸ,ಚಿಕ್ಕಮಗಳೂರು, ಕೊಡಗು,
ಸೋಮವಾರಪೇಟೆ, ಕೊಪ್ಪಳ, ಯಾದಗಿರಿ, ಬೀದರ್, ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲೂ ಹೆಚ್ಚಿನ ಮಳೆಯಾಗಿದೆ.
ಇವೆಲ್ಲದರ ಹೊರತಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿದಿದೆ ಎಂಬುದು ತಿಳಿದುಬಂದಿದೆ.
ಇದರ ಪರಿಣಾಮ, ಕೃಷಿ ಚಟುವಟಿಕೆಗಳು ಜೋರಾಗಿಸಾಗಿವೆ. ಅಲ್ಲದೆ ಜುಲೈ 13 ರಿಂದ 14ರ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 23 ಸೆಂ.ಮೀ., ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 33 ಹಾಗೂ ಉಡುಪಿ ಜಿಲ್ಲೆಯಲ್ಲಿ 39 ಸೆಂ.ಮೀ. ಮಳೆ ಸುರಿದಿರುವುದರಿಂದಾಗಿ ವಾಡಿಕೆಗಿಂತ ಶೇ.12ರಷ್ಟು ಅಧಿಕ ಮಳೆಯಾಗಿದೆ.
ಇನ್ನು ಕೋರಮಂಗಲ, ವಿದ್ಯಾರಣ್ಯಪುರ, ಲಾಲ್ ಬಾಗ್, ಹಂಪಿನಗರ, ಯಶವಂತಪುರ, ಎಲೆಕ್ಟ್ರಾನಿಕ್ ಸಿಟಿ,ಬಾಣಸವಾಡಿ, ಹೆಬ್ಬಾಳ, ಯಲಹಂಕ, ಕೆಂಗೇರಿ, ಆರ್‌ಆರ್.ನಗರ, ಹೊರಮಾವು,ಬೆಳ್ಳಂದೂರು ಭಾಗಗಳಲ್ಲಿ ಸಾಧಾರಣ ಮಳೆ ಆಗಿದೆ.
ಆದರೆ ಮಂಗಳವಾರ ಹವಾಮಾನದ ವೈಪರೀತ್ಯಗಳಿಂದ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಹೀಗಾಗಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಆಗುವ ಸಂಭವ ಹೆಚ್ಚಿದೆ.
ಇನ್ನು ಮುಂಗಾರು ಮಳೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚುರುಕಾಗಿರುವುದರಿಂದ ಅವಧಿಗೂ ಮುನ್ನವೇ ಬಂದಿರುವ ಮುಂಗಾರು ಮಳೆಯು ಪೂರ್ವ ಮುಂಗಾರು ಆರ್ಭಟದ ಬೆನ್ನಲ್ಲೆ ತನ್ನ ಅಬ್ಬರ ಮುಂದುವರಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಇದನ್ನು ಓದಿ : ತಳ್ಳುವ ಗಾಡಿ ವ್ಯಾಪಾರಿಗಳಿಗೂ ತೆರಿಗೆ ನೋಟಿಸ್: ನಗದು ವ್ಯವಹಾರವೇ ಬೆಸ್ಟ್ ಎಂದ ವರ್ತಕರು
ಹೀಗಾಗಿ ಈ ಭಾರಿ ಕರಾವಳಿ ಭಾಗಗಳಲ್ಲಿ ಪ್ರವಾಹ, ಭಾರೀ ಮಳೆ ಇತರ ಸಮಸ್ಯೆಗಳು ಕಾಣುವ ಸೂಚನೆಯಿದೆ.(Rain Alert : ರಾಜ್ಯದಲ್ಲಿ ಮುಂದುವರಿದ ಮಳೆರಾಯನ ಆರ್ಭಟ)