Karnataka : ರಾಜ್ಯದಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ 10 ದಿನಗಳಿಂದ (Rain crop damage compensation) ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ
ಹಲವೆಡೆ ಪ್ರವಾಹ (Flood) ಉಂಟಾಗಿ ಮನೆಗಳಿಗೆ ಹಾನಿಯಾಗಿದೆ. ಲೆಕ್ಕವಿಲ್ಲದಷ್ಟು ಹಲವಾರು ಬೆಳೆಗಳು ನಾಶವಾಗಿವೆ. ಪ್ರವಾಹದಿಂದ ಜನ, ಜಾನುವಾರುಗಳು ತತ್ತರಿಸಿದ್ದವು.ಅತಿವೃಷ್ಟಿ ಮತ್ತು ಪ್ರವಾಹದಿಂದ
ಹಾನಿಗೊಳಗಾದ ಬೆಳೆಗಳಿಗೆ ವಿಪತ್ತು ಪರಿಹಾರ ನಿಧಿಯಡಿ ಇನ್ಪುಟ್ ಸಬ್ಸಿಡಿಗಳನ್ನು (Subsidy) ತಿದ್ದುಪಡಿ ಮಾಡಿ ಮತ್ತು ಹೆಚ್ಚುವರಿ ಮೊತ್ತದ ಜೊತೆಗೆ ಫಲಾನುಭವಿಗಳ ಖಾತೆಗಳಿಗೆ ಪರಿಷ್ಕೃತ ಪರಿಹಾರ
ಮೊತ್ತವನ್ನು ವಿತರಿಸಲು ಕಂದಾಯ ಇಲಾಖೆ (Department of Revenue)ಆದೇಶ ಹೊರಡಿಸಿದೆ.

ಯಾವುದಕ್ಕೆ ಎಷ್ಟು ಪರಿಹಾರ?
ನೀರಾವರಿ ಬೆಳೆ: ನೀರಾವರಿ ಬೆಳೆಗೆ ಅದೇ ರೀತಿ ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ ಪ್ರತಿ ಹೆಕ್ಟೇರ್ಗೆ 17,000 ರೂಪಾಯಿ ಆಗಿದೆ ಆದರೆ ಇದಕ್ಕೆ ರಾಜ್ಯ ಸರ್ಕಾರ 8,000 ರೂಪಾಯಿ ಹೆಚ್ಚುವರಿಯಾಗಿ
ನಿಗದಿಪಡಿಸಿದೆ ಹಾಗಾಗಿ ಪ್ರತಿ ಹೆಕ್ಟೇರ್ಗೆ ಒಟ್ಟು 25,000 ರೂಪಾಯಿ ಪರಿಹಾರವನ್ನು (Rain crop damage compensation) ವಿತರಿಸಲಾಗುತ್ತದೆ.
ಮಳೆಯಾಶ್ರಿತ ಬೆಳೆ: ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ ಪ್ರತಿ ಹೆಕ್ಟೇರ್ಗೆ ಒಟ್ಟು 8,500 ರೂಪಾಯಿ ಆಗಿದೆ ಆದರೆ ರಾಜ್ಯ ಸರ್ಕಾರ ಇದಕ್ಕೆ 5,100 ರೂಪಾಯಿ ಹೆಚ್ಚುವರಿಯಾಗಿ ನಿಗದಿಪಡಿಸಿದೆ ಹಾಗಾಗಿ ಪ್ರತಿ
ಹೆಕ್ಟೇರ್ಗೆ ಒಟ್ಟು 13,600 ರೂಪಾಯಿ ಪರಿಹಾರವನ್ನು ವಿತರಿಸಲಾಗುತ್ತದೆ.
ಬಹು ವಾರ್ಷಿಕ (ತೋಟಗಾರಿಕೆ) ಬೆಳೆ: ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ ಬಹು ವಾರ್ಷಿಕ ಬೆಳೆಗೆ 22,500 ರೂಪಾಯಿ ಅನ್ನು ಪ್ರತಿ ಹೆಕ್ಟೇರ್ಗೆ ನಿಗದಿ ಪಡಿಸಿದೆ ಆದರೆ , ರಾಜ್ಯ ಸರ್ಕಾರ ಇದಕ್ಕೆ 5,500
ರೂಪಾಯಿ ಹೆಚ್ಚುವರಿಯಾಗಿ ನಿಗದಿಪಡಿಸಿದೆ ಆದ್ದರಿಂದ ಪ್ರತಿ ಹೆಕ್ಟೇರ್ಗೆ ಒಟ್ಟು 28,000 ರೂಪಾಯಿ ಪರಿಹಾರವನ್ನು ವಿತರಿಸಲು ನಿರ್ಧರಿಸಲಾಗಿದೆ.
ರೈತರಿಗೆ ಆರ್ಥಿಕ ನೆರವು ಹೆಚ್ಚಿಸಿ
ಬೆಳೆ ಹಾನಿಗಾಗಿ ವಿಪತ್ತು ಪ್ರತಿಕ್ರಿಯೆ ನಿಧಿಯ ವಾರ್ಷಿಕ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕೃತ ಪರಿಹಾರವನ್ನು (ಇನ್ಪುಟ್ ಸಬ್ಸಿಡಿ) ಅರ್ಹ ಪ್ರಕರಣಗಳಿಗೆ ಮಾತ್ರ ಪಾವತಿಸಲಾಗುತ್ತದೆ. 2023 ರಲ್ಲಿ
ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದಾಗಿ ಮತ್ತು ಅತಿವೃಷ್ಟಿಯಿಂದ ಆದ ಬೆಳೆ ನಷ್ಟಕ್ಕೆ ಪರಿಷ್ಕೃತ ದರಗಳನ್ನು ನಿರ್ಧರಿಸಲಾಗಿದೆ.
ಇದನ್ನೂ ಓದಿ : ಬೆಳೆ ವಿಮೆ ಗೋಲ್ಮಾಲ್ ! ರೈತ ಬೆಳೆಗೆ ಖರ್ಚು ಮಾಡಿದ್ದು 15 ಸಾವಿರ ಆದರೆ ವಿಮೆ ಸಿಕ್ಕಿದ್ದು ಕೇವಲ 960ರೂ!
ಬೆಳೆ ನಷ್ಟದಿಂದ ಹಾನಿಗೊಳಗಾದ ರೈತರಿಗೆ ಕಳೆದ ವರ್ಷ ಕೇಂದ್ರ ಸರ್ಕಾರದ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿ ಪರಿಷ್ಕೃತ ದರದಲ್ಲಿ ಪರಿಹಾರ ನೀಡಲಾಗಿತ್ತು ಇದೀಗ
ಅದರಂತೆ ಗರಿಷ್ಠ 2 ಹೆಕ್ಟೇರ್ಗೆ ಇನ್ ಪುಟ್ ಸಬ್ಸಿಡಿ ಮೊತ್ತವನ್ನು ಸೀಮಿತಗೊಳಿಸಿ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಈ ಪರಿಹಾರ ಹಣ ಪಡೆಯಲು ಇರುವ ಶರತ್ತುಗಳೇನು?
ಹಲವು ಷರತ್ತುಗಳನ್ನು ಸರ್ಕಾರ ಈ ಪರಿಷ್ಕೃತ ಇನ್ಪುಟ್ ಸಬ್ಸಿಡಿ ಪಡೆಯಲು ವಿಧಿಸಿದೆ. 2023ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ (1ನೇ ಅಕ್ಟೋಬರ್ ನಿಂದ 31ನೇ ಡಿಸೆಂಬರ್ ವರೆಗೆ) ಹಾಗೂ ಮುಂಗಾರು
ಹಂಗಾಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ವರೆಗೆ) ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅತಿವೃಷ್ಟಿ ಅಥವಾ ಪ್ರವಾಹದಲ್ಲಿ ಬೆಳೆ ಹಾನಿಯಾಗಿರಬೇಕು.
ಇದನ್ನೂ ಓದಿ : ನಂದಿನಿ ಹಾಲು ಖರೀದಿ ದರ ಗ್ರಾಹಕರಿಗೆ 3 ರೂ ಏರಿಕೆ ; ಆದರೆ ಹೈನುಗಾರರಿಗೆ 50 ಪೈಸೆ ಮಾತ್ರ ಲಾಭ!
ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಪ್ರತ್ಯೇಕವಾಗಿ ನಿಗದಿಪಡಿಸಿರುವ ಅನುಬಂಧ-5ಬಿ, 5ಸಿ ಮತ್ತು 5ಡಿ ರಲ್ಲಿ ಸಂಬ೦ಧಪಟ್ಟ ಜಿಲ್ಲಾಧಿಕಾರಿಗಳು ಜಂಟಿ ಸರ್ವೇ ತಂಡ ರಚಿಸಿ ಉಲ್ಲೇಖಿತ ಬೆಳೆ ಹಾನಿ ಸಮೀಕ್ಷೆಯನ್ನು
ನಮೂದಿಸಿ ಸರ್ಕಾರಕ್ಕೆ ಸಲ್ಲಿಸಬೇಕು.ಅರ್ಹ ಫಲಾನುಭವಿಗಳ ವಿವರವನ್ನು ಉಲ್ಲೇಖಿತ ಮಾರ್ಗಸೂಚಿಗಳನ್ವಯ ಸಂಬ೦ಧಪಟ್ಟ ಜಿಲ್ಲಾಧಿಕಾರಿಗಳು ಪರಿಹಾರ ತಂತ್ರಾಂಶದಲ್ಲಿ ನಿಯಮಾನುಸಾರ ದಾಖಲಿಸಲು
ಕ್ರಮ ವಹಿಸಬೇಕು.
ಬೆಳೆ ಹಾನಿ ಪ್ರಕರಣಗಳಿಗೆ ಸಂಬ೦ಧಿಸಿದ೦ತೆ ಪರಿಹಾರ ತಂತ್ರಾಂಶದಲ್ಲಿ ಏನಾದರೂ ಲೋಪದೋಷಗಳು ಮಾಹಿತಿಯನ್ನ ನಮೂದಿಸುವುದರಲ್ಲಿ ಉಂಟಾದಲ್ಲಿ ಸಂಬ೦ಧಪಟ್ಟ ಅಧಿಕಾರಿಗಳನ್ನು ಮತ್ತು
ಸಿಬ್ಬಂದಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಪರಿಹಾರಕ್ಕೆ ಅರ್ಜಿ ಎಲ್ಲಿ ಸಲ್ಲಿಸಬೇಕು?
- ನಿಮ್ಮ ಸಮೀಪದ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿ ಬೆಳೆ ಹಾನಿ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
- ನಿಮ್ಮ ಹತ್ತಿರದ ಪಶುಪಾಲನೆ ಇಲಾಖೆಯಲ್ಲಿ ಜಾನುವಾರಗಳ ಪರಿಹಾರ ಹಣಕ್ಕೆ ಸಂಬ೦ಧಿಸಿದ೦ತೆ ಅರ್ಜಿ ಹಾಕಬೇಕು.
- ಕಂದಾಯ ಇಲಾಖೆ, ಪಂಚಾಯತ್ನಲ್ಲಿ ನಿಮ್ಮ ಮನೆ, ಆಸ್ತಿ ಇತ್ಯಾದಿ ಪರಿಹಾರಕ್ಕೆ ಸಂಬ೦ಧಿಸಿದ೦ತೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ಸ್ಟೇಟಸ್ ಅನ್ನು
https://landrecords.karnataka.gov.in/PariharaPayment/
ವೆಬ್ಸೈಟ್ಗೆ(Website) ಭೇಟಿ ನೀಡಿ ಪರಿಹಾರದ ಮೊತ್ತವನ್ನು ಮತ್ತು ಅರ್ಜಿ ಸ್ಥಿತಿ ಚೆಕ್ ಮಾಡಬಹುದು.
ರಶ್ಮಿತಾ ಅನೀಶ್