ಬೆಂಗಳೂರು, ಜ. 20: ರೈತರ ಆತ್ಮಹತ್ಯೆಗೆ ವೀಕ್ ಮೈಂಡ್ ಕಾರಣ ಎಂಬ ಕೃಷಿ ಬಿ.ಸಿ. ಪಾಟೀಲ್ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ಖಂಡಿಸಿದೆ.
ರಾಜ್ಯ ಬಿಜೆಪಿ ಸರ್ಕಾರ ಲಜ್ಜೆ ಬಿಟ್ಟ ಸರ್ಕಾರವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದ ಕೃಷಿ ಸಚಿವರಾದ ನಿಮ್ಮ ಬಿ.ಸಿ.ಪಾಟೀಲ್ ಈಗ ಮತ್ತೊಮ್ಮೆ ರೈತರ ಆತ್ಮಹತ್ಯೆಗೆ ಅವರ ವೀಕ್ ಮೈಂಡ್ ಕಾರಣ, ಸರ್ಕಾರದ ನೀತಿಗಳಲ್ಲಾ ಎಂದಿದ್ದಾರೆ.
ರೈತರಿಗೆ ಅವಮಾನಿಸುವ ಪಕ್ಷವಾದ ನಿಮಗೆ ಅವರ ಮಾತುಗಳಿಗೆ ಸ್ಪಷ್ಟನೆ ಕೊಡುವ ಯೋಗ್ಯತೆ ಇದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಬಿ.ಸಿ. ಪಾಟೀಲ್, ರೈತರ ಆತ್ಮಹತ್ಯೆಗೆ ವೀಕ್ ಮೈಂಡ್ ಕಾರಣ ಎಂದಿದ್ದರು.
ಲಜ್ಜೆ ಬಿಟ್ಟ @BJP4Karnataka
— Karnataka Congress (@INCKarnataka) January 20, 2021
ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದ ಕೃಷಿ ಸಚಿವರಾದ ನಿಮ್ಮ @bcpatilkourava ಈಗ ಮತ್ತೊಮ್ಮೆ
ರೈತರ ಆತ್ಮಹತ್ಯೆಗೆ ಅವರ ವೀಕ್ ಮೈಂಡ್ ಕಾರಣ,ಸರ್ಕಾರದ ನೀತಿಗಳಲ್ಲ ಅಂದಿದ್ದಾರೆ.
ರೈತರಿಗೆ ಅವಮಾನಿಸುವ ಪಕ್ಷವಾದ ನಿಮಗೆ ಅವರ ಮಾತುಗಳಿಗೆ ಸ್ಪಷ್ಟನೆ ಕೊಡುವ ಯೋಗ್ಯತೆ ಇದೆಯೇ?#RajBhavanChalo https://t.co/UeoWBMumiQ pic.twitter.com/bfUsgG09tC