ಬೆಂಗಳೂರು, ಡಿ. 08: ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ನಟ ಚೇತನ್ ಮಾತನಾಡಿದ ಬೆನ್ನಲ್ಲೇ ನಟ ಶಿವರಾಜ್ಕುಮಾರ್ ರೈತರ ಪರಿವಾಗಿ ದನಿಯೆತ್ತಿದ್ದಾರೆ.
ʻರೈತ ದೇಶದ ಬೆನ್ನೆಲುಬು, ರೈತ ಇದ್ದರೇನೆ ದೇಶ. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆʼ ಎಂದು ನಟ ಶಿವರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.
ಚುನಾವಣಾ ಪ್ರಚಾರಗಳಿಗೆ ಧುಮುಕುವ ನಟರು ರೈತರಿಗೆ ಬೆಂಬಲವಾಗಿ ಒಂದು ಮಾತನ್ನೂ ಆಡಿಲ್ಲʼ ಎಂದು ಟೀಕಿಸಿ ಚೇತನ್ ಟ್ಟೀಟ್ ಮಾಡಿದ್ದರು. ಇದರ ಬೆನ್ನಲ್ಲೇ ನಾವು ಕೂಡ ರೈತರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂಬ ಆಶಯದಲ್ಲಿ ಶಿವರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.