ಮುಂಬೈ, ಅ. 02: ನೀಲಿ ಚಿತ್ರ ನಿರ್ಮಾಣ ಪ್ರಕರಣದ ಮಾಸ್ಟರ್ ಮೈಂಡ್ ರಾಜ್ ಕುಂದ್ರಾ ಬಂಧನ ಹಿನ್ನೆಲೆ ಸಹನೆ ಕಳೆದುಕೊಂಡಿರುವ ನಟಿ ಶಿಲ್ಪಾ ಶೆಟ್ಟಿ, ಪೊಲೀಸರ ಮೇಲೆ ರೇಗಾಡಿ ಮಾಧ್ಯಮಗಳ ವಿರುದ್ಧ ಕೂಗಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಪತಿ ರಾಜ್ ಕುಂದ್ರಾ ಪ್ರಕರಣ ಸಂಬಂಧ ಈವರೆಗೂ ಮೌನಕ್ಕೆ ಶರಣಾಗಿದ್ದ ಶಿಲ್ಪಾ ಶೆಟ್ಟಿ ಈಗ ಕೂಲ್ ಆಗಿದ್ದು, ತಮ್ಮ ಒಡಲಾಳದ ನೋವು ತೋಡಿಕೊಂಡಿದ್ದಾರೆ. ಈ ಸಂಬಂಧ ತಮ್ಮ ಇನ್ಸ್ಟಾಗಾಂ ಖಾತೆಯಲ್ಲಿ ಹಲವು ವಿವರ ನೀಡಿದ್ದಾರೆ.
ನನ್ನ ಪತಿ ಬಂಧನ ಸಂಬಂಧ ಮಾಧ್ಯಮಗಳು ಹಾಗೂ ಹಿತೈಷಿಗಳಿಂದ ನನ್ನ ವಿರುದ್ಧ ಅನಪೇಕ್ಷಿತ ಆರೋಪಗಳು ಕೇಳಿ ಬರುತ್ತಿವೆ. ಇದರ ಪರಿಣಾಮ ಕೆಲವು ದಿನಗಳಿಂದ ನಾನು ಸಾಲು ಸಾಲು ಸವಾಲುಗಳನ್ನು ಎದುರಿಸುತ್ತೇನೆ. ನನ್ನ ಹಾಗೂ ನಮ್ಮ ಕುಟುಂಬದ ಬಗ್ಗೆ ಸಾಕಷ್ಟುಆರೋಪ ಮಾಡುತ್ತಿದ್ದು, ಟ್ರೋಲ್ ಮಾಡುತ್ತಿದ್ದಾರೆ ಎಂದು ಶಿಲ್ಪಾ ಶೆಟ್ಟಿ ನೋವಿನ ಮಾತು ಹೇಳಿದ್ದಾರೆ.
ರಾಜ್ ಕುಂದ್ರಾ ಪ್ರಕರಣದಲ್ಲಿ ಪೂರ್ವಾಗ್ರಹವಾಗಿದೆ. ಈ ಕಾರಣದಿಂದ ನಾನು ಆ ಪ್ರಕರಣ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸತ್ಯ ತಿಳಿಯದೆ ಅರಬೆಂದ ಮಾಹಿತಿ ಪ್ರಚಾರ ಮಾಡಬೇಡಿ ಹಾಗೂ ಹಂಚಬೇಡಿ. ಈಗ ನಾನು ಕಾನೂನು ಹೋರಾಟ ಮಾಡುತ್ತಿದ್ದೇನೆ. ದಯವಿಟ್ಟು ನನ್ನ ವಿರುದ್ಧದ ಆರೋಪಗಳನ್ನು ನಿಲ್ಲಿಸಿ ಎಂದು ಶಿಲ್ಪಾ ಶೆಟ್ಟಿ ಮನವಿ ಮಾಡಿದ್ದಾರೆ.
ಕಳೆದ 29 ವರ್ಷದಲ್ಲಿ ಏರುಪೇರು ಕಾಣುತ್ತಾ ಕಠಿಣ ಪರಿಶ್ರಮದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಜನತೆ ನನ್ನ ಮೇಲೆ ನಂಬಿಕೆ ಇಟ್ಟಿದ್ದು, ಅದನ್ನು ಹುಸಿಗೊಳಿಸುವುದಿಲ್ಲ. ದಯಮಾಡಿ ನನ್ನ ಕುಟುಂಬದ ಗೌಪ್ಯತೆ ಕಾಪಾಡಿರಿ. ನನಗೆ ಮಾಧ್ಯಮಗಳ ವಿಚಾರಣೆ ಬೇಕಿಲ್ಲ. ಕಾನೂನು ಹೋರಾಟ ನಡೆಸುತ್ತೇನೆ ಎಂದು ಶಿಲ್ಪಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದ ತಿಳಿಸಿದ್ದಾರೆ.