Jailar : ನನ್ನ ‘ಸೂಪರ್ ಸ್ಟಾರ್’ ಟ್ಯಾಗ್ ತೆಗೆಯಿರಿ ! ‘ಸೂಪರ್ ಸ್ಟಾರ್’ ಟೈಟಲೇ ನನಗೆ ಸಮಸ್ಯೆಯಾಗುತ್ತಿದೆ ಅಂದ್ರು ರಜನಿಕಾಂತ್. (Rajanikant no superstar tag)ಆಗಸ್ಟ್ 10 ರಂದು ‘ಸೂಪರ್ ಸ್ಟಾರ್’

ರಜನಿಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಮೋಹನ್‌ಲಾಲ್, ಜಾಕಿಶ್ರಾಫ್, ತಮನ್ನಾ ಮುಂತಾದವರು ನಟಿಸಿರುವ ‘ಜೈಲರ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದ ವೇಳೆ ಈ ಮಾತನ್ನು ಹೇಳಿದ್ರು.
ಸನ್ ಪಿಕ್ಚರ್ಸ್ ನಿರ್ಮಾಣದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಆಡಿಯೋ ಲಾಂಚ್ ಅದ್ಧೂರಿಯಾಗಿ ಚೆನ್ನೈನಲ್ಲಿ ನಡೆಯಿತು. ಈ ವೇಳೆ ರಜನಿಕಾಂತ್ ಅವರ ಭಾಷಣವೇ ಹೈಲೈಟ್ ಆಗಿತ್ತು.
ಅಲ್ಲದೆ ಈ ಸಲ ಕೂಡ ರಜನಿಕಾಂತ್ ಸೂಪರ್ ಆಗಿ ಮಾತನಾಡಿ ಫ್ಯಾನ್ಸ್‌ಗಳಿಗೆ ಮನರಂಜಿಸಿದ್ದಾರೆ. ಇದೇ ಸಮಯದಲ್ಲಿ ಅವರ ಹೆಸರಿನ ಜೊತೆ ಸೇರಿರುವ ಸೂಪರ್ ಸ್ಟಾರ್ ಟ್ಯಾಗ್ ಅನ್ನು ತೆಗೆಯುವಂತೆ ಹೇಳಿದ್ದಾರೆ.
ರಜನಿಕಾಂತ್ ಅವರನ್ನು ಮಾತ್ರ ಅಭಿಮಾನಿಗಳು ‘ಸೂಪರ್ ಸ್ಟಾರ್’ ಎನ್ನುತ್ತಾರೆ. ಅಲ್ಲದೆ ಅವರನ್ನು ‘ಸೂಪರ್ ಸ್ಟಾರ್ ರಜನಿಕಾಂತ್’ ಎಂದೇ ಎಲ್ಲರೂ ಕರೆಯುತ್ತಾರೆ. ಆದರೆ ಸ್ವತಃ ರಜನಿಕಾಂತ್ ಅವರೇ ಈ ‘ಸೂಪರ್
ಸ್ಟಾರ್’ ಟ್ಯಾಗ್ ಅನ್ನು ತೆಗೆದುಹಾಕುವಂತೆ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾವಾಗಲೂ ಈ ಸೂಪರ್ ಸ್ಟಾರ್ ಟೈಟಲ್ ಸಮಸ್ಯೆಯೇ ಆಗಿದ್ದು, ‘ಜೈಲರ್’ ಚಿತ್ರದ ಹುಕುಮ್
ಹಾಡಿನಲ್ಲಿರುವ ಸೂಪರ್ ಸ್ಟಾರ್ ಪದವನ್ನು ತೆಗೆಯುವಂತೆ ಸಲಹೆ ಕೊಟ್ಟಿದ್ದೆ’ (Rajanikant no superstar tag) ಎಂದರು.
ಅಣ್ಣಾಥೆ ಚಿತ್ರದ ನಂತರ ಬಹಳ ಕಥೆಗಳನ್ನು ಕೇಳಿದ್ದೆ. ಆದರೆ ಎಲ್ಲವೂ ಸಹ ಬಾಷಾ, ಅಣ್ಣಾಮಲೈ, ರೀತಿಯಲ್ಲೇ ಇದ್ದವು. ನಾನು ಬಹಳಷ್ಟು ಸ್ಕ್ರಿಪ್ಟ್‌ಗಳನ್ನು ನಿರಾಕರಿಸಿದ್ದೇನೆ. ಇವರೆಲ್ಲರೂ ದೊಡ್ಡ
ಪ್ರಮಾಣದಲ್ಲಿ ಪ್ರಯತ್ನಿಸುತ್ತಿದ್ದರು. ನನಗೆ ಆಗ ಬೇಸರ ಉಂಟಾಯಿತು. ಕೊನೆಗೆ ಸ್ಕ್ರಿಪ್ಟ್‌ಗಳನ್ನು ಕೇಳುವುದನ್ನೇ ನಿಲ್ಲಿಸಿ ಬಿಟ್ಟೆ. ಒಮ್ಮೆ ನೆಲ್ಸನ್ ದಿಲೀಪ್‌ಕುಮಾರ್ ಒಂದು ಲೈನ್ ಹೇಳಿದ್ದರು. ಅದನ್ನು
ಇನ್ನಷ್ಟು ಇಂಪ್ರೂವ್ ಮಾಡಿಕೊಂಡು ಬರಲು ಹೇಳಿದ್ದೆ. ಅವರು 10 ದಿನಗಳ ನಂತರ ಬೀಸ್ಟ್ ಶೂಟಿಂಗ್ ಮುಗಿಸಿ ಬಂದ ಮೇಲೆ ನನಗೆ ಕಥೆ ಹೇಳಿದ್ದರು. ಆಗ ಅದು ನನಗೆ ಅದ್ಭುತವೆನಿಸಿತ್ತು ಎಂದು
ರಜನಿಕಾಂತ್ ಆಡಿಯೋ ಲಾಂಚ್ ಅಲ್ಲಿ ಹೇಳಿದ್ದಾರೆ.

ಸಿನಿಮಾದ ನಿರ್ದೇಶಕರಾದ ಮುತ್ತುರಾಮನ್, ಮಹೇಂದ್ರನ್, ಸುರೇಶ್ ಕೃಷ್ಣ, ವಾಸು, ಕೆ ಎಸ್ ರವಿಕುಮಾರ್, ಶಂಕರ್, ಪಾ ರಂಜಿತ್, ಕಾರ್ತಿಕ್ ಸುಬ್ಬರಾಜ್, ನೆಲ್ಸನ್ ಅವರನ್ನು ನೆನೆದು, ನನ್ನ ಕರಿಯರ್
ಒಂದು ಒಳ್ಳೆ ರೂಪ ಪಡೆಯಲು ಇವರೆಲ್ಲ ಕಾರಣ ಎಂದು ರಜನಿ ಮಾತನಾಡಿದರು.
ಸನ್ ಪಿಕ್ಚರ್ಸ್ ಒಡೆತನದಲ್ಲಿ ಎಲ್ಲರಿಗೂ ತಿಳಿದಿರುವಂತೆ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡ ಇದ್ದು, ಸನ್ ಪಿಕ್ಚರ್ಸ್ನ ಮಾಲೀಕರಾದ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್, ಸನ್‌ರೈಸರ್ಸ್
ಹೈದರಾಬಾದ್ ತಂಡವನ್ನು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿದ ರಜನಿಕಾಂತ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಕಲಾನಿಧಿ ಮಾರನ್ ರವರು ಉತ್ತಮ ಆಟಗಾರರನ್ನು
ಆಯ್ಕೆ ಮಾಡಿಕೊಳ್ಳಬೇಕು. ಕ್ರೀಡಾಂಗಣದಲ್ಲಿ ಕಾವ್ಯಾ ಮಾರನ್ ಬೇಸರದಿಂದ ಇರುವುದನ್ನು ನೋಡುವುದಕ್ಕೆ ನನಗೆ ಇಷ್ಟವಿಲ್ಲ ಎಂದು ರಜನಿಕಾಂತ್ ಹೇಳಿದರು.
ನಿರ್ದೇಶಕ ನೆಲ್ಸನ್ ಅವರ ಹಿಂದಿನ ಸಿನಿಮಾ ‘ಬೀಸ್ಟ್’ ದೊಡ್ಡಮಟ್ಟಿಗೆ ಯಶಸ್ಸು ಸಾಧಿಸಿರಲಿಲ್ಲ. ಹಾಗಾಗಿ ರಜನಿಕಾಂತ್ ನೆಲ್ಸನ್‌ಗೆ ಸಿನಿಮಾದಿಂದ ಕೋಕ್ ನೀಡುವುದು ಉತ್ತಮ ಎಂಬ ಸಲಹೆಗಳು ಕೇಳಿ ಬಂದಿದ್ದವು.
ಅದರ ಬಗ್ಗೆ ಮಾತಾಡಿರುವ ರಜನಿಕಾಂತ್ ನಾವು ಸನ್ ಪಿಕ್ಚರ್ಸ್ ಆಫೀಸ್‌ನಲ್ಲಿ ಒಂದು ಆಂತರಿಕ ಸಭೆ ನಡೆಸಿದ್ದೆವು. ಬೀಸ್ಟ್ ಸಿನಿಮಾವು ಉತ್ತಮ ಪ್ರತಿಕ್ರಿಯೆ ಪಡೆಯದಿದ್ದರೂ, ವಿತರಕರಿಗೆ ಯಾವುದೇ ಹಾನಿ
ಉಂಟಾಗಿಲ್ಲ ಎಂಬ ವಿಚಾರ ಚರ್ಚೆಗೆ ಬಂತು ಎಂದು ರಜನಿಕಾಂತ್ ಹೇಳಿದರು. ಕೊನೆಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನೆಲ್ಸನ್‌ರನ್ನೇ ಫೈನಲ್ ಮಾಡಿದ್ದರಂತೆ ಎಂದು ಹೇಳಿದರು.
- ಭವ್ಯಶ್ರೀ ಆರ್.ಜೆ