Chennai : ತಮಿಳು ಚಿತ್ರರಂಗದ ಹಿರಿಯ ನಟ ತಲೈವಾ ರಜನಿಕಾಂತ್(Talaiwa Rajnikanth) ಅವರು ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ(Rajnikanth Likes Kantara) ಚಿತ್ರವನ್ನು ನೋಡಿ ವಿಮರ್ಶಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾವೂ ‘ಭಾರತೀಯ ಚಿತ್ರರಂಗದ ಮೇರುಕೃತಿ’. ಚಿತ್ರದ ನಾಯಕ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಅವರ ಪ್ರಯತ್ನವನ್ನು ಅದ್ಭುತವಾಗಿದೆ ಎಂದಿದ್ದಾರೆ.
ಕನ್ನಡದ ಸೆನ್ಸೇಷನ್ ಸಿನಿಮಾವಾಗಿರುವ ಕಾಂತಾರವನ್ನು ಹಾಡಿ ಹೊಗಳುತ್ತಿರುವ ಭಾರತೀಯ ಸೆಲೆಬ್ರಿಟಿಗಳ ದಂಡಿಗೆ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಸೇರ್ಪಡೆಯಾಗಿದ್ದಾರೆ.
ಕಾಂತಾರ ಸಿನಿಮಾ ವೀಕ್ಷಿಸಿ ಸಂತಸಪಟ್ಟ ಸೂಪರ್ ಸ್ಟಾರ್ ರಜನಿಕಾಂತ್, ಬುಧವಾರ ಟ್ವಿಟರ್‌ನಲ್ಲಿ(Rajnikanth Likes Kantara) ಕಾಂತಾರ ಚಿತ್ರತಂಡವನ್ನು ಈ ರೀತಿ ಹೊಗಳಿದ್ದಾರೆ.
“ಕಾಂತಾರ ಚಿತ್ರವೂ ಒಂದು ಮೇರುಕೃತಿ. ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿಗೆ ನನ್ನ ವಿಶೇಷ ಪ್ರಶಂಸೆ, ಶ್ಲಾಘನೆ.
ರಜನಿಕಾಂತ್ ಟ್ವೀಟ್ : https://twitter.com/rajinikanth/status/1585190099444469761?s=20&t=rWiDxKcGr4amXqw2xRmaAg
ಸಿನಿಮಾವನ್ನು ತಯಾರು ಮಾಡುವಲ್ಲಿ ರಿಷಬ್ ಅವರ ಪಾತ್ರ ಪ್ರಮುಖವಾದದ್ದು, ರಿಷಬ್ ಅವರು ನನ್ನನ್ನು ರೋಮಾಂಚನಗೊಳಿಸಿದ್ದಾರೆ” ಎಂದು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.
ಕಾಂತಾರ ಚಿತ್ರವೂ ಜಗತ್ತಿನೆಲ್ಲೆಡೆ ವ್ಯಾಪಕ ಮೆಚ್ಚುಗೆಗಳನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಿದೆ.
ಇದನ್ನೂ ಓದಿ : https://vijayatimes.com/chethan-ahimsa-over-kantara/
ಕಳೆದ ತಿಂಗಳು ಬಿಡುಗಡೆಯಾದ ಸಮಯದಿಂದಲೂ ಸಾರ್ವತ್ರಿಕ ಮೆಚ್ಚುಗೆಯನ್ನು ಗಳಿಸಿದೆ ಮತ್ತು ಪ್ರಸ್ತುತ #IMDb ಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ.
ರಜನಿಕಾಂತ್ ಅವರಂತೆ ಭಾರತೀಯ ಚಿತ್ರರಂಗದ ಅನೇಕ ಕಲಾವಿದರು ಕಾಂತಾರ ಸಿನಿಮಾ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.
ಆ ಪೈಕಿ ಕಂಗನಾ ರಣಾವತ್ ಅವರು, ‘ಕಾಂತಾರ ಮುಂದಿನ ವರ್ಷ ಆಸ್ಕರ್‌ಗೆ ಭಾರತದಿಂದ ಪ್ರವೇಶವಾಗಬೇಕು’ ಎಂದು ಬುಧವಾರ ಟ್ವೀಟ್ ಮಾಡಿ ತಿಳಿಸಿದ್ದರು.
ಅದೇ ರೀತಿ ಡಾರ್ಲಿಂಗ್ ಪ್ರಭಾಸ್, ಕಂಗನಾ ರನೌತ್, ರಾಮ್ ಗೋಪಾಲ್ ವರ್ಮಾ, ದ ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಖ್ಯಾತ ಕಲಾವಿದರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : https://vijayatimes.com/kantara-copied-our-song/
ಕಾಂತಾರ ಕನ್ನಡ ಚಲನಚಿತ್ರವಾಗಿದ್ದು, ಮನುಷ್ಯ ಮತ್ತು ಪ್ರಕೃತಿಯಂತಹ ಸಮಸ್ಯೆಗಳನ್ನು ಮತ್ತು ಕರಾವಳಿ ಕರ್ನಾಟಕದ ಭೂ ವಿವಾದಗಳನ್ನು ಸ್ಥಳೀಯ ನಂಬಿಕೆಗಳು ಮತ್ತು ದೈವಗಳ ಸುತ್ತಲಿನ ನಂಬಿಕೆಯ ಕಥಾಹಂದರವಾಗಿದೆ.
ಸದ್ಯ ಕಾಂತಾರ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ಮುಖ ಮಾಡುವಂತೆ ಮಾಡಿರುವುದು ಹೆಮ್ಮೆಯ ಸಂಗತಿ.
ಜಾಗತಿಕವಾಗಿ ಕಾಂತಾರ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂ. ಕಲೆಕ್ಷನ್ ಮಾಡಿ, ಮೂರನೇ ಕನ್ನಡ ಚಿತ್ರ ಎಂಬ ಸ್ಥಾನವನ್ನು ಅಲಂಕರಿಸಿದೆ. ಜಗತ್ತಿನಾದ್ಯಂತ ಕಾಂತಾರ ಮಾಡುತ್ತಿರುವ ಸದ್ದು, ಕನ್ನಡಿಗರ ಕಿವಿಯನ್ನು ಅಪ್ಪಳಿಸುತ್ತಿದೆ, ಹೃದಯವನ್ನು ಸ್ಪರ್ಶಿಸುತ್ತಿದೆ ಎಂಬುದರಲ್ಲಿ ಅನುಮಾನವೇ ಇಲ್ಲ!