ಬೆಂಗಳೂರು, ನ. 26: ಮರಾಠಾ, ಲಿಂಗಾಯತ ವೀರಶೈವ ಸರ್ಕಾರದಿಂದ ಈಗಾಗಲೇ ಅನುಮೋದನೆ ನೀಡಿದ ಬೆನ್ನಲ್ಲೇ ಬೇರೆ ಬೇರೆ ಸಮುದಾಯಗಳಿಂದ ತಮ್ಮ ಸಮುದಾಯಕ್ಕೂ ನಿಗಮ ರಚನೆ ಮಾಡುವಂತೆ ಒತ್ತಾಯ ಹೆಚ್ಚುತ್ತಿದೆ. ಹೀಗೆ ರಾಜ್ಯ ಸರ್ಕಾರಕ್ಕೆ ನಿಗಮ ರಚನೆಯ ತಲೆನೋವು ಇನ್ನು ಕಡಿಮೆಯಾಗದಿರುವುದಂತು ಖಚಿತ.
ಕನ್ನಡ ಪರ ಸಂಘಟನೆಗಳು ಈಗಾಗಲೇ ಮರಾಠಾ ನಿಗಮ ರಚನೆ ಮಾಡಿದ್ದರಿಂದ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದು, ಇದೆಲ್ಲದರ ನಡುವೆ ನೇಕಾರರ ಸಮುದಾಯದಿಂದಲೂ ತಮಗೂ ನೇಕಾರ ಅಭಿವೃದ್ಧಿ ನಗಮ ರಚನೆ ಮಾಡುವಂತೆ ಒತ್ತಡ ಹೇರುತ್ತಿದೆ.
ನೇಕಾರ ಅಭಿವೃದ್ಧಿ ನಿಗಮದ ಬಗ್ಗೆ ನೇಕಾರ ಸಮುದಾಯದ ಸ್ವಾಮೀಜಿಗಳು ಮತ್ತು ಜನಪ್ರತಿನಿಧಿಗಳಿಂದ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ನೀಡಿ ಮನವಿ ಸಲ್ಲಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲು ಸಂಜೆ ಗೃಹ ಕಚೇರಿಯಲ್ಲಿ ಸಮಯವೂ ನಿಗದಿಯಾಗಿದೆ.
ಈ ಬೇಟಿ ವೇಳೆ ನೇಕಾರ ಅಭಿವೃದ್ಧಿ ನೊಗಮ ರಚನೆ ಬಗ್ಗೆ ಸಮುದಾಯದ ಮುಖಂಡರು ಒತ್ತಡ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.