ಬೆಂಗಳೂರು, ಡಿ. 08: 2ನೇ ದಿನದ ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಾನು ಸರ್ಕಾರಕ್ಕೆ ಮೂರು ಪತ್ರಗಳನ್ನು ಬರೆದಿದ್ದೇನೆ. ಆದರೆ ಸಿಎಂ ಯಡಿಯೂರಪ್ಪನವರಾಗಲಿ, ಅಧಿಕಾರಿಗಳಾಗಲಿ ನನ್ನ ಒಂದೇ ಒಂದು ಪತ್ರಕ್ಕೂ ಉತ್ತರ ನೀಡಿಲ್ಲ. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರ ಬರೆದಿದ್ದೆ. ಅವರು ಉತ್ತರ ಕೊಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಯಾವುದೇ ಉತ್ತರ ನೀಡಿಲ್ಲ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ನನ್ನ ಪತ್ರಕ್ಕೆ ನಿಮ್ಮದೇ ಕೇಂದ್ರ ಸಚಿವರು ಉತ್ತರ ಕೊಡುತ್ತಾರೆ. ಆದರೆ ಸಿಎಂ ಆಗಲಿ, ನಿಮ್ಮ ಅಧಿಕಾರಿಗಳಾಗಲಿ, ಮುಖ್ಯ ಕಾರ್ಯದರ್ಶಿಗಳಾಗಲಿ ಯಾರೂ ಕೂಡ ಉತ್ತರ ಕೊಡುತ್ತಿಲ್ಲ. ಏನ್ರಿ ಮಾಧುಸ್ವಾಮಿ ನಿಮ್ಮ ಕಥೆಯೇನು? ಉತ್ತರ ಕೊಡಬಾರದು ಎಂದು ಏನಾದರೂ ನಿಯಮವಿದೆಯೇ? ವಿಪಕ್ಷ ನಾಯಕರಿಗೇ ಮಾಹಿತಿ ನೀಡಲ್ಲ ಎಂದರೆ ಹೇಗೆ? ಸಿಎಂ ಬೇಜವಾಬ್ದಾರಿಯಿಂದಾಗಿ ಅಧಿಕಾರಿಗಳು ಕೂಡ ಹಾಗೆಯೇ ವರ್ತಿಸುತ್ತಿದ್ದಾರೆ ಎಂದು ಸಿಎಂ ಬಿಎಸ್ ವೈ ವಿರುದ್ಧ ಅಸಮಾಧಾನ ಹೊರಹಾಕಿದರು.