Visit Channel

ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ಏರಿಕೆಯ ಶಾಕ್‌?

vidut

ಬೆಂಗಳೂರು, ಜ. 05: ಕೊರೋನಾದಿಂದಾಗಿ ತತ್ತರಿಸಿ ಹೋಗಿದ್ದ, ಜನರು ಬೆಲೆ ಏರಿಕೆಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಅದರ ಬೆನ್ನಲ್ಲೆ ಇನ್ನೊಂದು ಶಾಕಿಂಗ್‌ ನ್ಯೂಸ್‌ ರಾಜ್ಯದ ಜನತೆಗೆ ನೀಡಲು ಮುಂದಾಗಿದೆ. ಅದೇನೆಂದರೆ ವಿದ್ಯುತ್ ದರದ ಬಿಸಿ,  ವಿದ್ಯುತ್‌ ದರವು ಹೆಚ್ಚಳವಾಗುವ ಸಾಧ್ಯತೆ ಇದೆ.

ಇಂಧನ ಕ್ಷೇತ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಮಾಡಲು ಬೆಸ್ಕಾಂ, ಮೆಸ್ಕಾಂ ಮೊದಲಾದ ಎಸ್ಕಾಂಗಳಿಂದ ಕೆ.ಇ.ಆರ್.ಸಿ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ನವಂಬರ್‌ನಲ್ಲಿ ಪ್ರತಿ ಯೂನಿಟ್‌ಗೆ 33 ಪೈಸೆ ವಿದ್ಯುತ್ ದರ ಹೆಚ್ಚಳಕ್ಕೆ ಕೆ.ಇ.ಆರ್.ಸಿ. ಅನುಮತಿ ನೀಡಿತ್ತು. ಆದರಿದೀಗ ಮತ್ತೆ ಯೂನಿಟ್‌ಗೆ 1.39 ರೂಪಾಯಿ ಹೆಚ್ಚಳ ಮಾಡುವಂತೆ ವಿದ್ಯುತ್ ಸರಬರಾಜು ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ.

ನವೆಂಬರ್‌ನಲ್ಲಿ ಏರಿಕೆ ಮಾಡಲಾಗಿದ್ದ, ವಿದ್ಯುತ್ ದರ 5 ತಿಂಗಳಿಗೆ ಸೀಮಿತವಾಗಿದ್ದು ವಿದ್ಯುತ್ ಖರೀದಿ ವೆಚ್ಚ ಹೆಚ್ಚಾಗುತ್ತಿರುವುದರಿಂದ ಮತ್ತು ನಿರ್ವಹಣೆ, ಕಾರ್ಯ, ಬಂಡವಾಳ ವೆಚ್ಚದ ಸಾಲ ಹೆಚ್ಚಾದ ಕಾರಣ ಪ್ರತಿ ಯೂನಿಟ್‌ಗೆ 1.39 ರೂಪಾಯಿ ಹೆಚ್ಚಳ ಮಾಡಲು ಮನವಿ ಮಾಡಲಾಗಿದೆ. 5 ಎಸ್ಕಾಂಗಳಿಗೆ 5872 ಕೋಟಿ ರೂಪಾಯಿ ಹೊರೆಯಾಗುತ್ತಿದ್ದು, ವಿದ್ಯುತ್ ದರ ಏರಿಕೆ ಮೂಲಕ ಇದನ್ನು ಭರಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.