ಬೆಂಗಳೂರು, ನ. 4: ಕೊರೊನಾದಿಂದಾಈ ಈಗಾಗಲೇ ಅನೇಕರು ಬೇಸತ್ತಿದ್ದಾರೆ ಇದೇ ಸಂದರ್ಭದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ದರವನ್ನು ಏರಿಕೆ ಮಾಡುವುದರ ಮೂಲಕ ಕರ್ನಾಟಕದ ಜನತೆಗೆ ದೊಡ್ಡ ಶಾಕ್‌ನ್ನೇ ನೀಡಿದೆ. ಇದು ಗಾಯದ ಮೇಲೆ ಬರ ಎಳೆದಂತೆ ಆಗಿದೆ.
ಈ ಆಯೋಗದ ಪ್ರಕಾರ ಪ್ರತಿ ಯುನಿಟ್‌ಗೆ ೪೦ ಪೈಸೆ ಹೆಚ್ಚಳ ಮಾಡಿದ್ದು, ಐದು ತಿಂಗಳ ಮಟ್ಟಿಗೆ ಹೊಸ ಪರಿಷ್ಕೃತ ದರ ಇರುತ್ತದೆ ಎಂದು ತಿಳಿಸಿದೆ. ಮಾರ್ಚ್‌ನಲ್ಲಿಯೇ ಏರಿಕೆಯಾಗಬೇಕಿದ್ದ ದರವಾಗಿದ್ದು, ಕೊರೊನಾ ಕಾರಣದಿಂದಾಗಿ ತಡೆ ಹಿಡಿಯಲಾಗಿತ್ತು. ಆದರೆ ಈಗಾಗಲೇ ಜಾರಿ ಮಾಡಿದ್ದು, ನವೆಂಬರ್ ಒಂದರಿಂದಲೇ ಹೊಸ ದರ ಜಾರಿಯಲ್ಲಿರುತ್ತದೆ ಎಂದು ಆಯೋಗ ತಿಳಿಸಿದೆ.