Visit Channel

ರಾಜ್ಯಸಭೆಗೆ ಕರ್ನಾಟಕದಿಂದ ಕನ್ನಡಿಗರು ಆಯ್ಕೆಯಾಗಬೇಕಲ್ಲವೇ?

Rajyasabha

ರಾಜ್ಯ ವಿಧಾನಸಭೆಯಿಂದ(Rajyasabha Vidhansabha) ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ‘ಚಿಂತಕರ ಚಾವಡಿ’ ಎನಿಸಿಕೊಂಡಿರುವ ರಾಜ್ಯಸಭೆಯಲ್ಲಿ ಕನ್ನಡಿಗರಿಗೆ(Kannadigas) ಸಿಗಬೇಕಾದ ಪ್ರಾತಿನಿಧ್ಯ, ರಾಜಕೀಯ ಕಾರಣಗಳಿಂದ ಬೇರೆ ರಾಜ್ಯಗಳ ಪ್ರಭಾವಿ ರಾಜಕಾರಣಿಗಳ ಪಾಲಾಗುತ್ತಿರುವುದು ದುರಂತ.

BJP

ಸದ್ಯ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯ ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳು ಬೇರೆ ರಾಜ್ಯಗಳ ವ್ಯಕ್ತಿಗಳ ಪಾಲಾಗಲಿವೆ. ಪ್ರಾದೇಶಿಕವಾರು ಕನ್ನಡಿಗರಿಗೆ ಸಿಗಬೇಕಾದ ಪ್ರಾತಿನಿಧ್ಯ ಬೇರೆಯವರ ಪಾಲಾಗುತ್ತಿದೆ. ಬಿಜೆಪಿಯ(BJP)ನಿರ್ಮಲಾ ಸೀತಾರಾಮನ್(Nirmala Sitharaman), ಕಾಂಗ್ರೆಸ್‍ನ(Congress) ಜೈರಾಮ್ ರಮೇಶ್ ಅವರನ್ನು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಈ ಇಬ್ಬರು ನಾಯಕರು ಕನ್ನಡಿಗರಲ್ಲ. ಅಚ್ಚರಿ ಎಂದರೆ ಇಬ್ಬರೂ ಎರಡನೇಯ ಬಾರಿಗೆ ಮರು ಆಯ್ಕೆಯಾಗಲು ಬಯಸಿದ್ದಾರೆ.

ಅಂದರೆ 12 ವರ್ಷಗಳ ಕಾಲ ಕರ್ನಾಟಕದಲ್ಲದವರು ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ, ಇಲ್ಲಿಯ ಮೂಲಭೂತ ಸಮಸ್ಯೆಗಳ ಯಾವುದರ ಅರಿವಿಲ್ಲದವರು ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗಿ ಏನು ಮಾಡಲು ಸಾಧ್ಯ..? ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೈಕಮಾಂಡ್ ಸಂಸ್ಕೃತಿಗೆ ತಲೆಬಾಗಿ ಈ ರೀತಿ ಅನ್ಯ ರಾಜ್ಯದವರನ್ನು ಅಭ್ಯರ್ಥಿಗಳನ್ನಾಗಿ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ.

bjp

ಕನ್ನಡಿಗರೇ ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಬೇಕು. ಆಗ ಮಾತ್ರ ನಮ್ಮ ಧ್ವನಿ ರಾಷ್ಟ್ರಮಟ್ಟದಲ್ಲಿ ಪ್ರಬಲವಾಗಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕನ್ನಡಿಗರು ರಾಷ್ಟ್ರ ರಾಜಕೀಯದಲ್ಲಿ ಕೇವಲ ನೆಪವಾಗಿ ಉಳಿಯುತ್ತಾರೆ. ಒಕ್ಕೂಟ ರಾಜಕೀಯದಲ್ಲಿ ಕರ್ನಾಟಕ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತದೆ. ಹೀಗಾಗಿ ಮೂರು ಪಕ್ಷಗಳು ಉತ್ತಮ ಜ್ಞಾನ, ಪಾಂಡಿತ್ಯ, ನೈಪುಣ್ಯತೆ ಮತ್ತು ವಾಕ್‍ಚಾತುರ್ಯ ಹೊಂದಿರುವರನ್ನು ರಾಜ್ಯಸಭೆಗೆ ಕಳುಹಿಸಬೇಕು.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.