ಉತ್ತರ ಪ್ರದೇಶದ ಭಾರತೀಯ ಕಿಸಾನ್ ಯುನಿಯನ್ ನಾಯಕರಾದ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರದಿಂದ ರೈತ ಸಮುದಾಯಕ್ಕೆ ಮೋಸವಾಗಿದೆ! ಎಂದು ಅಗ್ರಹಿಸಿ ಸುಧೀರ್ಘ ಹೋರಾಟ ಮಾಡಲು ಸಜ್ಜಾಗಿ ಎಂದು ರೈತರಿಗೆ ಸೋಮವಾರ ಬಜೆಟ್ ಅಂತ್ಯವಾಗುತ್ತಿದ್ದಂತೆ ಕರೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಈ ಹಿಂದೆ ರೈತ ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರಿಗೆ ಪರಿಹಾರ ಕೊಡದೇ ಇರುವುದು, ತಾವು ಶ್ರಮಿಸಿ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡದೆ ಇರುವುದು ಹಾಗೂ ಬೆಂಬಲೆ ಬೆಲೆ ವಿಷಯ ಪರಿಶೀಲಿಸಲು ಯಾವುದೇ ಸಮಿತಿ ರೂಪಿಸದೇ ಇರುವುದು ಏಕೆ? ಇದಕ್ಕೆ ಏನು ಕಾರಣ? ಇದೆಲ್ಲದರ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ವಿವರಣೆ ನೀಡಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ದೇಶದ ರೈತರಿಗೆ ಆದ್ಯತೆ ಕೊಡಬೇಕು. ಆದರೆ ರೈತರಿಗೆ ದ್ರೋಹ ಎಸಗುವುದು ಈ ಸರ್ಕಾರಕ್ಕೆ ರೂಡಿಯಾಗಿದೆ. ದೇಶದ ರೈತರಿಗೆ ದ್ರೋಹ ಮಾಡುವ ಮುಖೇನ ಕೇಂದ್ರ ಸರ್ಕಾರ ರೈತರಿಗೆ ಆಗಿರುವ ಗಾಯದ ಮೇಲೆ ದೊಡ್ಡ ಬರೆಯನ್ನು ಎಳೆಯುತ್ತಿದ್ದಾರೆ. ರೈತರಿಗೆ ಉಂಟಾಗುತ್ತಿರುವ ಈ ಮೋಸ ತೀವ್ರ ಖಂಡನೀಯ, ಇದನ್ನು ನಾನು ಒಪ್ಪುವುದಿಲ್ಲ. ಇಂಥ ಸರ್ಕಾರಕ್ಕೆ ನನ್ನದೊಂದು ಧಿಕ್ಕಾರ. ಈ ದ್ರೋಹದ ಹಿನ್ನೆಲೆಯಲ್ಲಿ ದೇಶದ ರೈತರು ದೀರ್ಘ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ನನ್ನ ನೇರ ನುಡಿ ಎಂದು ರಾಕೇಶ್ ಟಿಕಾಯತ್ ರೈತರಿಗೆ ಹೋರಾಟಕ್ಕೆ ಸಿದ್ದರಾಗಿ ಎಂಬ ಕರೆ ನೀಡಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಾದ ರಾಕೇಶ್ ಟಿಕಾಯತ್ ಅವರ ನೀಡಿದ ಕರೆಯಂತೆ ರೈತರ ದೊಡ್ಡ ಸಮೂಹವೇ ಸೋಮವಾರ ದ್ರೋಹದ ದಿನವನ್ನು ಆಚರಿಸಲು ಮುಂದಾಗಿದೆ. ಇದೊಂದು ದೊಡ್ಡ ಪ್ರತಿಭಟನೆ ಆಗಬೇಕು, ಈ ಪ್ರತಿಭಟನೆ ಕೇಂದ್ರ ಸರ್ಕಾರಕ್ಕೆ ಮುಟ್ಟಬೇಕು. ಹುತಾತ್ಮರಿಗೆ ಪರಿಹಾರ ನೀಡದೆ ಇರುವುದನ್ನು ಅರ್ಥೈಸಿಕೊಂಡು ಪರಿಹಾರ ನೀಡಬೇಕು, ವಿದ್ಯುತ್ ಶುಲ್ಕದ ಬಗ್ಗೆ ಪ್ರತಿಕ್ರಿಯೆ ನೀಡಬೇಕು, ಕೇಂದ್ರ ತನಿಖಾ ಸಂಸ್ಥೆಗಳ ನೋಟಿಸ್ ಹಾಗೂ ಪ್ರಕರಣಗಳ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು.
ಸದ್ಯ ಇದೆಲ್ಲದಕ್ಕೂ ದ್ರೋಹ ಎಸಗಿರುವ ಕೇಂದ್ರ ಸರ್ಕಾರ, ಇದೆಲ್ಲದಕ್ಕೂ ನ್ಯಾಯ ಒದಗಿಸಿಕೊಡಬೇಕು ಇಲ್ಲದಿದ್ದರೆ ದೊಡ್ಡ ಹೋರಾಟ ನಡೆಸುತ್ತೇವೆ ಎಂದು ಮುನ್ಸೂಚನೆಯನ್ನು ನೀಡಿದ್ದಾರೆ. ರಾಕೇಶ್ ಟಿಕಾಯತ್ ಅವರು ಟ್ವಿಟರ್ ನಲ್ಲಿ ತಮ್ಮ ಅಧಿಕೃತ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.