Mumbai : ನನ್ನ ತಾಯಿಯ ಶಸ್ತ್ರಚಿಕಿತ್ಸೆಗೂ ಸಹ ಪತಿ ಆದಿಲ್ ಖಾನ್ ದುರಾನಿ(Adil Khan Durrani) ಹಣ ಕೊಡಲಿಲ್ಲ ಎಂದು ಬಾಲಿವುಡ್ ನಟಿ, ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಾಖಿ ಸಾವಂತ್(Rakhi Sawant about Adil) ಹೇಳಿಕೊಂಡಿದ್ದಾರೆ.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ರಾಖಿ ಸಾವಂತ್ ತಮ್ಮ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ನನ್ನ ಪತಿ ಅವನ ಗೆಳತಿಗಾಗಿ ನನ್ನನ್ನು ತೊರೆದು ಅವಳನ್ನು ಹುಡುಕಿಕೊಂಡು ಹೋಗಿದ್ದಾನೆ!
ನನ್ನ ತಾಯಿ ಜಯ ಅವರ ಚಿಕಿತ್ಸೆಗೆ ಅವನು ಹಣ ನೀಡಲಿಲ್ಲ. ಆದಿಲ್ ತೋರಿದ ಬೇಜವಾಬ್ದಾರಿಯೇ ಇಂದು ನನ್ನ ತಾಯಿ ಸಾವನ್ನಪ್ಪಲು ಕಾರಣ!
ಆದಿಲ್ ನನ್ನಿಂದ ಬೇರ್ಪಟ್ಟು ತನ್ನ ಗೆಳತಿ ತನು(Tanu Chandel) ಜೊತೆ ವಾಸಿಸುತ್ತಿದ್ದಾನೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್‌ಗೆ ನೇರವಾಗಿ ಟೀಕೆ ಮಾಡಿದ ಖಾಸಗಿ ಸುದ್ದಿ ವಾಹಿನಿ!
ಇನ್‌ಸ್ಟಾಗ್ರಾಮ್‌ನಲ್ಲಿ(Instagram) ಪಾಪರಾಜೋ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿರುವ ನಟಿ ರಾಖಿ, “ಆದಿಲ್ ಲೇಲಿಯಾ ಹೈ ಕಿ ವೋ ತನು ಕೆ ಸಾಥ್ ರಹೇಂಗೆ.
ಕಲ್ ಮುಝೆ ಬೋಲ್ ದಿಯಾ ಉನ್ಹೋನೆ ಕಿ, ‘ಮೈನ್ ಜಾ ರಹಾ ಹೂನ್ ತುಮ್ಹೆ ಚೋರ್ ಕೆ, ತನು ಕೆ ಪಾಸ್. ಮೈನ್ ಉಸ್ಕೆ ಸಾಥ್ ರಹುಂಗಾ’ ಎಂದು ಹಿಂದಿಯಲ್ಲಿ ಹೇಳಿದ್ದಾರೆ.
ಅಂತಿಮವಾಗಿ ಆದಿಲ್ ತನುವಿನ ಜೊತೆಯೇ ಇರುತ್ತೇನೆ ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. ಈ ಬಗ್ಗೆ ನಿನ್ನೆ ಅವನು ನನಗೆ ಹೇಳಿದನು,
ನಾನು ನಿನ್ನನ್ನು ಬಿಟ್ಟು ತನು ಬಳಿ ಹೋಗುತ್ತಿದ್ದೇನೆ. ನಾನು ಅವಳೊಂದಿಗೆ ಬದುಕುತ್ತೇನೆ ಎಂದು ಹೇಳಿದ್ದಾನೆ.

ನನ್ನ ತಾಯಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಅವನ ಖಾತೆಯಲ್ಲಿ ಹಣವಿತ್ತು. ಆದರೆ ಚಿಕಿತ್ಸೆಯ ಖರ್ಚಿಗೆ(Rakhi Sawant about Adil) ಹಣ ಕೊಡಲಿಲ್ಲ.
ನನ್ನ ತಾಯಿ ಹೇಗೆ ಸತ್ತರು ಹೇಳಿ? ಅದಕ್ಕೆ ಅದಿಲ್ ಖಾನ್ ದುರಾನಿನೇ ಕಾರಣ ಎಂದು ಹೇಳಿದ್ದಾರೆ. ಇನ್ನು ಅದಿಲ್ ಪ್ರೀತಿಸುತ್ತಿರುವ ತನು ಎಂಬ ಯುವತಿ ಬಗ್ಗೆ ಮಾತನಾಡಿದ ರಾಖಿ ಸಾವಂತ್,
ಇವರಿಬ್ಬರು ದೈಹಿಕ ಸಂಬಂಧ ಹೊಂದಿದ್ದಾರೆ. ನನ್ನ ಬಳಿ ಅವರ ಹೋಟೆಲ್‌ಗಳ ಬಿಲ್‌ಗಳು, ಏರ್‌ವೇಸ್(Air ways) ಟಿಕೆಟ್‌ಗಳು ಆಧಾರವಾಗಿವೆ.

ಯಾವ ಸಮಯದಲ್ಲಾದರೂ ಬೇಕಾದರೂ ಇದನ್ನು ಸಾಕ್ಷಿಯಾಗಿ ಬಳಸುವೆ! ನಾನು ತನು ಎಂಬ ಯುವತಿಯನ್ನು ಪ್ರಶ್ನಿಸಿದೆ, ಮದುವೆಯಾದ ವ್ಯಕ್ತಿಯೊಂದಿಗೆ ನೀನು ಸಂಬಂಧ ಹೊಂದಿದ್ದೀರಿ ಎಂಬ ಸಂಗತಿ ನಿಮಗೆ ನಾಚಿಕೆಯಾಗಲಿಲ್ಲವೇ? ಎಂದು.
ಅದಕ್ಕೆ ಆಕೆ, ನಾನು ಅವನನ್ನು ಇಷ್ಟಪಟ್ಟೆ, ಹೌದು ನನಗೆ ಸಂಬಂಧವಿದೆ ಎಂದು ಹೇಳಿದಳು. ಆದಿಲ್ ನನ್ನ ಮನೆಯಲ್ಲಿದ್ದ ನಾಲ್ಕು ಲಕ್ಷ ನಗದು ಮತ್ತು ನನ್ನ ತಾಯಿಯ ಆಭರಣಗಳೊಂದಿಗೆ ಮನೆಯಿಂದ ಹೊರಟು ಹೋಗಿದ್ದಾನೆ ಎಂದು ರಾಖಿ ಸಾವಂತ್ ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.