Mumbai : ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant statement) ಅವರು ಕಳೆದ ಮೇ ತಿಂಗಳಲ್ಲಿ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಜೊತೆ ಎರಡನೇ ವಿವಾಹವಾಗಿರುವ ಬಗ್ಗೆ ಖಚಿತಪಡಿಸಿದ್ದಾರೆ.
ಮಾಧ್ಯಮದವರು ಇವರ ಮದುವೆ ಸುದ್ದಿ ಹಾಗು ಪ್ರಗ್ನೆನ್ಸಿ ವದಂತಿಗಳ ಬಗ್ಗೆ ಕೇಳಿದ್ದಕ್ಕೆ ರಾಖಿ ಸಾವಂತ್ (Rakhi Sawant statement) ಅವರು ಕೊಟ್ಟ ಖಡಕ್ ಉತ್ತರ ಹೀಗಿದೆ ನೋಡಿ.
ಸಾಮಾಜಿಕ ಜಾಲತಾಣದಲ್ಲಿ ರಿಯಾಲಿಟಿ ಟಿವಿ ಕ್ವೀನ್, ನಟಿ ರಾಖಿ ಸಾವಂತ್ ಬುಧವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ 2022ರ ಮೇ ತಿಂಗಳಲ್ಲಿ ತಮ್ಮ ಪ್ರಿಯಕರ ಆದಿಲ್ ಅವರನ್ನು ಮದುವೆಯಾಗಿರುವ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ.
ತಮ್ಮ ಉದ್ದೇಶಿತ ಮದುವೆ ಪ್ರಮಾಣಪತ್ರದ ಫೋಟೋವನ್ನು ಕೂಡ ಹಂಚಿಕೊಂಡ ನಟಿ ರಾಖಿ ಸಾವಂತ್,
ತಮ್ಮ ಮದುವೆ ಕಳೆದ 2022 ರ ಮೇ 29 ರಂದೇ ನಡೆದಿದೆ ಎಂಬುದಕ್ಕೆ ಖಚಿತ ಮಾಹಿತಿ ಪ್ರತಿಯನ್ನು ಪ್ರದರ್ಶಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡ ನಟಿ ರಾಖಿ ಸಾವಂತ್, ಅಂ
ತಿಮವಾಗಿ, ನಾನು ಮದುವೆಯಾಗಿ ತುಂಬಾ ಸಂತೋಷದಿಂದ ಇದ್ದೇನೆ, ಆದಿಲ್ ನಿನಗಾಗಿ ಯಾವಾಗಲೂ ನನ್ನ ಬೇಷರತ್ತಾದ ಪ್ರೀತಿ ಇದೆ ಎಂದು ಶೀರ್ಷಿಕೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : https://vijayatimes.com/high-court-stayed-reservation/
ನಟಿ ರಾಖಿ ಸಾವಂತ್ ಮತ್ತು ಆದಿಲ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆಗುತ್ತಿದೆ.
ಇನ್ನು ತಮ್ಮ ಮದುವೆ ಸುದ್ದಿ ಬಗ್ಗೆ ಕೇಳಿದ ಮಾಧ್ಯಮದವರ ಪ್ರಶ್ನೆಗೆ ಸರಣಿ ಉತ್ತರಗಳನ್ನು ಕೊಟ್ಟ ನಟಿ ರಾಖಿ ಸಾವಂತ್,
ನನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಮನಬಂದಂತೆ ಟ್ರೋಲ್ (Troll) ಮಾಡಲಾಗುತ್ತಿದೆ.
ಹೆಚ್ಚಿನವರು ನೆಗಟಿವ್ ಆಗಿ ಟ್ರೋಲ್ ಮಾಡಿದರೇ, ಇನ್ನು ಕೆಲವರು ಪಾಸಿಟಿವ್ ಆಗಿ ಕೂಡ ಟ್ರೋಲ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಗರ್ಭಧಾರಣೆಯ ಬಗ್ಗೆ ವದಂತಿಗಳು ಹರಿದಾಡುತ್ತಿದೆ.
ಈ ಬಗ್ಗೆ ನಿಮ್ಮ ಉತ್ತರವೇನು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಂತೆ ನಟಿ ರಾಖಿ ಸಾವಂತ್ ಗರಂ ಆಗಿದ್ದಾರೆ!