ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣ್‌ಬೀರ್ ಕಪೂರ್ ಸದ್ಯದಲ್ಲೇ ಮದುವೆಯಾಗ್ತಾರಂತೆ ಎಂಬ ಗುಸುಗುಸು ಸುದ್ದಿ ಕೇಳಿಬರುತ್ತಲೇ ಇತ್ತು. ಇದೀಗ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ತಿಂಗಳು ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರ ವಿವಾಹ ಮಹೋತ್ಸವ ನಡೆಯಲಿದೆ. ಮದುವೆ ದಿನಾಂಕದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ, ವಿವಾಹ ಪೂರ್ವ ಶಾಸ್ತ್ರಗಳು ಏಪ್ರಿಲ್ 13ರಿಂದ ಶುರುವಾಗಲಿದೆ ಎಂದು ವರದಿ ಇತ್ತು.
ಸದ್ಯ ‘ರಲಿಯಾ’ ಎಂದೇ ಕರೆಯಿಸಿಕೊಳ್ಳುತ್ತಿರುವ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ವಿವಾಹಕ್ಕೆ ಭಾರತೀಯ ಚಿತ್ರರಂಗದ ಖ್ಯಾತನಾಮರು ಸಾಕ್ಷಿಯಾಗಲಿದ್ದಾರೆ. ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್, ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ, ಕರಣ್ ಜೋಹರ್ ಹಾಗೂ ಅಯಾನ್ ಮುಖರ್ಜಿ ‘ರಲಿಯಾ’ ಮದುವೆಗೆ ಹಾಜರಾಗಲಿದ್ದು, ರಣಬೀರ್ ಅಲಿಯಾ ರಿಸೆಪ್ಷನ್‌ಗೆ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡ ಹಾಜರಾಗಿದ್ದಾರೆ.
ಮದುವೆಗೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಹಾಜರಾಗಲಿರುವುದರಿಂದ ಯಾವುದೇ ತೊಂದರೆಯಾಗಬಾರದೆಂದು ಸೆಕ್ಯೂರಿಟಿಗಾಗಿ 200 ಬೌನ್ಸರ್‌ಗಳನ್ನು ಈಗಾಗಲೇ ನೇಮಿಸಲಾಗಿದೆ. ‘’ಆಲಿಯಾ ಭಟ್ ಅವರ ತಾತ ರಝ್‌ದಾನ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿರುವ ಕಾರಣ, ಆದಷ್ಟು ಬೇಗ ಮೊಮ್ಮಗಳು ಆಲಿಯಾ ಭಟ್ ಅವರ ಮದುವೆ ನೋಡುವ ಆಸೆ ರಝ್‌ದಾನ್ ಅವರಿಗಿತ್ತು. ಹೀಗಾಗಿ, ರಣ್‌ಬೀರ್ ಕಪೂರ್- ಆಲಿಯಾ ಭಟ್ ಮದುವೆ ಇಂದು ಅದ್ಧೂರಿಯಾಗಿ ನಡೆಯುತ್ತಿದೆ.
ಇನ್ನು ಮದ್ವೆ ನಡೀತಿರೋದು ಯಾವುದಾದ್ರೂ ಐಶಾರಾಮಿ ಹೋಟೆಲ್ ನಲ್ಲಿ ಅಂತ ಅನ್ಕೋತಿದ್ದೀರಾ? ನಿಮ್ಮ ಊಹೆ ತಪ್ಪು, ಆರ್‌ಕೆ ಹೌಸ್‌ನಲ್ಲಿ ಆಲಿಯಾ ಮತ್ತು ರಣ್‌ಬೀರ್ ಮದುವೆ ನಡೆಯುತ್ತಿದೆ. ರಣ್‌ಬೀರ್ ಕಪೂರ್ ಅವರದ್ದು ಸಿನಿಕುಟುಂಬ ಹೀಗಾಗಿ ತಂದೆ, ತಾಯಿ, ತಾತ ಎಲ್ಲರೂ ಕೂಡ ಬಾಲಿವುಡ್‌ನಲ್ಲಿ ಹವಾ ಎಬ್ಬಿಸಿದ ಕಲಾವಿದರೇ, ಈ ಕುಟುಂಬವು ಆರ್‌ಕೆ ಸ್ಟುಡಿಯೋವನ್ನು ಆರಂಭಿಸಿತ್ತು. ಕಪೂರ್ ಕುಟುಂಬದ ಪೂರ್ವಿಕರ ಮನೆಯನ್ನು ಆರ್‌ಕೆ ಹೌಸ್ ಎಂದೂ ಕರೆಯುತ್ತಾರೆ.
ವಿಶೇಷವೆಂದರೆ, ಇದೇ ಆರ್‌ಕೆ ಹೌಸ್‌ನಲ್ಲಿ ರಣ್‌ಬೀರ್ ಕಪೂರ್ ಅವರ ತಂದೆ ರಿಷಿ ಕಪೂರ್ ಮತ್ತು ತಾಯಿ ನೀತೂ ಕಪೂರ್ 1980ರಲ್ಲಿ ಮದುವೆ ಆಗಿದ್ದರು. ಇದೀಗ ತಂದೆ-ತಾಯಿ ಸಪ್ತಪದಿ ತುಳಿದ ಜಾಗದಲ್ಲೇ ರಣ್‌ಬೀರ್ ಕೂಡ ಮದುವೆ ಆಗಲು ನಿರ್ಧಾರ ಮಾಡಿದ್ದಾರೆ.