Tamilnadu: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M K Stalin) ಅವರ ಪುತ್ರ, ಸಚಿವ ಹಾಗೂ ಚಲನಚಿತ್ರ ನಾಯಕ ಉದಯನಿಧಿ (ram charan viral tweet) ಸ್ಟಾಲಿನ್ ಅವರು
ಸನಾತನ ಧರ್ಮವು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಅದೊಂದು ರೀತಿಯಲ್ಲಿ ಡೆಂಗ್ಯೂ (Dengue), ಮಲೇರಿಯಾ ರೋಗ ಇದ್ದಂತೆ ಹೀಗಾಗಿ ಸನಾತನ ಧರ್ಮವನ್ನು ಸಂಪೂರ್ಣವಾಗಿ
ನಿರ್ಮೂಲನೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದರ ವಿರುದ್ದ ದೇಶಾದ್ಯಂತ ಪ್ರತಿಭಟನೆಗಳು ನಡೆಸುತ್ತಿವೆ. ಉದಯನಿಧಿ ಸ್ಟಾಲಿನ್ ವಿರುದ್ಧ ಹಲವೆಡೆ ಪ್ರಕರಣಗಳು ದಾಖಲಾಗಿವೆ.
ಈ ಮಧ್ಯೆ ತೆಲುಗಿನ ಖ್ಯಾತ ನಟ ರಾಮ್ ಚರಣ್ ಅವರ ಹಳೆಯ ಟ್ವೀಟ್ (ram charan viral tweet) ಒಂದು ಭಾರೀ ವೈರಲ್ ಆಗುತ್ತಿದೆ.

ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ಅವರು 2020ರಲ್ಲಿ ಸನಾತನ ಧರ್ಮವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. ರಾಮ್ ಚರಣ್ ಅವರು ತಮ್ಮ ತಾಯಿ ಸುರೇಖಾ ಕೊನಿಡೇಲಾ
ಅವರು ಮನೆಯಲ್ಲಿ ತುಳಸಿ ಗಿಡಕ್ಕೆ ಪೂಜೆ ಮಾಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿ, “ನಮ್ಮ ಸನಾತನ ಧರ್ಮವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ”ಎಂದು ಟಿಪ್ಪಣಿ ಬರೆದುಕೊಂಡಿದ್ದರು. ಈ ಟ್ವೀಟ್
ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅನೇಕರು ಈ ಟ್ವೀಟ್ ಅನ್ನು ಹಂಚಿಕೊಂಡು ಉದಯನಿಧಿ ಸ್ಟಾಲಿನ್ಗೆ ಟಾಂಗ್ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಟ್ವೀಟ್ ಹೆಚ್ಚು ಹೆಚ್ಚು ಶೇರ್ ಆಗುತ್ತಿದೆ.
ಉದಯನಿಧಿ ಸ್ಟಾಲಿನ್ ಹೇಳಿದ್ದೇನು?
ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘವು ‘ಸನಾತನ ನಿರ್ಮೂಲನ’ ವಿಷಯದ ಕುರಿತು ಆಯೋಜಿಸಿದ್ದ ಸಮಾವೇಶದಲ್ಲಿ ಉದಯನಿಧಿ ಸ್ಟಾಲಿನ್ ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ನಾವು ಸುಮ್ಮನೆ ವಿರೋಧಿಸಬಾರದು. ನಾವು
ಅವರನ್ನು ನಿರ್ನಾಮ ಮಾಡಬೇಕು. ಸೊಳ್ಳೆ, ಡೆಂಗ್ಯೂ, ಜ್ವರ, ಮಲೇರಿಯಾ ವಿರುದ್ಧ ಹೋರಾಡಿದರೆ ಸಾಲದು.. ನಿರ್ಮೂಲನೆ ಮಾಡಬೇಕು. ಸನಾತನಧರ್ಮವನ್ನೂ ತೊಲಗಿಸಬೇಕು ಎಂದು
ಉದಯನಿಧಿ ಸ್ಟಾಲಿನ್ (Udayanidhi Stalin) ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗೆ ತಮಿಳುನಾಡು ಸೇರಿದಂತೆ ಇಡೀ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ತಮಿಳುನಾಡು ರಾಜ್ಯ ಬಿಜೆಪಿ (BJP) ಅಧ್ಯಕ್ಷ “ಈ ಹೇಳಿಕೆ ಹಿಂದೂ
ಸಮಾಜದ ಮೇಲೆ ನಡೆದಿರುವ ಆಕ್ರಮಣ. ಆದರೆ ಸಾವಿರಾರೂ ವರ್ಷಗಳಿಂದ ಇಂತಹ ಸಾವಿರಾರೂ ಆಕ್ರಮಣಗಳನ್ನು ಎದುರಿಸಿಕೊಂಡೇ ಹಿಂದೂ ಸಮಾಜ ಬೆಳೆದು ಬಂದಿದೆ. ಅವರ ಈ ಹೇಳಿಕೆಗೆ
ಡಿಎಂಕೆ ತಕ್ಕ ಪಾಠ ಕಲಿಯಲಿದೆ”ಎಂದು ಎಚ್ಚರಿಸಿದ್ದಾರೆ.
ಇದನ್ನು ಓದಿ: ಶಾಕಿಂಗ್ ನ್ಯೂಸ್ : ಬೆಂಗಳೂರು ಹಾಗೂ ಮೈಸೂರಲ್ಲಿ ಹೆಚ್ಚುತ್ತಿದೆ ಬಾಲ ತಾಯಂದಿರ ಸಂಖ್ಯೆ !