Ayodhya: ಭಗವಾನ್ ಶ್ರೀರಾಮ ಮಂದಿರವು ಅಯೋಧ್ಯೆಯಲ್ಲಿ (Rama Statue in Ayodhya) ನಿರ್ಮಾಣವಾಗುತ್ತಿದ್ದು, ಗರ್ಭ ಗುಡಿಯಲ್ಲಿ ಇರಿಸಲು ಬರೋಬ್ಬರಿ 8 ಅಡಿ ಎತ್ತರದ ಚಿನ್ನ ಲೇಪಿತ
ಅಮೃತ ಶಿಲೆಯ ಸಿಂಹಾಸನ ಸಿದ್ಧವಾಗುತ್ತಿದೆ. ಈ ಸಿಂಹಾಸನದ ಮೇಲೆ ರಾಮ್ ಲಲ್ಲಾ (Ram Lalla) (ಬಾಲ ರಾಮ) ಮೂರ್ತಿ ಪ್ರತಿಷ್ಠಾಪನೆ ಆಗಲಿದೆ. ಡಿಸೆಂಬರ್ 15 ರಂದು ಅಯೋಧ್ಯೆಯನ್ನು
ತಲುಪಲಿರುವ ಈ ಶಿಲೆಯು ರಾಜಸ್ಥಾನದ (Rama Statue in Ayodhya) ಶಿಲ್ಪಿಗಳು ಈ ಸಿಂಹಾಸನದ ಕೆತ್ತನೆ ಕೆಲಸ ಮಾಡುತ್ತಿದ್ದಾರೆ.
ಅಯೋಧ್ಯೆಯ ಭಗವಾನ್ ಶ್ರೀರಾಮ (Bhagavan Shrirama) ಮಂದಿರದ ಗರ್ಭ ಗೃಹದ ಒಳಗೆ ಈ ಸಿಂಹಾಸನವನ್ನು ಇರಿಸಲಾಗುವುದು ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್
ಸದಸ್ಯ ಅನಿಲ್ ಮಿಶ್ರಾ (Anil Mishra) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಭಗವಾನ್ ರಾಮ್ ಲಲ್ಲಾ ವಿಗ್ರಹ ರಾಮಮಂದಿರದ ಗರ್ಭ ಗೃಹದಲ್ಲಿ 8 ಅಡಿ ಎತ್ತರದ ಚಿನ್ನ ಲೇಪಿತ ಅಮೃತ ಶಿಲೆಯ
ಸಿಂಹಾಸನದ ಮೇಲೆ ವಿರಾಜಮಾನ ಆಗಲಿದ್ದು, ಈ ಸಿಂಹಾಸನವು 4 ಅಡಿ ಅಗಲ ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು ಸಾಕಷ್ಟು ಚಿನ್ನ ಹಾಗೂ ಬೆಳ್ಳಿ ಬಳಕೆ ರಾಮ ಮಂದಿರ ನಿರ್ಮಾಣದ ವೇಳೆ ಆಗಿದ್ದು, ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ (Trust) ರಚನೆ ಆಗುವ ಮುನ್ನ ಹಾಗೂ ಟ್ರಸ್ಟ್ ರಚನೆಯಾದ ನಂತರ
ಭಕ್ತರು ಸಾಕಷ್ಟು ಚಿನ್ನ ಹಾಗೂ ಬೆಳ್ಳಿಯ ತುಣುಕು, ನಾಣ್ಯಗಳು, ಬಿಸ್ಕೇಟ್ಗಳು (Biscuits) ಹಾಗೂ ಇಟ್ಟಿಗೆಗಳನ್ನೂ ನೀಡಿದ್ಧಾರೆ. ಇವೆಲ್ಲವನ್ನೂ ಈಗಾಗಲೇ ಕರಗಿಸಲಾಗಿದೆ ಎಂದು ಅನಿಲ್ ಮಿಶ್ರಾ
ಮಾಹಿತಿ ನೀಡಿದ್ದು, ಇಷ್ಟೊಂದು ಬೆಲೆ ಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಕಾಪಾಡಲು ಹಾಗೂ ಭದ್ರತೆ ಒದಗಿಸೋದೇ ಸವಾಲಿನ ಕೆಲಸವಾಗಿತ್ತು ಎಂದು ಹೇಳಿದ್ದಾರೆ.
ದೇಶದ ಪ್ರತಿಷ್ಠಿತ ಸಂಸ್ಥೆಗಳ ನೆರವಿನೊಂದಿಗೆ ಭಕ್ತಾದಿಗಳು ಕೊಟ್ಟ ಚಿನ್ನ, ಬೆಳ್ಳಿಯನ್ನು ನಾವು ಕರಗಿಸಿ ದೊಡ್ಡ ದೊಡ್ಡ ಬ್ಲಾಕ್ಗಳ ರೂಪದಲ್ಲಿ ಇಟ್ಟಿದ್ದೇವೆ. ಈ ಕಾರ್ಯ ನೆರವೇರಿಸುವಾಗ ಸಾಕಷ್ಟು
ಸಮಸ್ಯೆಗಳು ಎದುರಾದವು ಎಂದು ನೆನಪಿಸಿಕೊಂಡ ಮಿಶ್ರಾ (Mishra), ಇವೆಲ್ಲವನ್ನೂ ಸುರಕ್ಷಿತವಾಗಿ ಇಡುವುದೇ ಒಂದು ಸವಾಲು ಎಂದು ಹೇಳಿದರು.
ಮೊದಲ ಮಹಡಿಯ ಒಟ್ಟು 19 ಸ್ಥಂಭಗಳ ಪೈಕಿ 17 ಸ್ಥಂಭಗಳನ್ನು ಈಗಾಗಲೇ ಅಳವಡಿಕೆ ಮಾಡಲಾಗಿದ್ದು, ಡಿಸೆಂಬರ್ 15ರ ಒಳಗೆ ಮೊದಲ ಮಹಡಿ ಕಾಮಗಾರಿಗಳು ಮುಕ್ತಾಯ ಆಗಲಿವೆ ಎಂದು ಮಿಶ್ರಾ ಹೇಳಿದ್ದಾರೆ.
ಇದನ್ನು ಓದಿ; 8 ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆ ಸಿಂಹಾಸನದ ಮೇಲೆ ರಾರಾಜಿಸಲಿರುವ ರಾಮನ ವಿಗ್ರಹ!
- ಭವ್ಯಶ್ರೀ ಆರ್.ಜೆ