ಬೆಂಗಳೂರು, ಮೇ. 31: ಅತ್ಯಾಚಾರದ ಆರೋಪ ಹೊತ್ತಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣದ ತನಿಖಾ ವರದಿಯನ್ನು ಎಸ್ಐಟಿ ಇಂದು (ಸೋಮವಾರ) ಹೈಕೋರ್ಟ್ಗೆ ಸಲ್ಲಿಸಲಿದೆ.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ಯುವತಿ ನೀಡಿದ್ದ ಅತ್ಯಾಚಾರ ಆರೋಪದ ದೂರಿನ ‘ಬಿ’ ವರದಿಯನ್ನು ತನಿಖಾಧಿಕಾರಿಗಳು ಸಿದ್ಧಪಡಿಸಿದ್ದಾರೆ. ಈ ನಡುವೆ ಯುವತಿಯೊಂದಿಗೆ ಸಹಮತದ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ರಮೇಶ್ ಜಾರಕಿಹೊಳಿ ಅವರು ಒಪ್ಪಿಕೊಂಡಿದ್ದರು. ಹೀಗಾಗಿ, ʻಬಿʼ ವರದಿ ಬಹುತೇಕ ಸಿದ್ಧವಾಗಿದೆ.
ರಮೇಶ್ ಜಾರಕಿಹೊಳಿ ಹೇಳಿಕೆ ನಂತರ ಎಸ್ಐಟಿ ಅಧಿಕಾರಿಗಳು ಹನಿಟ್ರ್ಯಾಪ್ ಮಾದರಿಯ ತನಿಖೆಗೆ ಮುಂದಾಗಿದ್ದರು. ಇದು ತನಿಖಾ ಹಂತದಲ್ಲಿದೆ.