ಬೆಂಗಳೂರು, ಮಾ. 12: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಭೇದಿಸಲು ಎಸ್ ಐಟಿ ಮುಖ್ಯಸ್ಥ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿ ನೇತೃತ್ವದಲ್ಲಿ ಏಳು ಹಿರಿಯ ಅಧಿಕಾರಿಗಳ ಟೀಂ ರೆಡಿ ಮಾಡಲಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಟೀಂನಲ್ಲಿರುವ ಅಧಿಕಾರಿಗಳಲ್ಲಿ ಸಂದೀಪ್ ಪಾಟೀಲ್(ಸಿಸಿಬಿ ಡಿಸಿಪಿ),
ರವಿಕುಮಾರ್(ಡಿಸಿಪಿ), ಅನುಚೇತ್(ಡಿಸಿಪಿ), ಧರ್ಮೇಂದ್ರ(ಎಸಿಪಿ),
ಪ್ರಶಾಂತ್ ಬಾಬು(ಇನ್ಸ್ ಪೆಕ್ಟರ್) ಹಾಗೂ ಮಾರುತಿ(ಇನ್ಸ್ ಪೆಕ್ಟರ್) ಅವರುಗಳಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಕರಣ ಈ ಮೊದಲು ಅಷ್ಟೆನು ಗಂಭೀರತೆ ಪಡೆದಿರಲಿಲ್ಲ. ಈಗ ತಾಂತ್ರಿಕ ಪರಿಣಿತಿ ಹೊಂದಿರುವ ಹಿರಿಯ ಪೊಲೀಸ್ ಅಧಿಕಾರಿಗಳನ್ನು SIT ಗೆ ನಿಯೋಜಿಸಿರುವ ಕಾರಣ ಇದು ಮತ್ತೊಂದು ಟ್ವಿಸ್ಟ್ ಪಡೆದಿದೆ.
ಈ ಪ್ರಕರಣದ ವಿಷ್ಯುವಲ್ಸ್ ಗಳನ್ನು ರಷ್ಯಾದ ಮಾಸ್ಕೊದಲ್ಲಿ ಯೂ ಟೂಬ್ ಗೆ ಲಿಂಕ್ ಮಾಡಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಪರಿಣಿತಿ ಹೊಂದಿರುವ ಅಧಿಕಾರಿಗಳನ್ನು ಎಸ್ ಐಟಿ ಗೆ ನಿಯೋಜನೆ ಮಾಡಲಾಗಿದೆ.