ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಮಾಜಿ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ, ವರ್ಷದ ಬಳಿಕ ಮತ್ತೊಮ್ಮೆ ಟ್ವಿಟರ್ ಲೋಕಕ್ಕೆ ಮರಳಿದ್ದಾರೆ.
Clear as daylight- dal mein definitely kuch kaala hai. https://t.co/dassY9a1El
— Divya Spandana/Ramya (@divyaspandana) August 18, 2020
2019ರ ಜೂನ್ 1ರ ನಂತರ ಟ್ವಿಟರ್ನಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳದೆ ದೂರು ಉಳಿಸಿದ್ದ ರಮ್ಯಾ, ಮಂಗಳವಾರ ಮತ್ತೊಮ್ಮೆ ಟ್ವಿಟರ್ನಲ್ಲಿ ಕಾಣಿಸಿಕೊಂಡಿದ್ದಾರೆ. 14 ತಿಂಗಳ ಬಳಿಕ ಟ್ವಿಟರ್ನಲ್ಲಿ ಆ್ಯಕ್ಟಿವ್ ಆಗಿರುವ ರಮ್ಯಾ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಾಡಿದ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪಿಎಂ ಕೇರ್ಸ್ ನಿಧಿಯ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ. ಪಿಎಂ ಕೇರ್ಸ್ ಪಂಡ್ನ ಹಣವನ್ನು ಎನ್ಡಿಆರ್ಎಫ್ಗೆ ವರ್ಗಾಯಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಲು ಕೋರ್ಟ್ ನಿರಾಕರಿಸಿದೆ. ಕೋರ್ಟ್ನ ಈ ಸಂದೇಶ ಸ್ಪಷ್ಟವಾಗಿ ಗೊತ್ತಾಗಿರಬೇಕು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, “ಕ್ಲಿಯರ್ ಆ್ಯಸ್ ಡೇಲೈಟ್ – ದಾಲ್ ಮೇ ಡಿಫಿನೆಟ್ಲಿ ಕುಚ್ ಕಾಲಾ ಹೈ” ಎಂದು ಟ್ವೀಟ್ ಮಾಡಿದ್ದಾರೆ.