ಬೆಂಗಳೂರು ಅ 8 : ಆರ್ಯನ್ ಖಾನ್ ಬಂಧನ ಹಿನ್ನಲೆಯಲ್ಲಿ ಇಗಾಗಲೇ ಬಾಲಿವುಡ್ನ ಸಾಕಷ್ಟು ಮಂದಿ ಆರ್ಯನ್ ಪರ ನಿಂತಿದ್ದಾರೆ ಇದೀಗ ಸ್ಯಾಂಡಲ್ ವುಡ್ ತಾರೆ ರಮ್ಯಾಕೂಡ ಆರ್ಯನ್ ಪರ ಬ್ಯಾಟ್ ಬೀಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ ಆರ್ಯನ್ ಖಾನ್ ಬಳಿ ಮಾದಕ ವಸ್ತು ಇರುವುದಕ್ಕೆ ಅಥವಾ ಆರ್ಯನ್ ಮಾದಕ ವಸ್ತು ಸೇವಿಸಿದ್ದರ ಬಗ್ಗೆ ದಾಖಲೆ ಇಲ್ಲ. ಆದಾಗ್ಯೂ, ಅವರನ್ನು ಬಂಧಿಸಿ, ವಿಚಾರಣೆ ಮಾಡಲಾಗಿದೆ. ಆದರೆ, ಕೇಂದ್ರ ಸಚಿವರ ಪುತ್ರ ಕಾರು ಚಲಾಯಿಸಿ, ನಾಲ್ವರು ರೈತರನ್ನು ಕೊಲೈಗೈದಿದ್ದಾನೆ ಮತ್ತು ಆದಾಗ್ಯೂ ಆತ ಆರಾಮಾಗಿ ಓಡಾಡಿಕೊಂಡಿದ್ದಾನೆ. ಯಾಕೆ ಆತನ ಬಂಧನ ಇನ್ನೂ ಆಗಿಲ್ಲ? ಯಾವುದೇ ಮಾಹಿತಿ ನೀಡದೆ, ಮೃತ ರೈತರ ಕುಟುಂಬದವರನ್ನು ಭೇಟಿಯಾಗಲು ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸುತ್ತೀರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟದಿಂದ ದೇಶ ನಡೆಯುತ್ತಿದೆ ಎಂದು ನಟಿ ರಮ್ಯಾ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.
ಆರ್ಯನ್ ಘಟನೆ ಹಿನ್ನಲೆ
ಮುಂಬೈ ಸಮೀಪದ ಕಡಲಿನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ಮಾದಕ ಪದಾರ್ಥ ನಿಯಂತ್ರಣ ಬ್ಯೂರೂ ದಾಳಿ ನಡೆಸಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ (23) ಅವರನ್ನು ಬಂಧಿಸಿದ್ದರು