• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ರಿಯಲ್ ಸ್ಟಾರ್ ಕೈಗಳಿಂದ ‘ರಾಣ’ ಟೀಸರ್

Preetham Kumar P by Preetham Kumar P
in ಮನರಂಜನೆ
ರಿಯಲ್ ಸ್ಟಾರ್ ಕೈಗಳಿಂದ ‘ರಾಣ’ ಟೀಸರ್
0
SHARES
1
VIEWS
Share on FacebookShare on Twitter

ಬೆಂಗಳೂರು ಸೆ 21 : ರಿಯಲ್ ಸ್ಟಾರ್ ಉಪೇಂದ್ರ ಅವರು ಶ್ರೇಯಸ್ ಕೆ ಮಂಜು ಅಭಿನಯದ ‘ರಾಣ’ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ.

“ಶ್ರೇಯಸ್ ಹೆಸರಿನಲ್ಲೇ ಶ್ರೇಯಸ್ಸು ಇದೆ. ಅವನ ಮಾತು ಕೇಳಿ ಸಂತೋಷವಾಯಿತು. ತಂದೆಯನ್ನು ಮೀರಿಸಿದ ಮಗ ಶ್ರೇಯಸ್. ಅವನಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಉಪೇಂದ್ರ ಹಾರೈಸಿದರು.
ನಾಯಕ ಶ್ರೇಯಸ್ ಮಾತನಾಡಿ, “ನಾನು ಚಿಕ್ಕ ವಯಸ್ಸಿನಿಂದಲೂ ಉಪೇಂದ್ರ ಅವರ ಹುಚ್ಚು ಅಭಿಮಾನಿ. ನಾನು ಅವರಿಂದ ಕಲತಿರುವುದು ಸಾಕಷ್ಟು. ಚಿತ್ರರಂಗಕ್ಕೆ ಹೊಸದಾಗಿ ಬರುತ್ತಿರುವ ನೂತನ ಪ್ರತಿಭೆಗಳಿಗೆ ಅವರು ನೀಡುವ ಪ್ರೋತ್ಸಾಹಕ್ಕೆ ಚಿರ ಋಣಿ. ಶಿವರಾಜಕುಮಾರ್ ಅವರು ಸಹ ನನಗೆ ಈ ಚಿತ್ರದಲ್ಲಿ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟಿದ್ದಾರೆ. ನಾನು ಏನಾದರೂ ಉತ್ತಮವಾಗಿ ನಟಿಸಿದ್ದೇನೆಂದರೆ ಅದಕ್ಕೆ ಕಾರಣ ನಿರ್ದೇಶಕ ನಂದಕಿಶೋರ್ ಹಾಗೂ ಛಾಯಾಗ್ರಹಕ ಛಾಯಾಗ್ರಹಕ ಶೇಖರ್ ಚಂದ್ರ. ಹಿರಿಯ ಕಲಾವಿದರಿಗೆ, ನಿರ್ಮಾಪಕರಿಗೆ, ನನ್ನ ಅಪ್ಪ ಕೆ.ಮಂಜು ಅವರಿಗೆ ಹಾಗೂ ಇಡೀ ತಂಡಕ್ಕೆ ನಾಯಕ ಶ್ರೇಯಸ್ಸ್ ವಿಶೇಷ ಧನ್ಯವಾದ” ಎಂದರು.

ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಕೋವಿಡ್ ನಿಯಮಾವಳಿಗಳು ಜಾರಿಯಿರುವುದರಿಂದ ಕೆಲವು ಜಾಗಗಳಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಸಿಕ್ಕಿದ್ದು ತಡವಾಯಿತು. ಇಲ್ಲದಿದ್ದರೆ, ನಮ್ಮ ಚಿತ್ರ ಈ ವೇಳೆಗೆ ಸಿದ್ದವಿರುತ್ತಿತ್ತು. ಚಿತ್ರ ಉತ್ತಮವಾಗಿ ಬರಲು ಸಹಕರಿಸುತ್ತಿರುವ ಚಿತ್ರತಂಡದ ಸದಸ್ಯರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ನಂದಕಿಶೋರ್‌.

ಚಿತ್ರದ ಹಾಡುಗಳು ಚೆನ್ನಾಗಿದೆ. ಹಾಡುಗಳ ವಿಡಿಯೋ ಯಾವಾಗ ಬರುವುದೋ ಎಂದು ಕಾತುರದಿಂದ ಕಾಯುತ್ತಿದ್ದೇನೆ.. ಚಿತ್ರತಂಡಕ್ಕೆ ಹಾಗೂ ಆಡಿಯೋ ಹಕ್ಕು ಪಡೆದಿರುವ ಆನಂದ್ ಆಡಿಯೋ ಸಂಸ್ಥೆಗೆ ಧನ್ಯವಾದ ತಿಳಿಸಿದರು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ. ನಾನು ಈ ಚಿತ್ರ ನಿರ್ಮಾಣ ಮಾಡಲು ಪ್ರಮುಖ ಕಾರಣ ಕೆ.ಮಂಜು. ಅವರಿಗೆ ನಾನು ಆಭಾರಿ. ಚಿತ್ರ ಉತ್ತಮವಾಗಿ ಮೂಡಿ ಬರಲು ಇಡೀ ತಂಡ ಸಾಕಷ್ಟು ಶ್ರಮಿಸುತ್ತಿದೆ. ನಿಮ್ನೆಲ್ಲರ ಹಾರೈಕೆ ನಮಗಿರಲಿ ಎಂದರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್.

ನಾಯಕಿಯರಾದ ಗ್ರೀಷ್ಮಾ ನಾಣಯ್ಯ, ರಜನಿ ಭಾರದ್ವಾಜ್, ಛಾಯಾಗ್ರಹಕ ಶೇಖರ್ ಚಂದ್ರ, ಆನಂದ್ ಆಡಿಯೋ ಶ್ಯಾಮ್ ಅವರು ಚಿತ್ರದ ಬಗ್ಗೆ ಮಾತನಾಡಿದ್ದರು. ನಿರ್ಮಾಪಕರಾದ ರಮೇಶ್ ರೆಡ್ಡಿ ಅವರು ಸೇರಿದಂತೆ ಅನೇಕ ಗಣ್ಯರು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಂಪ್ಲಿ ಶಾಸಕರಾದ ಜೆ ಎನ್ ಗಣೇಶ್ ಅವರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಈ ಚಿತ್ರದಲ್ಲಿ ಶ್ರೇಯಸ್ಸ್ ಗೆ ನಾಯಕಿಯರಾಗಿ‌ ಗ್ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ ಮಂಜು ಅರ್ಪಿಸುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ. ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ ‘ರಾಣ’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌.

Tags: rana Kannada movietitle first look and teaser

Related News

ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ ಜೈಲರ್’ ಶೂಟಿಂಗ್ ಮುಕ್ತಾಯ ; ‘ಥಿಯೇಟರ್‌ನಲ್ಲಿ ಸಿಗೋಣ..’ ಎಂದ ‘ತಲೈವಾ’
ಪ್ರಮುಖ ಸುದ್ದಿ

ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ ಜೈಲರ್’ ಶೂಟಿಂಗ್ ಮುಕ್ತಾಯ ; ‘ಥಿಯೇಟರ್‌ನಲ್ಲಿ ಸಿಗೋಣ..’ ಎಂದ ‘ತಲೈವಾ’

June 3, 2023
ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ
Vijaya Time

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ

May 30, 2023
ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ
Vijaya Time

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

May 30, 2023
ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ
Sports

ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ

May 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.