ಬಾಲಿವುಡ್(Bollywood) ಚಾಕಲೇಟ್ ಬಾಯ್ ರಣಬೀರ್ ಕಪೂರ್(Ranbir Kapoor) ಮತ್ತು RRR ನಾಯಕಿ(Actress) ಆಲಿಯಾ ಭಟ್(Alia Bhat) ಅವರು ತಮ್ಮ ಅಭಿಮಾನಿಗಳ ಆಶಯವನ್ನು ಸದ್ಯ ಈಡೇರಿಸುವತ್ತ ಹೆಜ್ಜೆಯಿಟ್ಟಿದ್ದಾರೆ. ಹೌದು, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಬ್ಬರು ತಮ್ಮ ಮದುವೆ ಸುದ್ದಿಯನ್ನು ಪ್ರಸ್ತಾಪ ಮಾಡಿದ್ದು, ಮದುವೆಯನ್ನು ಏಪ್ರಿಲ್ ಎರಡನೇ ವಾರದಲ್ಲಿ ಏರ್ಪಡಿಸಲಿದ್ದೇವೆ ಎಂದು ಹೇಳಿದ್ದಾರೆ.

ಮದುವೆ ಸಮಾರಂಭವೂ ತುಂಬ ಗ್ರ್ಯಾಂಡ್ ಆಗಿ ನಡೆಯುವುದಿಲ್ಲ. ನಮ್ಮಿಬ್ಬರ ಕುಟುಂಬ ಸದಸ್ಯರೊಂದಿಗೆ ವಿವಾಹವು ತುಂಬಾ ಆಪ್ತವಾಗಿ ನಡೆಯಲಿದೆ ಎಂದು ಹೇಳಿದ್ದಾರೆ. ಸದ್ಯ ರಣಬೀರ್ ಅವರು ತಮ್ಮ ಎರಡು ಚಿತ್ರಗಳ ಬಿಡುವಿಲ್ಲದ ಶೂಟಿಂಗ್ ಶೆಡ್ಯೂಲ್‌ಗಳ ಕಾರಣ ಮದುವೆಯನ್ನು ಈಗ ಇಟ್ಟುಕೊಳ್ಳಲು ಆಗಿಲ್ಲ. ಎರಡು ಸಿನಿಮಾಗಳ ಚಿತ್ರೀಕರಣದ ದಿನಾಂಕಗಳು ಮುಕ್ತಾಯಗೊಂಡ ಮೇಲೆ ಮದುವೆ ತಯಾರಿ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ರಣಬೀರ್ ಅವರು ಏಪ್ರಿಲ್ 13 ರವರೆಗೆ ಶ್ರದ್ಧಾ ಕಪೂರ್ ಅವರೊಂದಿಗೆ ಲವ್ ರಂಜನ್ ರೋಮ್ಯಾಂಟಿಕ್ ಡ್ರಾಮ ಕಥೆಯುಳ್ಳ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ಮದುವೆ ದಿನಾಂಕಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಣ್ಬೀರ್ ಮದುವೆಗೆ ಸರಿಹೊಂದಿಸಲು ತಮ್ಮ ಚಿತ್ರೀಕರಣದ ದಿನಾಂಕಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ರಣಬೀರ್ ಅವರ ಸಿನಿಮಾಗಳ ಚಿತ್ರೀಕರಣದ ಅವಧಿಯೂ ಇದೇ ಏಪ್ರಿಲ್ 15 ರಿಂದ ಏಪ್ರಿಲ್ 20 ರ ನಡುವೆ ಮುಗಿಯಲಿದೆ.
ಇದಾದ ಬಳಿಕ ತಮ್ಮ ಜೀವನ ಸಂಗಾತಿ ಆಗಲಿರುವ ನಟಿ ಆಲಿಯಾ ಅವರಿಗೆ ಮೂರು ಗಂಟು ಹಾಕಲು ಸಜ್ಜಾಗಿದ್ದಾರೆ. ವಾಣಿಜ್ಯ ಚಿತ್ರೀಕರಣಗಳು ಮತ್ತು ಚಲನಚಿತ್ರ ಯೋಜನೆಗಳಂತಹ ಯಾವುದೇ ಬದ್ಧತೆಗಳಿಂದ ಈ ದಿನಾಂಕಗಳನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ ಎಂದು ಮೂಲವು ತಿಳಿಸುತ್ತದೆ. ಇತ್ತೀಚೆಗೆ ಅಮೀರ್ ಖಾನ್ ಅವರೊಂದಿಗೆ ಏಪ್ರಿಲ್ ಮಧ್ಯದಲ್ಲಿ ನಡೆಯಲಿರುವ ಜಾಹೀರಾತಿಗಾಗಿ ಚಿತ್ರೀಕರಣ ಮಾಡಿದರು. ಮಾರ್ಚ್ ಅಂತ್ಯದ ವೇಳೆಗೆ ಅದನ್ನು ಮುಕ್ತಾಯಗೊಳಿಸಿದರು.

ರಣಬೀರ್ ಮತ್ತು ಆಲಿಯಾ ಏಪ್ರಿಲ್ ತಿಂಗಳ ಮಧ್ಯದಲ್ಲಿ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಎರಡೂ ಕುಟುಂಬಗಳು ಮದುವೆಯನ್ನು ಏಪ್ರಿಲ್ ಎರಡನೇ ವಾರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಣಬೀರ್ ಮತ್ತು ಆಲಿಯಾ ಭಟ್ ಇಬ್ಬರ ಮುಂಬರುವ ಕೆಲಸಗಳ ಮಧ್ಯೆ ಸಿಗುವ ಬಿಡುವಿನ ಸಮಯವನ್ನು ನೋಡಿಕೊಂಡು ಕುಟುಂಬದ ಪಂಡಿತರು ಆಯ್ಕೆ ಮಾಡಿದ ದಿನಾಂಕವನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.