Mumbai: ಬಾಲಿವುಡ್ ನಟ ರಣಬೀರ್ ಕಪೂರ್(Ranbir Kapoor) ಅವರು ತಾನು ಬ್ರಹ್ಮಾಸ್ತ್ರ ಚಿತ್ರಕ್ಕಾಗಿ ಪ್ರಶಸ್ತಿ ಗೆಲ್ಲಲು ಸಂಪೂರ್ಣವಾಗಿ ಅರ್ಹನಲ್ಲ ಆದ್ರೆ, ನಟಿ ಆಲಿಯಾ ಭಟ್(Alia Bhatt) ಗಂಗೂಬಾಯಿ ಚಿತ್ರಕ್ಕಾಗಿ ಪ್ರಶಸ್ತಿ ಪಡೆಯಲು ಅರ್ಹರು (ranbir kapoor refuse award) ಎಂದು ಹೇಳಿಕೆ ನೀಡಿದ್ದಾರೆ.

ಇತ್ತೀಚಿಗೆ ನಡೆದ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್(International Flim) ಫೆಸ್ಟಿವಲ್ ಅವಾರ್ಡ್ಸ್ನಲ್ಲಿ ಭಾಗಿಯಾಗಿದ್ದ ನಟ ರಣಬೀರ್ ಕಪೂರ್ ಮತ್ತು ಅವರ ಪತ್ನಿ,
ನಟಿ ಆಲಿಯಾ ಭಟ್ ತಮಗೆ ಒಲಿದು ಬಂದ ಪ್ರಶಸ್ತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇತ್ತೀಚೆಗೆ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಕ್ರಮವಾಗಿ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ವಿಭಾಗಗಳಲ್ಲಿ ಗೆದ್ದಿದ್ದಾರೆ.
ಬ್ರಹ್ಮಾಸ್ತ್ರ (Brahmastra)ಚಿತ್ರಕ್ಕಾಗಿ ರಣಬೀರ್ ಕಪೂರ್ ಪ್ರಶಸ್ತಿ ಗೆದ್ದರೆ, ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ (ranbir kapoor refuse award) ನಟಿ ಆಲಿಯಾ ಭಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ನಟ ರಣಬೀರ್ ಕಪೂರ್ ಅವರು, ನಾನು ಬ್ರಹ್ಮಾಸ್ತ್ರ ಚಿತ್ರಕ್ಕೆ ಪ್ರಶಸ್ತಿ ಪಡೆಯಲು ಅರ್ಹ ಎಂದು ನಾನು ಭಾವಿಸುವುದಿಲ್ಲ!
ಆದರೆ ಆಲಿಯಾ ಭಟ್ ಅವರು ಆ ಪ್ರಶಸ್ತಿಗೆ ಅರ್ಹರು ಎಂದು ಹೇಳಿದ್ದಾರೆ.

ಚಂಡೀಗಢದಲ್ಲಿ ತಮ್ಮ ಮುಂಬರುವ ಚಿತ್ರ ತೂ ಝೂತಿ ಮೈನ್ ಮಕ್ಕರ್‌ನ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನಟ ರಣಬೀರ್,
ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಅವರು ಭಾಗವಹಿಸಲು ಸಾಧ್ಯವಾಗದ ಕಾರಣ, ಆಲಿಯಾ ಅವರ ಪರವಾಗಿ ಅವರ ಟ್ರೋಫಿಯನ್ನು(Trophy) ಪಡೆದರು.
ಸಾಕಷ್ಟು ವಿಳಂಬದ ನಂತರ ಚಿತ್ರಮಂದಿರಕ್ಕೆ ಕಾಲಿಟ್ಟ ಬ್ರಹ್ಮಾಸ್ತ್ರ ಚಿತ್ರವು ಊಹೆಗೂ ಮೀರಿದ ಗಳಿಕೆಯನ್ನು ಕಂಡಿತು ಮತ್ತು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು.
ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಪ್ರಥಮ ಬಾರಿಗೆ ಒಟ್ಟಿಗೆ ಅಭಿನಯಿಸಿದ್ದಾರೆ.
ಬ್ರಹ್ಮಾಸ್ತ್ರ (Brahmastra) ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಕಾಣುವ ಮುಖೇನ ಯಶಸ್ವಿಗೊಂಡ ಬಾಲಿವುಡ್ ಚಿತ್ರಗಳಲ್ಲಿ ಒಂದಾಯಿತು.
ರಣಬೀರ್ ಹಾಗೂ ಆಲಿಯಾ ಜೋಡಿಗೆ ಸಿನಿಪ್ರೇಕ್ಷಕರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದು, ಮತ್ತಷ್ಟು ಉತ್ತಮ ಚಿತ್ರಗಳನ್ನು ಜೋಡಿಯಾಗಿ ನಟಿಸಿ, ನಮ್ಮನ್ನು ರಂಜಿಸಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.