- 15 ದಿನದಲ್ಲಿ ನಾಲ್ಕು ಸಲ ವಿದೇಶಕ್ಕೆ ಹಾರಿದ್ದ ನಟಿ (Ranya went abroad four times in 15 days)
- ಬಂಗಾರದ ಹಿಂದಿನ ಕಥೆ ಬಲು ರೋಚಕ
- ಡಿಆರ್ಐ ಅಧಿಕಾರಿಗಳ ತನಿಖೆಯಿಂದ ನಟಿ ಆರೆಸ್ಟ್
Bangalore:ಚಿನ್ನವನ್ನು ಗುಪ್ತವಾಗಿ ಸಾಗಿಸುವಾಗ ಸಿಕ್ಕಿಹಾಕಿಕೊಂಡು ಪೋಲಿಸರ ಸುಪರ್ದಿಯಲ್ಲಿ ತನಿಖೆ ಎದುರಿಸುತ್ತಿರುವ ನಟಿ ರನ್ಯಾ ರಾವ್ (Actress Ranya Rao) ಅವರು ಜನವರಿಯಲ್ಲಿ ತನ್ನ ಪಾಸ್ಪೋರ್ಟ್ನ್ನು (Passport) ನವೀಕರಿಸಿದ ನಂತರ ಬಂಧನಕ್ಕೂ ಮೊದಲು 15 ದಿನಗಳಲ್ಲಿ ನಾಲ್ಕು ಬಾರಿ ವಿದೇಶಕ್ಕೆ ಹೋಗಿ ಬಂದಿದ್ದರು.
ದುಬೈನಿಂದ ತರಲಾಗಿದ್ದ 15ಕೆಜಿ ಚಿನ್ನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ವಶಪಡಿಸಿಕೊಂಡು ಬಂಧಿಸಲಾಗಿತ್ತು. 15 ದಿನದಲ್ಲಿ ನಾಲ್ಕು ಬಾರಿ ದುಬೈಗೆ (Dubai) ಭೇಟಿ ನೀಡಿದ್ದು,ತನ್ನ ಬಟ್ಟೆಗಳಲ್ಲಿ ಚಿನ್ನದ ಬಿಸ್ಕತ್ (Gold biscuit) ಗಳನ್ನು ಬಚ್ಚಿಟ್ಟು ವಾಪಾಸ್ ತಂದಿದ್ದಾರೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ (Directorate of Revenue Intelligence) ಅಧಿಕಾರಿಗಳು ತಿಲಿಸಿದ್ದಾರೆ.

ಮಾ.3 ರಂದು ರನ್ಯಾ ರಾವ್ ದುಬೈನಿಂದ ಎಮಿರೇಟ್ಸ್ (Emirates) ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದರು, ಆಕೆಯ ಮೇಲೆ ಮೊದಲೇ ಅನುಮಾನವಿದ್ದ ಕಾರಣ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದರು.ಈ ವೇಳೆ ರನ್ಯಾ ರಾವ್ ಬಳಿ ಭಾರಿ ಪ್ರಾಮಣದ ಚಿನ್ನ ಇರುವುದು ಪತ್ತೆಯಾಗಿದೆ.ಅವರ ತೊಟ್ಟಿದ್ದ ಬಟ್ಟೆಯಲ್ಲೇ ಮುಕ್ಕಾಲು ಭಾಗ ಚಿನ್ನ ಅಡಗಿತ್ತು ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ .
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ (Bangalore Central Jail) ನ್ಯಾಯಾಂಗ ಬಂಧನದಲ್ಲಿರುವ ರನ್ಯಾ, ಬೆಂಗಳೂರಿನ ಡಿಆರ್ಐನ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಗೆ ಬರೆದ ಪತ್ರದಲ್ಲಿ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ತನ್ನನ್ನು ವಿನಾಕಾರಣ ಬಂಧಿಸಲಾಗಿದೆ ಎಂದಿದ್ದಾರೆ.
ಡಿಆರ್ಐ ತಮ್ಮ ಬಂಧನ ಜ್ಞಾಪಕ ಪತ್ರದಲ್ಲಿ (Arrest memorandum), ರನ್ಯಾ ಅವರ ನವೆಂಬರ್ 13, 2024 ಮತ್ತು ಡಿಸೆಂಬರ್ 20, 2024 ರಂದು ಲ್ಯಾವೆಲ್ಲೆ ರಸ್ತೆಯಲ್ಲಿರುವ ಅವರ ನಿವಾಸದಿಂದ ಎರಡು ದುಬೈ ಕಸ್ಟಮ್ಸ್ (Dubai Customs) ಘೋಷಣೆಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿತ್ತು.
ರನ್ಯಾ ರಾವ್ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಿವಾಸಿ ಗುರುತಿನ ಚೀಟಿಯನ್ನು ಹೊಂದಿದ್ದಾರೆ ಮತ್ತು ದುಬೈನಲ್ಲಿ ‘ವೀರಾ ಡೈಮಂಡ್ಸ್’ (Veera Diamonds) ಎಂಬ ಕಂಪನಿಯನ್ನು ಹೊಂದಿದ್ದಾರೆಂದು ಮಾಹಿತಿಯಿಂದ ತಿಳಿದುಬಂದಿದೆ.ಕಳ್ಳಸಾಗಣೆ ಮಾಡಿದ ಚಿನ್ನದ ಹಣವನ್ನು ಹವಾಲಾ ಮೂಲಕ ಪಾವತಿಸಲಾಗಿದೆ ಎಂಬ ಅನುಮಾನವಿದೆ – ಇದು ಅಕ್ರಮ ನಗದು ವರ್ಗಾವಣೆ.
ಭಾರತದಲ್ಲಿ ಹವಾಲಾ ವಹಿವಾಟುಗಳು (Hawala transactions) ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಮತ್ತು ವಿದೇಶಿ ವಿನಿಮಯ (Ranya went abroad four times in 15 days) ನಿರ್ವಹಣಾ ಕಾಯ್ದೆ (ಎಫ್ಇಎಂಎ) ಅಡಿಯಲ್ಲಿ ಕಾನೂನು ಬಾಹಿರವಾಗಿದೆ.