New Delhi : ಅಕ್ಟೋಬರ್ 1ರಂದು ಪ್ರಾರಂಭವಾದ ಹಿಂದಿಯ ಬಿಗ್ ಬಾಸ್ನ(Rape Threat call For Swati Malilwal) 16ನೇ ಆವೃತ್ತಿಯಲ್ಲಿ ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಭಾಗವಹಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಇದರ ಕುರಿತು ಧ್ವನಿಯೆತ್ತಿದ್ದ ದೆಹಲಿ ಮಹಿಳಾ ಆಯೋಗದ (Delhi Women Commission) ಮುಖ್ಯಸ್ಥೆ ಸ್ವಾತಿ ಮಳಿವಾಲ್ (Swati Maliwal) ಅವರಿಗೆ ಅತ್ಯಾಚಾರದ ಬೆದರಿಕೆಗಳು ಬಂದಿವೆ.
ಮೀಟೂ ಆರೋಪಿಯೂ ಆಗಿರುವ ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ರನ್ನು ಬಿಗ್ಬಾಸ್‌ನಿಂದ ಹೊರ ಹಾಕುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ, ಸ್ವಾತಿ ಮಳಿವಾಲ್ ದೂರು ಸಲ್ಲಿಸಿದ್ದರು.
https://fb.watch/g7rTDe3ecg/ ನಿರಂತರವಾಗಿ ಬಯಲಿಗೆ ಬರುತ್ತಿವೆ ಸರ್ಕಾರಿ ವಾಹನ ದುರ್ಬಳಕೆ ಪ್ರಕರಣಗಳು!
ಇದೀಗ, ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತನ್ನ ಇನ್‌ಸ್ಟಾಗ್ರಾಮ್(Instagram) ಖಾತೆಯಲ್ಲಿ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ,
ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಬುಧವಾರ ಹೇಳಿದ್ದಾರೆ.

ತನ್ನ Instagram DM ಗಳ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಅಧ್ಯಕ್ಷರು, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತನಗೆ ಅತ್ಯಾಚಾರ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದು, “ನಿಸ್ಸಂಶಯವಾಗಿ, ಅವರು ನಮ್ಮ ಕೆಲಸವನ್ನು ಸ್ಥಗಿತಗೊಳಿಸಲು ಬಯಸುತ್ತಾರೆ.
ನಾನು ದೆಹಲಿ ಪೊಲೀಸರಿಗೆ ದೂರು ನೀಡುತ್ತಿದ್ದೇನೆ. ಅವರು ಎಫ್‌ಐಆರ್(FIR) ದಾಖಲಿಸಿ ಮತ್ತು ತನಿಖೆ ಮಾಡಿ ಇದರ ಹಿಂದೆ ಇರುವವರನ್ನು ಬಂಧಿಸಬೇಕು”
ಎಂದು ಸ್ವಾತಿ ಮಲಿವಾಲ್ ಟ್ವೀಟ್(Tweet) ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಸ್ವಾತಿ ಮಲಿವಾಲ್ ಅವರು,
“ನಾನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಸಾಜಿದ್ ಖಾನ್ ಅವರನ್ನು ಬಿಗ್ ಬಾಸ್ ಶೋದಿಂದ ತಕ್ಷಣ ತೆಗೆದುಹಾಕುವಂತೆ ದೂರು ಸಲ್ಲಿಸಿದ್ದೇನೆ,
ಬಿಗ್ ಬಾಸ್ ವಿರುದ್ಧ ಕ್ರಮಕೈಗೊಳ್ಳಿ ಮತ್ತು ಎಲ್ಲಾ ದೂರುಗಳ ತನಿಖೆ ನಡೆಸಿ ಎಂದು ವಿನಂತಿಸಿದ್ದೆ. ಆದರೆ ನನ್ನ ದೂರಿನ ಕುರಿತು ಇನ್ನೂ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ : https://vijayatimes.com/why-the-walk-of-self-deception/
ಈ ವಿಷಯದ ಬಗ್ಗೆ ದೂರು ಸಲ್ಲಿಸಿದ ನಂತರ, ಮೇಲೆ ನನಗೆ ಅತ್ಯಾಚಾರ ಬೆದರಿಕೆಗಳು ಬರುತ್ತಿವೆ. ಈ ಬಗ್ಗೆಯೂ ದೆಹಲಿ ಪೊಲೀಸರಿಗೆ ದೂರು ನೀಡಿದ್ದೇನೆ” ಎಂದರು.
ಬಿಗ್ ಬಾಸ್‌ನಂತಹ ವೇದಿಕೆಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದರ ಮೂಲಕ ಸಾಜಿದ್ ಖಾನ್‌ಗೆ ತನ್ನ ತಪ್ಪುಗಳನ್ನು ವೈಟ್‌ವಾಶ್ ಮಾಡಲು ಅನಗತ್ಯ ಅವಕಾಶ ಸಿಕ್ಕಂತಾಗುತ್ತದೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥರು ಪತ್ರದಲ್ಲಿ ಬರೆದಿದ್ದಾರೆ.

“ಸಾಜಿದ್ ಖಾನ್ ವಿರುದ್ಧದ ಆರೋಪಗಳು ಸ್ವಭಾವತಃ ಅತ್ಯಂತ ಗಂಭೀರವಾಗಿದೆ ಮತ್ತು ಆದಷ್ಟು ಬೇಗ ತನಿಖೆಯಾಗಬೇಕು.