Bengaluru : ಬೆಂಗಳೂರಿನ ಇಂದಿರಾನಗರದಲ್ಲಿ (rapido driver vs auto)ರಾಪಿಡೋ ಓಡಿಸುತ್ತಿದ್ದ ಚಾಲಕನನ್ನು ತಡೆದು ಆತನ ಬಳಿಯಿದ್ದ ಹೆಲ್ಮೆಟ್ ಕಸಿದು, ಅದನ್ನು ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಬೆಂಗಳೂರು ಮಹಾನಗರದಲ್ಲಿ ರಾಪಿಡೋ ಓಡಿಸುತ್ತಿದ್ದ ಯುವಕನೊಬ್ಬ, ಇಂದಿರಾನಗರದಲ್ಲಿ ರಾಪಿಡೋ (Rapido) ಓಡಿಸುವಾಗ ಆಟೋ ಚಾಲಕನೊಬ್ಬನ ಬಳಿ ಸಿಲುಕಿಕೊಂಡಿದ್ದಾನೆ. ರಾಪಿಡೋ ಓಡಿಸುತ್ತಿದ್ದ ಚಾಲಕನನ್ನು ಹಿಡಿದ ಆಟೋ ಚಾಲಕ,
ಆತನ ಫೋನ್ ಕಸಿದುಕೊಂಡು, ಹಿಂಬದಿ ಸವಾರರಿಗೆ ಎಂದು ಬಳಸುವ ಹೆಲ್ಮೆಟ್ (Helmet) ಅನ್ನು ಕಸಿದು ಆಕ್ರೋಶದಿಂದ ನೆಲದ ಮೇಲೆ ಹೊಡೆದು ಹಾಕಿದ್ದಾರೆ.
ಈ ಒಂದು ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ಈ ವೀಡಿಯೊದಲ್ಲಿ, ಆಟೋ ಚಾಲಕ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಫೋನ್ ಕಸಿದುಕೊಂಡು ಕೋಪದಿಂದ ಮಾತನಾಡಿದ್ದಾರೆ.
ಆತನನ್ನು ಥಳಿಸಲು ಕೈ ಎತ್ತಿರುವುದು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. ರಾಪಿಡೋ ಚಾಲಕನನ್ನು ಅಡಗಟ್ಟಿ, ವೀಡಿಯೋ ಮಾಡಲು ಹೇಳಿ ಮಾತನ್ನು ಪ್ರಾರಂಭಿಸಿದ ಆಟೋ ಚಾಲಕ,
ಸ್ನೇಹಿತರೇ, ಅಕ್ರಮ ರಾಪಿಡೋ ದಂಧೆ ಹೇಗೆ ನಡೆಯುತ್ತಿದೆ (rapido driver vs auto) ಎಂಬುದನ್ನು ನೋಡಿ,
ಇದನ್ನು ಓದಿ: ಸರ್ಕಾರಿ ನೌಕರರ ವೇತನದಲ್ಲಿ ಶೇ.೧೭ ಏರಿಕೆ ! ಮೂಗಿಗೆ ತುಪ್ಪ ಸವರಿದ್ರಾ ಸಿಎಂ
ಈತ ಯಾವುದೋ ಬೇರೆ ದೇಶದಿಂದ ಬಂದು ಇಲ್ಲಿ ರಾಜನಂತೆ ಓಡಿಸುತ್ತಿದ್ದಾನೆ. ಅಲ್ಲಿಗೆ ನಮ್ಮ ಆಟೋ ಇಲಾಖೆ ಎಷ್ಟು ಹಾಳಾಗಿದೆ, ಯಾವ ಮಟ್ಟಕ್ಕೆ ಬಂದು ನಿಂತಿದೆ? ಇದು ಹೇಗೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.
ನಮ್ಮ ಇಲಾಖೆಯು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ, ಬೇರೆ ದೇಶದಿಂದ ಬಂದವನು, ವೈಟ್ ಬೋರ್ಡ್(White Board) ಗಾಡಿ ಇಟ್ಟುಕೊಂಡು, ಒಬ್ಬಳು ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಎಂದು ಹೇಳಿದ್ದಾರೆ.
ಸದ್ಯ ಈ ಘಟನೆ ಸಂಭವಿಸಿದ ನಂತರವು ಬೈಕ್ ಸವಾರ ಇನ್ನೂ ಯಾವುದೇ ದೂರು ದಾಖಲಿಸಿಲ್ಲ ಎಂದು ಹೇಳಲಾಗಿದೆ. ಆದ್ರೆ, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಹಲವರು ಆಟೋ ಚಾಲಕನ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ರೀತಿ ಒಬ್ಬರ ಮೇಲೆ ದರ್ಪ, ಆಕ್ರೋಶ ವ್ಯಕ್ತಪಡಿಸಬಾರದು! ಇದಕ್ಕೆ ಪೊಲೀಸರನ್ನು ಸಂಪರ್ಕಿಸಿ, ದೂರು ದಾಖಲಿಸಬೇಕು. ಅದನ್ನು ಬಿಟ್ಟು ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.