Bengaluru: ಮೆಟ್ರೋ ದರ ಏರಿಕೆಯಿಂದ (Metro fare hike) ಕಂಗೆಟ್ಟಿದ್ದ ಹಾಗು ಆಟೋ (Auto), ಬಸ್ (Bus) ಸಿಗದೇ ಒದ್ದಾಡುತ್ತಿದ್ದ ಮಹಿಳೆಯರಿಗೆ ರ್ಯಾಪಿಡೋ (Rapido)ಸಿಹಿ ಸುದ್ದಿ ನೀಡಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ (Safety of women passengers) ಮತ್ತು ಮಹಿಳಾ ಚಾಲಕರಿಗೆ (Female drivers) ಉತ್ತೇಜನ ನೀಡುವ ನಿಟ್ಟಿನಲ್ಲಿ ಪಿಂಕ್ ಬೈಕ್ ಟ್ಯಾಕ್ಸಿ (Rapido Pink Bike Taxi) ಆರಂಭಿಸುವುದಾಗಿ ರ್ಯಾಪಿಡೋ (Rapido) ಘೋಷಿಸಿದೆ. ಕರ್ನಾಟಕದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಪಿಂಕ್ ಬೈಕ್ ಟ್ಯಾಕ್ಸಿ (Pink bike taxi) ಆರಂಭವಾಗಲಿದೆ ಎಂದು ರ್ಯಾಪಿಡೋ (Rapido) ತಿಳಿಸಿದೆ.

ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಾಗೂ ಮಹಿಳೆಯರಿಗಾಗಿ ಉದ್ಯೋಗ (Employment for women) ಸೃಷ್ಟಿಸಲು ಈ ಹೊಸ ಯೋಜನೆಯನ್ನು ರ್ಯಾಪಿಡೋ ರೂಪಿಸಿದೆ.ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ (Global Investment Summit) ಈ ಹೊಸ ಯೋಜನೆಯನ್ನು ರ್ಯಾಪಿಡೋ ಘೋಷಣೆ ಮಾಡಿದೆ. ಮಹಿಳೆಯರನ್ನು ಸಬಲೀಕರಣಗೊಳಿಸುವ (Empowering women) ನಿಟ್ಟಿನಲ್ಲಿ ರ್ಯಾಪಿಡೋ ಈ ಉಪಕ್ರಮಕ್ಕೆ ಕೈ ಹಾಕಿದೆ. ಇದರ ಭಾಗವಾಗಿ ಕಂಪನಿಯು 25,000 ಮಹಿಳಾ ನಾಯಕಿಯರನ್ನು (Women heroes) ಪರಿಚಯಿಸಲು ಯೋಜಿಸಿದೆ. ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣವನ್ನು (Reliable journey) ಈ ಯೋಜನೆ ನೀಡಲಿದೆ ಎಂದು ರ್ಯಾಪಿಡೋ (Rapido) ಅಭಿಪ್ರಾಯಪಟ್ಟಿದೆ.
ಆರಂಭಿಕ ಹಂತದಲ್ಲಿ, ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಮಹಿಳಾ ಕ್ಯಾಪ್ಟನ್ಗಳಿಗೆ 25 ಎಲೆಕ್ಟ್ರಿಕ್ ಬೈಕ್ಗಳನ್ನು (Electric bikes) ಪೂರೈಸುವುದಾಗಿ ರಾಪಿಡೋ ಹೇಳಿದೆ. ಇದರಿಂದಾಗಿ ಸಾರಿಗೆ ಮತ್ತು ಆದಾಯದ ಅವಕಾಶಗಳು (Income opportunities) ಸುಲಭವಾಗಿ ಲಭ್ಯವಾಗುತ್ತವೆ. ಹೆಚ್ಚುವರಿಯಾಗಿ, ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಕಂಪನಿಯು (Aggregator company) ವಿವಿಧ ಎನ್ಜಿಒಗಳ (NGOs) ಸಹಭಾಗಿತ್ವದಲ್ಲಿ ವ್ಯಾಪಕ ತರಬೇತಿ ಕಾರ್ಯಕ್ರಮಗಳ (Extensive training programs) ಮೂಲಕ ಮಹಿಳಾ ಕ್ಯಾಪ್ಟನ್ಗಳಿಗೆ (Women Captains) ಅಗತ್ಯ ಸುರಕ್ಷತೆ ಮತ್ತು ಚಾಲನಾ ಕೌಶಲ್ಯಗಳಲ್ಲಿ ತರಬೇತಿ (Training in driving skills) ನೀಡುವುದಾಗಿ ತಿಳಿಸಿದೆ. ಕೋಲ್ಕತ್ತಾದಲ್ಲಿ (Kolkata) ಎಲೆಕ್ಟ್ರಿಕ್ ಬೈಕ್ ಪಿಂಕ್ ಟ್ಯಾಕ್ಸಿಗಳನ್ನು (Electric bike pink taxis) ಬಿಡುಗಡೆ ಮಾಡುವುದಾಗಿಯೂ ಸಂಸ್ಥೆ ತಿಳಿಸಿದೆ.