ಮಾನವನ ದುರಾಸೆಗೆ ಬಲಿಯಾಗಿ ಅಳಿವಿನಂಚಿನಲ್ಲಿರುವ ಕಡಲ ಹಸುಗಳ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಮಾಹಿತಿ!

ಕಡಲ ಹಸು(Sea Cow) ಅಮೆರಿಕ(America) ಖಂಡದ ತೀರಗಳಲ್ಲಿ ಕಂಡು ಬರುವ ಟ್ರಿಕೆಕಸ್‌ ಕುಲದ ಒಂದು ಸಸ್ಯಾಹಾರಿ ಜಲಚರ ಸಸ್ತನಿ.

ಇದು ಸುಮಾರು 4.0 ಮೀಟರ್‌ ಉದ್ದ ಮತ್ತು 590 ಕಿಲೋಗ್ರಾಂಗಳಷ್ಟು ತೂಕ ಹೊಂದಿರುತ್ತವೆ. ಭೂಮಿ ಮೇಲೆ ಕಾಣಸಿಗುವ ಹುಲ್ಲನ್ನು ಮೇಯುವ ಹಸುವಿನ ರೀತಿಯೇ ಕಡಲ ಹಸು ಕೂಡ ಸಮುದ್ರದಲ್ಲಿರುವ ಜಲಸಸ್ಯಗಳನ್ನು ನಿಧಾನವಾಗಿ ಮೇಯುತ್ತದೆ! ಅಪರೂಪದ ಜೀವಿಯಾದ ಕಡಲ ಹಸುವನ್ನು ಬೇಟೆಯಾಡುವುದು ಕಾನೂನು ಬಾಹಿರವಾಗಿದ್ದರೂ ಸಹ ಅವುಗಳ ಮಾಂಸಕ್ಕಾಗಿ ಅಕ್ರಮವಾಗಿ ಬೇಟೆಯಾಡಲಾಗುತ್ತಿದೆ. ಇಂಥ ಅಪರೂಪದ ಹಾಗೂ ಆಕರ್ಷಣೀಯ ಜೀವಿಯನ್ನು ಭವಿಷ್ಯದಲ್ಲಿ ಉಳ್ಳಿಸಿಕೊಳ್ಳಲು ಇದರ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ.


ಕಡಲ ಹಸು ಹೆಚ್ಚಾಗಿ ಇರುವಂಥ ಪ್ರದೇಶವಾದ ಮೆಕ್ಸಿಕೋ ಮತ್ತು ಕೆರಿಬಿಯನ್‌ಗಳಲ್ಲಿ ಮ್ಯಾನಟೀ ಅಪ್ರಿಶಿಯೇಷನ್‌ ದಿನದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರಾಣಿ ಸಂಗ್ರಹಾಲಯಗಳು, ಕಡಲ ಜೀವಶಾಸ್ತ್ರ ಕೇಂದ್ರಗಳು ಈ ದಿನದಂದು ಸಮುದ್ರ ಹಸು ಕುರಿತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಕೆಲವರು ಸ್ವಯಂ ಸೇವಕರಾಗಿ ಕಡಲ ಹಸುಗಳ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತಾರೆ. ಮತ್ತೆ ಕೆಲವರು ಅವುಗಳ ಸಂರಕ್ಷಣಾ ಕಾರ್ಯಕ್ರಮಗಳನ್ನು ನಿರ್ವಹಿಸಲು ದಾನ ಮಾಡುವ ಮಾಲಕ ಮ್ಯಾನಟೀ ಮೆಚ್ಚುಗೆ ದಿನವನ್ನು ಆಚರಿಸುತ್ತಾರೆ.


ಅಳಿವಿನಂಚಿನಲ್ಲಿರುವ ಕಡಲ ಹಸು ಅಥವಾ ಸಮುದ್ರ ಹಸು ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್‌ ತಿಂಗಳ ಕೊನೆ ಬುಧವಾರದಂದು ಕಡಲ ಹಸು ಅಥವಾ ಮ್ಯಾನಟೀ ಅಪ್ರಿಶಿಯೇಷನ್‌ ದಿನವನ್ನು ಅಮೆರಿಕ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಆಚರಿಸಲಾಗುತ್ತದೆ.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.