ರಶ್ಮಿಕಾ ಮಂದಣ್ಣ ಜೊತೆಗೆ ವಿಜಯ್ ದೇವರಕೊಂಡ ಮದುವೆ ; ಸುಳಿವು ನೀಡಿದ ವಿಜಯ್ ದೇವರಕೊಂಡ!

ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ವಿಜಯ್ ದೇವರಕೊಂಡ ಮತ್ತು ಪುಷ್ಪ ಬೆಡಗಿ ನಟಿ ರಶ್ಮಿಕಾ ಮಂದಣ್ಣ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೆಲ ದಿನಗಳಿಂದ ಅತೀ ಹೆಚ್ಚಾಗಿ ಕೇಳಿಬರುತ್ತಿವೆ. ಈ ವದಂತಿಗಳಿಗೆ ಇಬ್ಬರೂ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದಿದ್ದರೂ, ಇತ್ತೀಚೆಗೆ ಡಿನ್ನರ್ ಡೇಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದು ಊಹಾಪೋಹಗಳಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ತೆಲುಗು ಸಿನಿಮಾ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್‌ ಚಿತ್ರಗಳಲ್ಲಿ ಅಭಿಮಾನಿಗಳ ನೆಚ್ಚಿನ ಜೊಡಿಯಾಗಿರುವ ಈ ನಟ, ನಟಿ ಈಗ ಭಾರತದಾದ್ಯಂತ ಸುದ್ದಿ ಮಾಡುತ್ತಿದ್ದಾರೆ.

ಇಬ್ಬರೂ ಕೂಡ ಇದೇ ವರ್ಷ ಹಿಂದಿ ಚಿತ್ರರಂಗಕ್ಕೆ ಹೊಸ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಲಿದ್ದಾರೆ. ಅವರಿಬ್ಬರೂ ಕೂಡ ಇಲ್ಲಿಯವರೆಗೆ ತಮ್ಮ ಮೇಲೆ ಬಂದಿರುವ ವದಂತಿಗಳ ಕುರಿತು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ! ಸದ್ಯ ಯಾವುದಕ್ಕೂ ಸ್ಪಷ್ಟನೆ ನೀಡದೆ ಗಪ್ ಚುಪ್ ಆಗಿ ಕುಳಿತ್ತಿದ್ದಾರೆ. ಆದರೆ ಇತ್ತೀಚಿನ ವರದಿ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿಬಂದಿವೆ. ಇದಕ್ಕೆ ಕ್ಯಾರೇ ಅನ್ನದೆ ಮುಂದೊಗಿದ್ದಾರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ.

ಇದನ್ನು ಟ್ವೀಟರ್ ನಲ್ಲಿ ನೋಡಿದ ನಟ ವಿಜಯ್ ದೇವರಕೊಂಡ, ಇವೆಲ್ಲಾ “ನಾನ್ಸೆನ್ಸ್” ಎಂದು ಕರೆಯುವ ಮೂಲಕ ಪರೋಕ್ಷವಾಗಿ ವರದಿಗಳನ್ನು ತಳ್ಳಿಹಾಕಿದ್ದಾರೆ. ಎಂದಿನಂತೆ ನಡೆಯುವ ನಾನ್ಸೆನ್ಸ್ ಸುದ್ದಿಗಳು ಇವು. ನಾವು “ಇಂಥ ಸುದ್ದಿಗಳನ್ನು ಪ್ರೀತಿಸುತ್ತೇವೆ ಡಾ” ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಪ್ರಸ್ತುತ, ವಿಜಯ್ ದೇವರಕೊಂಡ ತಮ್ಮ ಬಾಲಿವುಡ್ ಚೊಚ್ಚಲ ಸಿನಿಮಾ ‘ಲೈಗರ್ ಇನ್ ಮುಂಬೈ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ರಶ್ಮಿಕಾ ಕೂಡ ಮುಂಬೈನ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ ಎನ್ನಲಾಗಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಚಿತ್ರದ ಮೂಲಕ ನಟಿ ರಶ್ಮಿಕಾ ತಮ್ಮ ಬಿ-ಟೌನ್ ಮಂದಿಗೆ ಪರಿಚಯವಾಗಲು ಸಜ್ಜಾಗಿದ್ದಾರೆ. 2022 ರ ಆರಂಭದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಪಾರ್ಟಿ ಮಾಡಿದ್ದಾರೆ ಎಂದು ವರದಿಯಾಗಿತ್ತು. ರಶ್ಮಿಕಾ ಮತ್ತು ವಿಜಯ್ ಹೊಸ ವರ್ಷವನ್ನು ಆಚರಿಸಲು ಗೋವಾದಲ್ಲಿ ಒಂದೇ ರೆಸಾರ್ಟ್‌ನಲ್ಲಿದ್ದರು ಎಂಬ ಸುಳಿವನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಫೋಟೊಗಳು ಸುಳಿವು ನೀಡಿತ್ತು.

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.