ಬೆಂಗಳೂರು ಜ 20 : ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ಸಿನಿಪಯಣ ಪ್ರಾರಂಭಿಸಿ ಇಂದು ತೆಲುಗಿನ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸಿನಿ ನಟಿಯರ ಪೈಕಿಯಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಕೂಡ ರಶ್ಮಿಕಾ ಮಂದಣ್ಣ ಹಸರೇ ಮೊದಲಿಗೆ. ಅತೀ ಹೆಚ್ಚಾಗಿ ಕರ್ನಾಟಕ ಕ್ರಶ್ ಎಂದು ಅಭಿಮಾನಿಗಳು ಮೊದಲು ರಶ್ಮಿಕಾ ಅವರನ್ನು ಕರೆದರು. ನಂತರದ ದಿನಗಳಲ್ಲಿ ಒಂದೊಂದು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದಂತೆ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎಂದು ಅಭಿಮಾನಿಗಳು ಇಂದು ಕರೆಯುತ್ತಿದ್ದಾರೆ.
ಸದ್ಯ ಇತ್ತೀಚಿಗಷ್ಟೇ ಬಿಡುಗಡೆಗೊಂಡ ಪುಷ್ಪ-1 ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿತು. ಈ ಮೂಲಕ ರಶ್ಮಿಕಾ ತಮ್ಮ ಸ್ಟಾರ್ ಪಟ್ಟವನ್ನು ಎಂದಿನಂತೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಒಂದೊಂದು ಸಿನಿಮಾ ಹಿಟ್ ಆಗುತ್ತಿದ್ದಂತೆ ರಶ್ಮಿಕಾ ಹೆಸರಿನ ಜೊತೆ ಅವರ ಸಂಭಾವನೆ ಕೂಡ ಹೆಚ್ಚಾಗುತ್ತಿದೆ. ಸದ್ಯ ರಶ್ಮಿಕಾ ಬಳಿ ಸಾಲು ಸಾಲು ಸಿನಿಮಾಗಳು ಕೈಯಲಿದ್ದು, ಸಿಕ್ಕಾಪಟ್ಟೆ ಬಿಝಿಯಾಗಿರುವ ನಟಿಯಾಗಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ತಮಗೆ ಅಭಿಮಾನಿಗಳು ಕೊಟ್ಟ ನ್ಯಾಷನಲ್ ಕ್ರಶ್ ಪಟ್ಟದ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಹೊರಗಡೆ ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದು ಕರೆದಾಗ ನಿಮಗೆ ಮುಜುಗರವಾಗುತ್ತದೆಯಾ.? ಅಥವಾ ಖುಷಿ ಅನಿಸುತ್ತದೆಯೋ.? ಎಂದು ಕೇಳಿದಾಗ, ಇದಕ್ಕೆ ಸಿಕ್ಕ ಉತ್ತರ. ನಾನು ನನ್ನ ಅಭಿಮಾನಿಗಳನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ. ನನ್ನ ತಂಡಕ್ಕೆ ನಾನು ಎಲ್ಲಾ ಧನ್ಯವಾದಗಳನ್ನು ಮೊದಲಿಗೆ ತಿಳಿಸುತ್ತೇನೆ. ಕಾರಣ, ನನ್ನನ್ನು ನ್ಯಾಷನಲ್ ಕ್ರಶ್ ಎಂದು ಅವರು ಕರೆಯಬೇಕಾದರೆ, ನಾನು ಆ ರೀತಿ ಕಾಣಿಸಲು ಮುಖ್ಯ ಕಾರಣ ನನ್ನ ತಂಡ.
ನನ್ನ ತಂಡಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಮೊದಲು ನನ್ನ ತಂಡ ನನ್ನನ್ನು ಮ್ಯಾನಿಕ್ವೀನ್ ಇದ್ದಂತೆ ಎಂದು ಕರೆಯುತ್ತಾರೆ. ಯಾವುದೇ ನಟಿ ಅದ್ಬುತವಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ ಎಂದರೆ ಅದಕ್ಕೆ ಪ್ರಮುಖ ಕಾರಣ ಅವರವರ ತಂಡ. ಇಲ್ಲಿಯವರೆಗೂ ನಾನೇನು ಮಾಡಿದ್ದೇನೊ ಅದಕ್ಕೆ ಅವರು ಕೊಟ್ಟಿರುವ ಪ್ರೀತಿ, ಎಲ್ಲವು ಆಗಬೇಕಿತ್ತು ಆಗಿದೆ. ಹೀಗಾಗಿ ಇದರಲ್ಲಿ ಒತ್ತಡ ಬೀರುವ ವಿಷಯವೇನಿಲ್ಲ. ನ್ಯಾಷನಲ್ ಕ್ರಶ್ ಬಿರುದನ್ನು ಇಲ್ಲಿಯವರೆಗೆ ನಾನು ಮಾಡಿರುವ ಶ್ರಮಕ್ಕೆ ಅಭಿಮಾನಿಗಳಿಂದ ಸಿಕ್ಕಿರುವ ಪ್ರಶಂಸೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ತಮ್ಮನ್ನು ಪ್ರೀತಿಸುವ ಅಭಿಮಾನಿ ವರ್ಗಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ರಶ್ಮಿಕಾ ಮಂದಣ್ಣ