ಪವರ್ ಸ್ಟಾರ್(Powerstar) ಪುನೀತ್ ರಾಜ್ಕುಮಾರ್(Puneeth Rajkumar) ಅವರು ಅಭಿನಯದ ಜೇಮ್ಸ್(James) ಸಿನಿಮಾ ಗುರುವಾರ ದೇಶಾದ್ಯಂತ ಯಶಸ್ವಿಯಾಗಿ ಬಿಡುಗಡೆಗೊಂಡಿತು. ದೇಶದ ಅನ್ಯ ಭಾಷೆಯ ನಟ, ನಟಿಯರೆಲ್ಲರೂ ಅಪ್ಪು ಅವರಿಗೆ ಜನ್ಮದಿನದ ಶುಭಾಶಯದ ಜೊತೆಗೆ ಜೇಮ್ಸ್ ಚಿತ್ರಕ್ಕೆ ಶುಭಕೋರಿ, ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡಿ ಅಭಿಮಾನ ಸಲ್ಲಿಸಿದ್ದಾರೆ. ಆದರೆ, ಕರ್ನಾಟಕದಿಂದ ಹೊರಹೊಮ್ಮಿದ ನಟಿ ರಶ್ಮಿಕಾ ಮಂದಣ್ಣ ಪವರ್ ಸ್ಟಾರ್ ಅವರಿಗೆ ಶುಭಕೋರಿಲ್ಲ. ಇದು ಅಪ್ಪು ಅಭಿಮಾನಿಗಳಿಗೆ ತೀವ್ರ ಕೆರಳಿಸಿದೆ.
ಮೊದಲಿನಿಂದಲೂ ರಶ್ಮಿಕಾ ಮಂದಣ್ಣ ಒಂದಲ್ಲ, ಒಂದು ವಿಷಯದಲ್ಲಿ ಸುದ್ದಿಯಾಗುವುದು ಹೊಸ ಸುದ್ದಿಯೇನಲ್ಲ! ಪ್ರತಿಬಾರಿ ಯಾವುದಾದರೂ ಒಂದು ವಿಚಾರದಲ್ಲಿ ನೇರ ತಪ್ಪು ಅಥವಾ ಪರೋಕ್ಷವಾಗಿ ತಪ್ಪು ಮಾಡಿ ಟ್ರೋಲ್ ಆಗುವ ರಶ್ಮಿಕಾ ಮಂದಣ್ಣ, ಈ ಬಾರಿ ನೇರವಾಗಿ ಗುರಿಯಾಗಿದ್ದಾರೆ. ಕರ್ನಾಟಕ ರಾಜ್ಯದವರಾಗಿ, ಕನ್ನಡ ನಟಿಯಾಗಿ ಕನ್ನಡ ಭಾಷೆ ಮಾತನಾಡಲು ಸರಿಯಾಗಿ ಬರುವುದಿಲ್ಲ, ಮಾತನಾಡುವ ಪ್ರಯತ್ನ ಕೂಡ ಮಾಡದ ನಟಿ ಎಂದು ಸಿನಿ ಅಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.
ತೆಲುಗು ಚಿತ್ರರಂಗಕ್ಕೆ ಆಯಾ ಸಿನಿಮಾ ಪ್ರೊಮೋಷನ್ಗೆ ಹೋದರೆ ತೆಲುಗು ಮಾತನಾಡುತ್ತಾರೆ, ತೆಲುಗಿನಲ್ಲೇ ವ್ಯವಹರಿಸುತ್ತಾರೆ. ಆದರೆ, ಕನ್ನಡ ನೆಲದಲ್ಲಿದ್ದು, ಕನ್ನಡ ಮಾತನಾಡಲು ಹಿಂದೇಟು ಹಾಕಲು ಕಾರಣವೇನು? ಕನ್ನಡ ಮಾತನಾಡಲು ಪ್ರಯತ್ನಿಸದೇ, ಇಂಗ್ಲೀಷ್ ಮಾತನಾಡುತ್ತಾರೆ! ಇದು ಎಷ್ಟು ಸರಿ ಎಂದು ಕನ್ನಡಿಗರು ವಿರೋಧಿಸುತ್ತಾರೆ. ಕೆಲವರು ಇದನ್ನು ಟ್ರೋಲ್ ಮಾಡಿ ಆಕ್ರೋಶ ಹೊರಹಾಕುತ್ತಾರೆ.
ಸದ್ಯ ಅದೇ ರೀತಿ ಈಗ ಮತ್ತೊಮ್ಮೆ ನಡೆದಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನಕ್ಕೆ ಶುಭಾಶಯ ಕೋರದೆ ಇರುವುದು ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಲು ಪ್ರಮುಖ ಕಾರಣ. ಅಪ್ಪು ಅವರ ಅಭಿಮಾನಿಗಳು, ಇಡೀ ಚಿತ್ರರಂಗದವರು ಅಪ್ಪು ಅವರಿಗೆ ಶುಭಾಶಯ ಕೋರಿದ್ದಾರೆ. ಆದರೆ ಇವಳಿಗೇಕೆ ಜಂಭ? ಅಪ್ಪು ಸರ್ ಜೊತೆ ಅಂಜನಿಪುತ್ರ ಚಿತ್ರದಲ್ಲಿ ನಟಿಸಿದ್ದಾರೆ. ಅದು ನೆನಪಿಗೆ ಬರಲಿಲ್ವಾ? ನಮ್ಮ ಕನ್ನಡ ನಟ, ನಟಿ ಮಣಿಯರು ಹಾಗೂ ಪರಭಾಷೆಯ ಕಲಾವಿದರು ಶುಭಕೋರಿದ್ದಾರೆ.
ಆದ್ರೆ, ಕೆಲವು ನಿಯತ್ತಿಲ್ಲದಿರೋ #… ಮಾತ್ರ ಅವರ ಜೊತೆ ನಟಿಸಿ ಕೂಡ ಅವರ ಬಗ್ಗೆ ಒಂದು ಸ್ಟೇಟಸ್ ಕೂಡ ಹಾಕಿ ವಿಶ್ ಮಾಡಿಲ್ಲ ಎಂದು ಟ್ರೋಲ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ರೀತಿಯ ಟ್ರೋಲ್ಗಳು ಹೊಸದೆನ್ನಲ್ಲ, ಈ ರೀತಿ ಹಲವಾರು ಈ ಹಿಂದೆ ಬಂದಿವೆ. ಆದ್ರೆ, ಈ ಟ್ರೋಲ್ ಅಭಿಮಾನಿಗಳಿಂದ ಅತೀವ ಬೇಸರದಿಂದ ಹೊರಬಂದಿರುವುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.